ಬೇಡಿಕೆ ಈಡೇರಿಕೆಗೆ ಒಕ್ಕೂಟದ ಮನವಿ
Team Udayavani, Nov 13, 2021, 3:30 PM IST
ಸಿಂಧನೂರು: ಸಮರ್ಪಕ ಅನುದಾನ ಬಿಡುಗಡೆ, ಕಡ್ಡಾಯ ಸಾಮಾನ್ಯ ಸಭೆ, ಬಾಕಿ ಗೌರವ ಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದಿಂದ ಶುಕ್ರವಾರ ತಾಪಂ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮಹಾಂತೇಶ ಹಿರೇಗೌಡ್ರು ಮಾತನಾಡಿ, ಜನರ ಆಶೋತ್ತರ ಈಡೇರಿಸಲು ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಅಗತ್ಯ ಮಾಹಿತಿ ಒದಗಿಸಬೇಕು. ಎಲ್ಲ ಗ್ರಾಪಂ ಅಧ್ಯಕ್ಷರು, ಪಿಡಿಒ, ಉಪಾಧ್ಯಕ್ಷರನ್ನು ಒಳಗೊಂಡಂತೆ ಸಮಗ್ರವಾಗಿ ಚರ್ಚಿಸಡಲು ಸಭೆ ಕರೆಯಬೇಕು. 15ನೇ ಹಣಕಾಸು ಕ್ರಿಯಾಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕು. ನರೇಗಾದಡಿ ನಿರ್ವಹಿಸಿದ ಕೆಲಸಗಳಿಗೆ ಸಂಬಂಧಿಸಿ ಬಾಕಿ ಇರುವ ಬಿಒಸಿ ಬೇಗ ಬಿಡುಗಡೆ ಮಾಡಬೇಕು. ಗ್ರಾಪಂಗಳಿಗೆ ಬಿಡುಗಡೆಯಾಗಬೇಕಿದ್ದ 14 ಮತ್ತು 15ನೇ ಹಣಕಾಸು ಯೋಜನೆ ಮೊತ್ತ ಬಾಕಿಯಿದೆ. ಇದರಿಂದ ಅಗತ್ಯ ಕೆಲಸಗಳಿಗೆ ತೊಂದರೆಯಾಗಿದೆ. ಪಿಡಿಒಗಳು ಸಮರ್ಪಕ ಕೆಲಸ ನಿರ್ವಹಿಸದ್ದರಿಂದ ಹಲವೆಡೆ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸಬೇಕು. ಪಂಚಾಯತಿಗಳಲ್ಲಿ ಕಡ್ಡಾಯವಾಗಿ ತಿಂಗಳಿಗೊಮ್ಮೆ ಗ್ರಾಮಸಭೆ ನಡೆಸಬೇಕು. ಪಂಚಾಯತ್ ರಾಜ್ ಕಾಯ್ದೆ ಅನುಸರಿಸಿ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ, ಮುಖಂಡರಾದ ಅಶೋಕ ನಲ್ಲಾ, ಈಶಪ್ಪಗೌಡ, ರವಿ ರಮಾತ್ನಾಳ, ಶ್ರೀಧರಗೌಡ, ಪಿ. ಶ್ರೀನಿವಾಸಲು, ನಿರುಪಾದಿ ಸಾಸಲಮರಿ, ದಶರಥರೆಡ್ಡಿ ಚನ್ನಳ್ಳಿ, ವಿರುಪಣ್ಣ ಮಾಡಸಿರವಾರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.