ಶಿರಸ್ತೇದಾರ್ ಮೇಲಿನ ಹಲ್ಲೆಗೆ ಖಂಡನೆ
Team Udayavani, Jun 25, 2022, 1:24 PM IST
ಹುಣಸಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ್ ಕಲ್ಲಪ್ಪ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ವಾಲ್ಮೀಕಿ ಸಮಾಜದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಮಾತನಾಡಿ, ತಾಲೂಕು ದಂಡಾಧಿಕಾರಿ ಸಮ್ಮುಖದಲ್ಲಿಯೇ ಶಿರಸ್ತೇದಾರ್ ಕಲ್ಲಪ್ಪ ಜಂಜಿಗಡ್ಡಿಯವರ ಮೇಲೆ ಆಹಾರ ನಿರೀಕ್ಷಕ ಗವಿಸಿದ್ಧಯ್ಯಸ್ವಾಮಿ ಹಾಗೂ ಕಂದಾಯ ನಿರೀಕ್ಷಕ ಬಸವರಾಜ್ ಬಿರಾದಾರ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದು ಅಮಾನವೀಯ ಕೃತ್ಯವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ಇಬ್ಬರು ಆರೋಪಿಗಳನ್ನು ಅಮಾನತುಗೊಳಿಸಿ 24 ಗಂಟೆಯೊಳಗಾಗಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಅಶೋಕಕುಮಾರ್ ಸುರಪುರಕರ್ ಹಾಗೂ ಸಿಪಿಐ ದೌಲತ್ ಎನ್. ಕೆ. ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಾಲ್ಮೀಕಿನಾಯಕ ಸಂಘದ ಮುಖಂಡರಾದ ವೀರಭದ್ರ ಅಂತರಗಂಗಿ, ಸಿದ್ಧನಗೌಡ ಪಾಟೀಲ್, ರಮೇಶ ಬಿರಾದಾರ, ನಂದಣ್ಣ ದೊರೆ ಶ್ರೀನಿವಾಸಪುರ, ಶಂಕರನಾಯಕ, ರಮೇಶ ಕೋಳೂರ, ವೀರನಗೌಡ ಕೋಟೆಗುಡ್ಡ, ಬಸವಂತಪ್ಪ ಗುಳಬಾಳ್, ಭೀಮನಗೌಡ ತೀರ್ಥ, ಭೀಮನಗೌಡ ಬೈಲಾಪುರ, ಭೀಮರಾಯ ಶ್ರೀನಿವಾಸಪುರ, ಮಹೇಶ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.