ಬೀದರಗೆ ಬೆಂಬಿಡದ ಮಹಾ ಕಂಟಕ
Team Udayavani, Jun 3, 2020, 6:15 AM IST
ಬೀದರ: ಬಿಸಿಲು ನಾಡು ಬೀದರಗೆ ಮಹಾರಾಷ್ಟ್ರದ ಕಂಟಕ ಬೆಂಬಿಡದೇ ಕಾಡುತ್ತಿದ್ದು, ಮಂಗಳವಾರ ಜಿಲ್ಲೆಯಲ್ಲಿ ಮತ್ತೆ ಬಾಲಕಿ ಸೇರಿದಂತೆ 10 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.
ಹೊಸ 10 ಸೋಂಕಿತರಲ್ಲಿ 9 ಜನ ಬಸವಕಲ್ಯಾಣ ತಾಲೂಕಿನವರಾಗಿದ್ದರೆ, ಇನ್ನೊಬ್ಬರು ಬೀದರ ತಾಲೂಕಿಗೆ ಸೇರಿದ್ದಾರೆ. ಎಲ್ಲರೂ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದಾರೆ. ಒಟ್ಟು ಜನರಲ್ಲಿ 7 ಜನ ಪುರುಷರಿದ್ದರೆ 3 ಮಂದಿ ಮಹಿಳೆಯರಿದ್ದಾರೆ. ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮದ 4, ಧಾಮುರಿ ಮತ್ತು ರಾಜೋಳ ಗ್ರಾಮದ ತಲಾ 2, ರಾಜೋಳ ಗ್ರಾಮದ 1 ಹಾಗೂ ಬೀದರ ತಾಲೂಕು ಜನವಾಡಾ ಗ್ರಾಮದ ಒಬ್ಬರು ಇದ್ದಾರೆ.
15 ವರ್ಷದ ಬಾಲಕಿ ಪಿ- 3409, 53 ವರ್ಷದ ವ್ಯಕ್ತಿ ಪಿ- 3426, 31 ವರ್ಷದ ವ್ಯಕ್ತಿ ಪಿ- 3427, 29 ವರ್ಷದ ಯುವತಿ ಪಿ- 3428, 35 ವರ್ಷದ ವ್ಯಕ್ತಿ ಪಿ- 3429, 44 ವರ್ಷದ ವ್ಯಕ್ತಿ ಪಿ- 3430, 38 ವರ್ಷದ ವ್ಯಕ್ತಿ ಪಿ- 3431, 32 ವರ್ಷದ ಮಹಿಳೆ ಪಿ-3432, 26 ವರ್ಷದ ಯುವಕ ಪಿ- 3233 ಮತ್ತು 20 ವರ್ಷದ ಯುವಕ ಪಿ- 3434 ಸಂಖ್ಯೆಯ ರೋಗಿಗಳಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಿಡಿಯಾ ಬುಲೇಟಿನ್ ದೃಢಪಡಿಸಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 175 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. 5 ಜನ ಸಾವನ್ನಪ್ಪಿದ್ದರೆ, 41 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು, ಇನ್ನೂ 125 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.