![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 10, 2022, 1:33 PM IST
ಮುದಗಲ್ಲ: ಪುರಾತನ ಗತವೈಭವ ಸಾರುವ ಐತಿಹಾಸಿಕ ಮುದಗಲ್ಲನ ಎರಡು ಸುತ್ತಿನ ಕೋಟೆ ರಕ್ಷಣೆಗಾಗಿ ಸಾರ್ವಜನಿಕರು ಸ್ವ-ಇಚ್ಛೆಯಿಂದ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಲು ಸರ್ವರ ಸಹಕಾರ ಅಗತ್ಯವಾಗಿದೆ. ಸ್ಥಿತಿವಂತರು ತನು-ಮನ-ಧನದ ಸಹಕಾರ ನೀಡುವಂತೆ ಹರ್ಷ ಮುತಾಲಿಕ್ ಅಭಿಪ್ರಾಯಪಟ್ಟರು.
ಪಟ್ಟಣದ ವಿಜಯ ಮಹಾಂತೇಶ್ವರ ಫಿಲ್ಲಿಂಗ್ ಸ್ಟೇಸನ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಕೋಟೆ ಸ್ವತ್ಛತಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇತಿಹಾಸ ಕುರುಹುಗಳನ್ನು ಹೊಂದಿದ ಮುದಗಲ್ಲನ ಎರಡು ಸುತ್ತಿನ ಕೋಟೆಗೆ ಕಾಯಕಲ್ಪ ನೀಡುವಲ್ಲಿ ಸ್ಥಳೀಯರ ಪಾತ್ರ ಹಿರಿದಾಗಿದ್ದು, ಮುಂಬರುವ ದಿನಗಳಲ್ಲಿ ಕೋಟೆ ಉತ್ಸವದ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಲ್ಲಿರುವ ವಿಚಾರಕ್ಕೆ ನಾವೆಲ್ಲಾ ಆಗ್ರಹಿಸೋಣ ಎಂದು ಕರೆ ನೀಡಿದರು.
ಕೋಟೆಯಲ್ಲಿ 24 ಮತ್ತು ಹೊರ ಭಾಗದಲ್ಲಿ 34 ಚೌಕಾರದ ಕೊತ್ತಗಳಿವೆ. ಎರಡು ಸುಭದ್ರ ಭಾಗಿಲು, 30ಕ್ಕೂ ಹೆಚ್ಚು ಶೀಲಾ ಶಾಸನಗಳಿವೆ. ಕೋಟೆ ಸ್ವಚ್ಛತಾ ಅಭಿಯಾನಕ್ಕೆ ಫೆ.12ರಂದು ಲಿಂಗಸುಗೂರು ಉಪವಿಭಾಗಾಧಿಕಾರಿ ರಾಹುಲ್ ಸಂಕನೂರ್ ಚಾಲನೆ ನೀಡಲಿದ್ದು, ಮೂರು ದಿನಗಳ ಕಾಲ ಸಾಂಕೇತಿಕವಾಗಿ ಸ್ವತ್ಛತಾ ಅಭಿಯಾನ ನಡೆಸಲಾಗುವುದು. ತಂಡೋಪ-ತಂಡವಾಗಿ ಪಟ್ಟಣದ ನಾಗರಿಕರು, ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಸಾಹಿತ್ಯಾಸಕ್ತರು ಈ ಅಭಿಯಾನದಲ್ಲಿ ಭಾಗಿಯಾಗುವಂತೆ ಪುರಸಭೆ ಮಾಜಿ ಅಧ್ಯಕ್ಷ ಅಶೊಕಗೌಡ ಪಾಟೀಲ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ ಗುರುಬಸಪ್ಪ ಸಜ್ಜನ್, ಕರವೇ ಘಟಕಾಧ್ಯಕ್ಷ ಎಸ್.ಎ. ನಯೀಮ್, ಶರಣಪ್ಪ ಕಟ್ಟಿಮನಿ, ಸಾಕ್ ಅಲಿ, ನ್ಯಾಮತುಲ್ಲಾಖಾದ್ರಿ, ಅನಿಲ್ ಕುಮಾರ್ ಬುಶೆಟ್ಟಿ ಸೇರಿದಂತೆ ಮೌನೇಶ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.