ಕೊರೊನಾದಿಂದ ಮಂಕಾದ ಓಕುಳಿ

Team Udayavani, Mar 10, 2020, 11:53 AM IST

bidar-tdy-1

ಸಾಂದರ್ಭಿಕ ಚಿತ್ರ

ಬೀದರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಪಕ್ಕದ ತೆಲಂಗಾಣಕ್ಕೆ ಪ್ರವೇಶದಿಂದ ಗಡಿ ಜಿಲ್ಲೆ ಬೀದರನಲ್ಲಿ ರೋಗದ ಆತಂಕ ಹೆಚ್ಚಿದ್ದು, ಇದರ ಪರಿಣಾಮ ಬಣ್ಣದೋಕುಳಿ ಮೇಲೂ ಬಿದ್ದಿದೆ. ಇದರಿಂದ ನಗರದಲ್ಲಿ ಈ ಬಾರಿಯ ಹೋಳಿ ಆಚರಣೆಯು “ರಂಗು’ ಕಳೆದುಕೊಂಡಿದೆ. ಇತ್ತ ಬಂಡವಾಳ ಹಾಕಿರುವ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಭಾರತೀಯ ಹಬ್ಬಗಳಲ್ಲಿ ಹೋಳಿ ಆಚರಣೆ ವಿಭಿನ್ನ. ಮಹಾಮರಿ ಕೊರೊನಾ ಸೋಂಕು ಹೋಳಿಯನ್ನೂ ಆವರಿಸಿಕೊಂಡಿದೆ. ಜಿಲ್ಲೆಯ ಮೂವರಲ್ಲಿ ವೈರಸ್‌ನ ಶಂಕೆ ವ್ಯಕ್ತವಾಗಿತ್ತಾದರೂ ಪರೀಕ್ಷೆ ಫಲಿತಾಂಶದಲ್ಲಿ ನೆಗೆಟಿವ್‌ ಬಂದಿದೆ. ಆದರೂ ವೈರಸ್‌ನ ಆತಂಕ ಮಾತ್ರ ದೂರವಾಗಿಲ್ಲ.

ಹೋಳಿ ವೇಳೆ ಬಣ್ಣ ಎರಚಾಟದಿಂದ ಕೊರೊನಾ ವೈರಸ್‌ ಹರಡಿ, ಪ್ರಾಣಕ್ಕೆ ಮಾರಕವಾಗಲಿದೆ ಎಂಬ ಭೀತಿ ಹೆಚ್ಚಳದಿಂದ ಹಬ್ಬ ಆಚರಿಸಲು ಬಹಳ ಜನರು ಮುಂದೆ ಬರುತ್ತಿಲ್ಲ. ಹಬ್ಬ ಸರಳವಾಗಿ ಆಚರಣೆ ಆದರೆ ಉತ್ತಮ ಎಂಬ ಸರ್ಕಾರ, ಆರೋಗ್ಯ ಇಲಾಖೆಯ ಸಲಹೆ ಮತ್ತು ಸಾಮಾಜಿ ಜಾಲತಾಣದಲ್ಲಿನ ಸಂದೇಶಗಳಿಂದ ಹೋಳಿ ಆಚರಣೆಗೆ ಬ್ರೇಕ್‌ ಬೀಳುವಂತೆ ಮಾಡಿದೆ. ಇದರಿಂದ ಬಣ್ಣದ ಅಂಗಡಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ವ್ಯಾಪಾರ ಕುಸಿದಿದ್ದು, ನಗರದಲ್ಲಿ ಓಕುಳಿ ಆಚರಣೆಯ ಚಿತ್ರಣವೇ ಮಾಯವಾಗಿದೆ.

