ಅವ್ಯವಹಾರಕ್ಕೆ ಆಸ್ಪದ ಕೊಡಬೇಡಿ
ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದಿಂದ ಮಾಡಿದರೆ ಕ್ರಮ: ರಾಠೋಡ
Team Udayavani, Feb 12, 2020, 3:50 PM IST
ಚಿಂಚೋಳಿ: ತಾಪಂ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅವ್ಯವಹಾರಕ್ಕೆ ಆಸ್ಪದ ಕೊಡಬೇಡಿ ಎಂದು ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ ಹೇಳಿದರು.
ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ ಸಸಿ ನೇಡುವ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ ಆಗುತ್ತಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ತನಿಖೆ ಮಾಡಬೇಕೆಂದು ತಾಪಂ ಸರ್ವ ಸದಸ್ಯರು ಒತ್ತಾಯಿಸಿದರು.
ತಾಪಂ ಸದಸ್ಯರಾದ ಹಣಮಂತರಾವ್ ರಾಜಗಿರಿ, ವೆಂಕಟರೆಡ್ಡಿ ಪಾಟೀಲ ಮಾತನಾಡಿ, ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ ಸಸಿ ಹಚ್ಚುವುದು ಪ್ರತಿ ಸಾಮಾನ್ಯ ಸಭೆಯಲ್ಲಿ ಪ್ರಗತಿ ವರದಿ ಹೇಳಲಾಗುತ್ತಿದೆ. ಇಲಾಖೆಯಲ್ಲಿ ಬೇರೆ ಕಾಮಗಾರಿ ನಡೆಯುತ್ತಿಲ್ಲವೇನು ಎಂದು ಪ್ರಶ್ನಿಸಿದರು.
ಮಿರಿಯಾಣ ತಾಪಂ ಸದಸ್ಯ ಜಗನ್ನಾಥ ಇದಲಾಯಿ ಮಾತನಾಡಿ, ಮಿರಿಯಾಣ ಎಸ್ .ಸಿ ಓಣಿಯಲ್ಲಿ ಜನರಿಗೆ ಕುಡಿಯಲು ನೀರಿನ ಸಮಸ್ಯೆ ಹೆಚ್ಚಾಗಿದೆ. 8 ಲಕ್ಷ ರೂ.ಗಳಲ್ಲಿ ಪೈಪ್ ಲೈನ್ ಕೆಲಸ ಆಗಿದೆ. ಆದರೆ ಪೈಪ್‌ಲೈನ್‌ದಲ್ಲಿ ಒಂದು ಹನಿ ನೀರು ಬಂದಿಲ್ಲ. ಎಲ್ಲ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಆಗ್ರಹಿಸಿದರು.
ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಮಾತನಾಡಿ, ತಾಲೂಕಿನ ಕೆರೋಳಿ, ಕೊಡಂಪಳ್ಳಿ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ ಎಂದು ದೂರಿದರು. ತಾಲೂಕಿನ ಕೊರಡಂಪಳ್ಳಿ ಗ್ರಾಮದಲ್ಲಿ ನಿರ್ಮಿಸಿದ ಆರೋಗ್ಯ ಉಪ ಕೇಂದ್ರ ಉದ್ಘಾಟಿಸುವ ಮೊದಲೇ ಕಟ್ಟಡ ಹಾಳಾಗಿ ಹೋಗಿದೆ.
30 ಲಕ್ಷ ರೂ. ಗಳಲ್ಲಿ ನಿರ್ಮಿಸಿದ ಆರೋಗ್ಯ ಕೇಂದ್ರ ಉಪಯೋಗ ಇಲ್ಲದಂತಾಗಿದೆ. ಟಿಎಚ್‌ಒ ಇದರ ಬಗ್ಗೆ ಗಮನ ಹರಿಸಬೇಕು ಎಂದು ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಮಹಮ್ಮದ ಹುಸೇನ್ ನಾಯಕೋಡಿ, ಪ್ರೇಮಸಿಂಗ್ ಜಾಧವ, ಬಲಭೀಮ ನಾಯಕ, ಬಸವಣ್ಣ ಕುಡಹಳ್ಳಿ, ರಾಜೇಂದ್ರ ಗೋಸುಲ್, ಪಸ್ತಪುರ ತಾಪಂ ಸದಸ್ಯ ಬಸಣಪ್ಪ ಕುಡಹಳ್ಳಿ, ಡಾ| ಧನರಾಜ ಬೊಮ್ಮ, ಎಇಇ ಅಹೆಮದ ಹುಸೇನ್, ಎಇಇ ಬಸವರಾಜ ನೇಕಾರ, ಬಿಸಿಎಂ ಅಧಿಕಾರಿ ಶರಣಬಸಪ್ಪ ಪಾಟೀಲ, ಕೆಎಲ್‌ಎಸಿ ನಿಗಮ ಅ ಧಿಕಾರಿ ನಾಗನಾಥ ಪಾಟೀಲ, ತೋಟಗಾರಿಕೆ ಅಧಿಕಾರಿ ಅಜೀಮುದ್ದೀನ್, ಸಾರಿಗೆ ವ್ಯವಸ್ಥಾಪಕ ಎಂ.ಎಚ್. ಕಲ್ಲೂರ, ಯೋಜನಾಧಿಕಾರಿ ಶಂಕರ ರಾಠೊಡ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.