ಹುಮನಾಬಾದ್: ವಿವಿಧ ಧಾರ್ಮಿಕ ಸ್ಥಳಕ್ಕೆ ಸಿಎಂ ಫೈಜ್ ಮೊಹಮ್ಮದ್ ಭೇಟಿ
Team Udayavani, Sep 26, 2022, 2:43 PM IST
ಹುಮನಾಬಾದ್: ಜೆಡಿಎಸ್ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಇದೀಗ ಹುಮನಾವಾದ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಕಾಲ ಪ್ರವಾಸ ನಡೆಸುತ್ತಿದ್ದೇನೆ ಎಂದು ಜೆಡಿಎಸ್ ಮುಖಂಡ ಸಿಎಂ ಫೈಜ್ ಮೊಹಮ್ಮದ್ ಹೇಳಿದ್ದಾರೆ.
ತಾಲೂಕಿನ ವಿವಿಧೆಡೆ ಭೇಟಿನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು, ಮುಂದೆ ಬರುವ 2023ರ ವಿಧಾನ ಸಭಾ ಚುನಾಚಣೆಯಲ್ಲಿ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಪಕ್ಷದ ಮುಖಂಡರು ತೆಗೆದುಕೊಳ್ಳುವ ತಿರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ, ನಮ್ಮ ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.
ಮಠ-ದೇವಸ್ಥಾನ ಭೇಟಿ: ತಾಲೂಕಿನ ಹುಡಗಿ ಗ್ರಾಮದ ವಿರಕ್ತ ಮಠದ ಚನ್ನಮಲ್ಲ ಶಿವಾಚಾರ್ಯರ ಆಶೀರ್ವಾದ ಪಡೆದ ಸಿಎಂ ಫೈಜ್ ಮೊಹಮ್ಮದ್ ಕೆಲ ಹೊತ್ತು ಕ್ಷೇತ್ರದ ಕುರಿತು ಮಾತುಕತೆ ನಡೆಸಿದರು. ನಂತರ ಹುಮನಾಬಾದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಮಾಣಿಕನಗರ, ರಾಜೇಶ್ವರ ಮಠಗಳಿಗೂ ಭೇಟಿನೀಡಿರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸುರೇಶ ಸೀಗಿ, ನಾರಾಯಣ ರಾಂಪೂರೆ, ಸೈಯಿದ್ ಮಹೊಮ್ಮದ್, ವಿರೇಶ ಸೀಗಿ, ಫರವೇಜ್ ಶಿವಪೂರ್, ರೋಹಿತ್ ಘವಾಳಕರ್ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.