ಸಂಘಟಿತ ಹೋರಾಟದಿಂದ ಸಮುದಾಯ ಅಭಿವೃದ್ಧಿ: ಶಾಮರಾವ್
Team Udayavani, Aug 26, 2018, 12:44 PM IST
ಹುಮನಾಬಾದ: ಹಡಪದ ಅಪ್ಪಣ್ಣನವರ ಜಯಂತಿಯನ್ನು ಸರ್ಕಾರ ಸ್ವ ಇಚ್ಚೆಯಿಂದ ಆಚರಿಸುತ್ತಿಸುತ್ತಿಲ್ಲ. ಹಡಪದ ಅಪ್ಪಣ ಸವಿತಾ ಸಮಾಜ ಎರಡು ದಶಕದಿಂದ ನಡೆಸಿದ ನಿರಂತರ ಹೋರಾಟದ ಫಲವಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಾಮರಾವ್ ಮೋರ್ಗಿಕರ್ ಹೇಳಿದರು.
ಚಿಟಗುಪ್ಪದ ಈಶ್ವರ ದೇವಸ್ಥಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ 884ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟಿತ ಹೋರಾಟದಿಂದ ಮಾತ್ರ ಸಮುದಾಯ ಅಭಿವೃದ್ಧಿ ಸಾಧ್ಯ. ಸರ್ಕಾರ ನಮ್ಮ ಸಮುದಾಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸರ್ಕಾರದಿಂದ ಜಯಂತಿ ಆಚರಿಸಲು ಎರಡು ದಶಕ ಬೇಕಾಯಿತು. ಆದರೇನಮ್ಮ ಸಮಾಜದವರು ವೈಯಕ್ತಿಕ ಭಿನ್ನಮತ, ಒಣ ಪ್ರತಿಷ್ಟೆ ನೆಪದಲ್ಲಿ ಕಾಲಹರಣ ಮಾಡದೇ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ಗೌರಮ್ಮ ವರನಾಳ್ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪುರಸಭೆಯಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು. ಸಂಘಟನೆ ಕೊರತೆ ಕಾರಣದಿಂದ ಪ್ರತಿಯೊಂದು ಸಮುದಾಯಗಳು
ಸರ್ಕಾರಿ ಸೌಲಭ್ಯದಿಂದ ವಂಚಿತವಾಗುತ್ತಿರುವುದು ನಿಜ. ಅದೇ ಕಾರಣಕ್ಕಾಗಿ ಸವಿತಾ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ, ಸರ್ಕಾರಿ ಹುದ್ದೆ ಕೊಡಿಸಲು ಯತ್ನಿಸಬೇಕೆಂದು ಸಲಹೆ ನೀಡಿದರು.
ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಶಂಕರ ಸೇಡೋಳ್ ಮಾತನಾಡಿ, ಚಿಟಗುಪ್ಪದ ಸವಿತಾ ಸಮಾಜದಲ್ಲಿನ ಒಗ್ಗಟ್ಟು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಇತರ ತಾಲೂಕಿನ ಮುಖಂಡರು ಇವರನ್ನು ಅನುಸರಣೆ ಮಾಡಬೇಕು ಎಂದರು. ಶ್ರೀಗುರು ಅಯ್ಯಪ್ಪ ಸ್ವಾಮಿ ಪದವಿ
ಕಾಲೇಜಿನ ಪ್ರಾ ಚಾರ್ಯ ಡಾ| ಎನ್.ಎಸ್.ಮಲಶಟ್ಟಿ ವಿಶೇಷ ಉಪನ್ಯಾಸ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಪ್ರಭು ಹಡಪದ, ರಮೇಶ ಜಿ.ಕಲ್ಯಾಣಿ, ಅನೀಲಕುಮಾರ ಹಡಪದ, ಸುನೀಲ ಹಡಪದ ಚಿಂಚೋಳಿ ಅರ್ಮಿಳಾ ಧನವಾಡಕರ್, ಸವಿತಾ ಸಮಾಜದ ಪದಾಧಿಕಾರಿಗಳಾದ ಕಿರಣ ಧನವಾಡಕರ್, ರಾಜಕುಮಾರ ಮಾನೆ, ಸಂಜೀವಕುಮಾರ ಮಾನೆ, ಮಲ್ಲಿಕಾರ್ಜುನ ಕಟ್ಟಿಮನಿ, ಸಿಕ್ರೇಶ್ವರ ಹಡಪದ, ರಾಮಚಂದ್ರ ಹಡಪದ ಮೊದಲಾದವರು ಇದ್ದರು. ಶ್ವೇತಾ ಪ್ರಾರ್ಥಿಸಿದರು. ಆದರ್ಶ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.