ಸಹಕಾರ ಸಂಘಗಳ ಪುನಶ್ಚೇತನ ಅಗತ್ಯ
Team Udayavani, Nov 15, 2017, 12:51 PM IST
ಬೀದರ: ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಸಹಕಾರ ಸಂಘಗಳಿದ್ದು, ಈ ಪೈಕಿ ಸುಮಾರು 400 ಸಂಘಗಳು ಮಾತ್ರ ಲಾಭದಲ್ಲಿ ಮುನ್ನಡೆದಿವೆ. ನಷ್ಟದಲ್ಲಿರುವ ಸಹಕಾರ ಸಂಘಗಳ ಕುರಿತು ಚಿಂತನ-ಮಂಥನ ನಡೆಸಬೇಕಿದೆ. ಅವುಗಳನ್ನು ಪುನಃಶ್ಚೇತನಗೊಳಿಸಿ ಇನ್ನೂ ಹೆಚ್ಚು ಜನರಿಗೆ ನೆರವಾಗಬೇಕಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ 64ನೇ ಅಖೀಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದೆ. ಸಹಕಾರ ಸಂಘಗಳನ್ನು ಎತ್ತರಕ್ಕೆ ಒಯ್ಯುವಲ್ಲಿ ಆಡಳಿತ ಮಂಡಳಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
30 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರು ದೇಶದಲ್ಲೇ ಮಾದರಿ ಆಡಳಿತ ನೀಡಿದ್ದರು. 1985-86ರಲ್ಲಿ ಅವರು ಅಧ್ಯಕ್ಷರಾಗಿದ್ದ ಡಿಸಿಸಿ ಬ್ಯಾಂಕ್‌ನ ಬಂಡವಾಳ ರೂ. 15.85 ಕೋಟಿ ಇತ್ತು. ಅವರು ಕೊನೆಯುಸಿರು ಎಳೆದಾಗ ಅದು ರೂ. 2,500 ಕೋಟಿಗೆ ತಲುಪಿತು. ಅವರು ಗತಿಸಿ ಎರಡು ವರ್ಷಗಳಾಗಿದ್ದು, ಈಗ ಬ್ಯಾಂಕಿನ ಬಂಡವಾಳ ರೂ. 2,633 ಕೋಟಿ ಇದೆ ಎಂದು ಹೇಳಿದರು.
ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೋಡ ಮಾತನಾಡಿ, ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಹಿಂದೆ ವಾರ್ಷಿಕ ಶೇ.4 ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿತ್ತು. ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ 100 ಕೋಟಿ ರೂ. ಸಾಲ ಒದಗಿಸುವ ಯೋಜನೆ ಇದೆ. ಕೆಲ ಸ್ವಸಹಾಯ ಗುಂಪುಗಳು ಸದಸ್ಯರಿಗೆ ಮಾಸಿಕ ರೂ. 2 ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿರುವ ದೂರುಗಳು ಇವೆ. ಗರಿಷ್ಠ ವಾರ್ಷಿಕ ರೂ. ಶೇ.4ರಷ್ಟು ಬಡ್ಡಿಯನ್ನು ಮಾತ್ರ ಪಡೆಯಬಹುದು ಎಂದು ಹೇಳಿದರು.
ಪತ್ರಕರ್ತ ಮಾರುತಿ ಸೋನಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದ ಮೂಲಕ ಮಾತ್ರ ಜಿಲ್ಲೆಯ ಸರ್ವಾಂಗೀಣ ವಿಕಾಸ ಸಾಧ್ಯವಿದೆ. ಸಹಕಾರ ಕ್ಷೇತ್ರದ ಮೂಲಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಿದರು.
ಸಹಕಾರ ಯೂನಿಯನ್ ಸಿಇಒ ಮಂಜುಳಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ನಿರ್ದೇಶಕರಾದ ಮಹ್ಮದ್ ಸಲಿಮೊದ್ದೀನ್, ವಿಜಯಕುಮಾರ ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ, ಹೊಸಪೇಟೆಯ ಇಫೂಕ
ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಜಿ. ಹಿರೇಮಠ, ಕಲ್ಲಪ್ಪ ಮಾಳಗೆ, ಬ್ಯಾಂಕ್‌ನ ಸಿಇಒ ಮಲ್ಲಿಕಾರ್ಜುನ ಮಹಾಜನ್, ಎಂಡಿ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕರಾದ ವಿಠuಲರೆಡ್ಡಿ ಯಡಮಲ್ಲೆ, ರಾಜಕುಮಾರ ಆಣದೂರೆ, ಪಂಡರಿರೆಡ್ಡಿ, ಅನಿಲ ಪಾಟೀಲ, ಸದಾಶಿವ ಪಾಟೀಲ ಮುಂತಾದವರು ಇದ್ದರು. ಬಸವರಾಜ ಕಲ್ಯಾಣ ನಿರೂಪಿಸಿದರು.
ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಸಪ್ತಾಹ ಅಂಗವಾಗಿ ನ.20ರ ವರೆಗೆ ವಿವಿಧ ಕಾರ್ಯಕ್ರಮ
ನಡೆಯಲಿವೆ ಮೊದಲು ಬ್ಯಾಂಕ್‌ನಿಂದ ರೂ. 8ರಿಂದ 9 ಕೋಟಿ ಸಾಲ ಕೊಡಲಾಗುತ್ತಿತ್ತು. ಇದೀಗ 1,938 ಕೋಟಿ ಸಾಲ ವಿತರಿಸಲಾಗಿದೆ. ಸಾಲ ನೀಡಿ ಜನರನ್ನು ಸಾಲಗಾರರನ್ನಾಗಿ ಮಾಡುವುದು ಬ್ಯಾಂಕ್ ಉದ್ದೇಶ ಅಲ್ಲ. ಸಕಾಲಕ್ಕೆ ನೆರವಾಗಿ ಅವರನ್ನು ಸಶಕ್ತಗೊಳಿಸುವುದೇ ಬ್ಯಾಂಕ್‌ನ ಧ್ಯೇಯವಾಗಿದೆ. ಹಿಂದೆ 75,000 ರೂ. ಬಂಡವಾಳ ಹೊಂದಿದ್ದ ಜಿಲ್ಲೆಯ ಸ್ವಸಹಾಯ ಗುಂಪುಗಳು ಈಗ ರೂ. 626 ಕೋಟಿ ಬಂಡವಾಳ ಹೊಂದಿವೆ. ರೂ. 107 ಕೋಟಿ ಠೇವಣಿ ಹೊಂದಿವೆ. ಇಂಥ ಕ್ರಾಂತಿ ದೇಶದ ಬೇರೆಲ್ಲೂ ಕಾಣಸಿಗದು. ಉಮಾಕಾಂತ ನಾಗಮಾರಪಳ್ಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.