ಅಂಗವಿಕಲರ ಮೌಲ್ಯಮಾಪನ ಶಿಬಿರ ಆರಂಭ
ಜಿಲ್ಲೆಯ ಅಂಗವಿಕಲರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
Team Udayavani, Sep 18, 2021, 5:38 PM IST
ಬೀದರ: ಅಂಗವಿಕಲರಿಗೆ ಸಾಧನ, ಸಲಕರಣೆ ವಿತರಣೆಗಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ್ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್‌ನ ದಕ್ಷಿಣ ಪ್ರಾದೇಶಿಕ ಕೇಂದ್ರದಿಂದ ಮೂರು ದಿನಗಳ ಮೌಲ್ಯಮಾಪನ ಶಿಬಿರ ನಗರದ ಶಹಾಪುರ ಗೇಟ್‌ನ ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡಿತು.
ಶಾಸಕ ರಹೀಂಖಾನ್ ಚಾಲನೆ ನೀಡಿ ಮಾತನಾಡಿ, ಅಂಗವಿಕಲರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ವತಿಯಿಂದ
ಅಗತ್ಯ ಸಾಧನ, ಸಕಲರಣೆಗಳನ್ನು ದೊರಕಿಸಿಕೊಡಲು ಶಾಹೀನ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ಸಂಘಟಿಸಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಅಂಗವಿಕಲರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ|ಅಬ್ದುಲ್‌ಖದೀರ್ ಮಾತನಾಡಿ, ಹೈದರಾಬಾದ್ ಹಾಗೂ ದೆಹಲಿಯ ನಾಲ್ವರು ಪರಿಣಿತ ವೈದ್ಯರು ಶಿಬಿರದಲ್ಲಿ ಅಂಗವಿಕಲರ ಮಾಲ್ಯಮಾಪನ ಮಾಡಲಿದ್ದಾರೆ. ಶಿಬಿರ 19ರವರೆಗೆ ನಡೆಯಲಿದೆ. ಮೌಲ್ಯಮಾಪನಕ್ಕೆ ಒಳಗಾದವರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯು ಬರುವ ದಿನಗಳಲ್ಲಿ ತ್ರಿಚಕ್ರ ಸೈಕಲ್, ಮಡಚುವ ಗಾಲಿ ಕುರ್ಚಿ, ಸಹಾಯಕ ಊರುಗೋಲು, ಮೊಣಕೈಊರುಗೋಲು, ಊರುಗೋಲು (ದೊಡ x ಬಗೆಯ), ಮಡಚುವ ವಾಕರ್, ರೊಲೇಟರ್(ಬಿ), ಸಿ.ಪಿ. ಕುರ್ಚಿ, ಎಂ.ಆರ್. ಕಿಟ್, ಸ್ಮಾರ್ಟ್ ಕೇನ್ (¨ ದೃಷ್ಟಿಹೀನ), ಎಡಿಎಲ್ ಕಿಟ್ ಹಾಗೂ ಕುಷ್ಠರೋಗ ಬಾಧಿತರಿಗೆ ಕೃತಕ ಅಂಗ ಹಾಗೂ ಕ್ಯಾಲಿಪರ್ ಸೇರಿ 12 ವಿಧದ ಸಾಧನ, ಸಲಕರಣೆಗಳನ್ನು ವಿತರಿಸಲಿದೆ ಎಂದು ಹೇಳಿದರು.
ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ರೋಟರಿ ಕಲ್ಯಾಣ ಝೋನ್
ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಡಾ| ಮಕ್ಸೂದ್ ಚಂದಾ, ಬಾಬು ರೆಡ್ಡಿ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.