ಸಾಮಾಜಿಕ ಅಂತರ ಪಾಲನೆ ನಿಯಮ ರೂಢಿಸಿಕೊಳ್ಳಿ
Team Udayavani, Nov 16, 2020, 6:49 PM IST
ಬೀದರ: ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಮೇಲಿಂದ ಮೇಲೆ ತಿಳಿಸುತ್ತಿದ್ದರೂ ಕೆಲವು ಜನರು ಮಾಸ್ಕ್ ಧರಿಸುವುದಾಗಲಿ, ಸಾಮಾಜಿಕ ಅಂತರ ಪಾಲನೆ ನಿಯಮಗಳನ್ನು ರೂಢಿಸಿಕೊಳ್ಳುತ್ತಿಲ್ಲ.
ಹೀಗಾಗಿ ಜನಜಾಗೃತಿ ಮೂಡಿಸುವ ವಾಹನಗಳು ಖುದ್ದು ಆಯಾ ಗ್ರಾಮಗಳಿಗೆ ತೆರಳಿ, ಜನರ ಮನೆಬಾಗಿಲ ಮುಂದೆ ನಿಂತು ಜನಜಾಗೃತಿ ಮೂಡಿಸಲು ವಾತಾ ಇಲಾಖೆಯ ಮೂಲಕ ಜನಜಾಗೃತಿ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಕೋವಿಡ್-19 ಜಾಗೃತಿ ಕುರಿತಂತೆ ಪ್ರಚಾರ ಕಾರ್ಯ ನಡೆಸಲಿರುವ ಬೃಹತ್ ಎಲ್‌ಇಡಿ ಪರದೆ ಹೊಂದಿರುವ ವಾಹನಗಳಿಗೆ ಶನಿವಾರ ಔರಾದ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿ ಹಸಿರು ನಿಶಾನೆ ತೋರಿದರು.
ಬೀದಿ ನಾಟಕಗಳ ಕಲಾ ತಂಡಗಳ ಮೂಲಕ ವಾರ್ತಾ ಇಲಾಖೆಯು ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನರು ಈಗಾಗಲೇ ನೋಡಿದ್ದಾರೆ. ಆದರೆ, ಈಗ ಕೋವಿಡ್-19 ಹಿನ್ನೆಲೆಯಲ್ಲಿ ಕಲಾವಿದರ ಆರೋಗ್ಯದ ಹಿತದೃಷ್ಟಿಯಿಂದ ಎಲ್‌ಇಡಿ ವಾಹನಗಳ ಮೂಲಕ ಕೋವಿಡ್-19ರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪಿಡಿಒಗಳಿಗೆ ಸೂಚನೆ: ಈ ಎಲ್‌ಇಡಿ ಪರದೆಯ ವಾಹನವು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಸಂಬಂಧಿಸಿದ ಪಿಡಿಒಗಳು ಈ ಬಗ್ಗೆ ಗಮನ ಹರಿಸಿ, ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೋವಿಡ್-19 ಮುಂಜಾಗ್ರತಾ ಕ್ರಮದ ಸಂದೇಶ ತಲುಪುವ ಹಾಗೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿದರು. ಜಿ.ಪಂ ಸದಸ್ಯ ಮಾರುತಿ ಚವ್ಹಾಣ, ಮುಖಂಡರಾದ ಬಸವರಾಜ ಸ್ವಾಮಿ, ಚಂದ್ರಕಾಂತ ಪಾಂಚಾಳ, ಮಾರುತಿ ಗುಳೆ, ಸಂಜೀವ ಪಾಂಚಾಳ ಹಾಗೂ ಇತರರು ಇದ್ದರು. ಶನಿವಾರ ವಾಹನಗಳು ಬೀದರ ತಾಲೂಕಿನ ಅಷ್ಟೂರ್, ಮಾಳೇಗಾಂವ್, ಚಿಲ್ಲರ್ಗಿ, ಚೀಮಕೋಡ್ ಮತ್ತು ಗಾದಗಿ ಗ್ರಾಮಗಳಲ್ಲಿ ಮತ್ತು ಔರಾದ ತಾಲೂಕಿನ ಸಂಗಮ, ಬಳತ್ (ಬಿ), ಬಳತ್ (ಕೆ), ಚಾಂದೋರಿ ಮತ್ತು ಹಾಲಹಳ್ಳಿ ಗ್ರಾಮಗಳಲ್ಲಿ ಸಂಚಾರ ನಡೆಸಿ, ಜನಜಾಗೃತಿ ಮೂಡಿಸಿದವು.
ರವಿವಾರ ಕಾರ್ಯಕ್ರಮ ಎಲ್ಲೆಲ್ಲೆ?: ಎಲ್‌ಇಡಿ ಪರದೆಯ ವಾಹನಗಳು ನ. 15 ರಂದು ಬೀದರ ತಾಲೂಕಿನ ಚಿಕ್ಕಪೇಟ್, ಮರಖಲ್, ಜನವಾಡ, ಚಾಂಬೋಳ ಮತ್ತು ಹಳೆಂಬರ್ ಗ್ರಾಮಗಳಲ್ಲಿ ಹಾಗೂ ಔರಾದ ತಾಲೂಕಿನಲ್ಲಿ ಠಾಣಾಕುಶನೂರ, ನಿಡೋದಾ, ರಕ್ಷಾಳ (ಬಿ), ರಕ್ಷಾಳ (ಕೆ) ಮತ್ತು ಹೆಡಗಾಪುರ ಗ್ರಾಮಗಳಲ್ಲಿ ಸಂಚಾರ ನಡೆಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.