ಕೊರೊನಾ ಭೀತಿ ನಡುವೆಯೂ ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳು, ಬಗೆ ಬಗೆಯ ಪಿಚಕಾರಿಗಳು ಬಂದಿವೆ. ನಗರದ ಅಂಬೇಡ್ಕರ್‌ ವೃತ್ತ, ಮಡಿವಾಳ ವೃತ್ತ, ಮೋಹನ ಮಾರ್ಕೆಟ್‌, ಓಲ್ಡ್‌ ಸಿಟಿ, ಗುಂಪಾ, ಕೆಇಬಿ ರಸ್ತೆ ಸೇರಿದಂತೆ ಹಲವೆಡೆ ಮಳಿಗೆಗಳು ತಲೆ ಎತ್ತಿವೆ. 10ರಿಂದ 100 ರೂ. ವರೆಗೆ ಬಣ್ಣದ ಪ್ಯಾಕೆಟ್‌ ಗಳು, 20 ರಿಂದ 800 ರೂ. ವರೆಗೆ ಪಿಚಕಾರಿಗಳು ಮಾರಾಟಕ್ಕಿವೆ. ಆದರೆ, ಮಳಿಗೆಗಳಲ್ಲಿ ಖರೀದಿ ಇಲ್ಲದೇ ಬಿಕೋ ಎನ್ನುತ್ತಿದ್ದವು.

ಕೊರೊನಾ ಆವರಿಸಿರುವ ಚೀನಾದಿಂದ ಹಬ್ಬಕ್ಕೆ ಬಣ್ಣ ಮತ್ತು ಪಿಚಕಾರಿಗಳು ಆಮದು ಆಗುತ್ತವೆ ಮತ್ತು ಇದರಿಂದ ರೋಗ ಹರಡಲಿದೆ ಎಂಬ ವದಂತಿಯಿಂದ ಹೋಳಿಯಾಟಕ್ಕೆ ಬಹಳ ಜನ ಹಿಂಜರಿಯುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಜನ ಸಮೂಹದಲ್ಲಿ ಸೇರದೆ ಔಪಚಾರಿಕವಾಗಿ ಮನೆಯಲ್ಲೇ ಹಬ್ಬ ಆಚರಣೆಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಣ್ಣ, ಪಿಚಕಾರಿಗಳ ಮಾರಾಟ ಅರ್ಧದಷ್ಟು ಕುಸಿದಿದೆ. ಬಂಡವಾಳ ಹಾಕಿರುವ ವ್ಯಾಪಾರಿಗಳು ಖರೀದಿ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಣ್ಣದಾಟದಂದು ನಗರದ ಗುರುದ್ವಾರ ಪರಿಸರದಲ್ಲಿ ಪ್ರತಿ ವರ್ಷ ಯುವಕರ ತಂಡದಿಂದ ಸಂಗೀತೋತ್ಸವ ಜತೆಗೆ ಹೋಳಿ ಆಚರಣೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಕೊರೊನಾ ವೈರಸ್‌ನ ಭೀತಿಯ ಪರಿಣಾಮ ಆಚರಣೆಯನ್ನು ಕೈ ಬಿಡಲಾಗಿದೆ. ಬಣ್ಣದ ಬದಲು ಕುಂಕುಮ- ಅರಶಿಣ ಬಳಸಿ ಹಬ್ಬ ಆಚರಿಸಿ ಎಂಬ ಸಲಹೆಗಳು ವ್ಯಕ್ತವಾಗಿವೆ.

ಬೀದರ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಆತಂಕ ಬೇಡ. ಆದರೂ ಹೋಳಿ ಹಬ್ಬ ಈ ಬಾರಿ ಸರಳ, ಆರೋಗ್ಯಕರ ಆಚರಣೆ ಆಗಲಿ. ಕೆಮಿಕಲ್‌ ಯುಕ್ತ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕು. ಸಣ್ಣ ಪ್ರಮಾಣದಲ್ಲಿ ಬಳಸಿದರೆ ಉತ್ತಮ. ಜನನಿಬಿಡ ಪ್ರದೇಶದಲ್ಲಿ ಸೇರಬಾರದು. ಹ್ಯಾಂಡ್‌ ಶೇಕ್‌ ಮಾಡಬಾರದು. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. -ಡಾ| ವಿ.ಜಿ. ರೆಡ್ಡಿ, ಡಿಎಚ್‌ಒ, ಬೀದರ

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.