ಸಾಂಸ್ಕೃತಿಕ ವೈಭವದ ಮೆರವಣಿಗ
Team Udayavani, Dec 31, 2017, 11:49 AM IST
ಬಸವಕಲ್ಯಾಣ: ಮೊಳಗಿದ ಕನ್ನಡಪರ ಘೋಷಣೆಗಳು, ಹಾರಾಡಿದ ಕನ್ನಡ ಧ್ವಜಗಳು, ತಳಿರು ತೋರಣಗಳಿಂದ
ಅಲಂಕೃಸಲಾದ ಎತ್ತಿನ ಬಂಡಿಗಳ್ಳಿ ಗಮನ ಸೆಳೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, 16 ಜಿಲ್ಲಾ ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು. ಮೆರವಣಿಗೆಯುದ್ದಕ್ಕೂ ನೃತ್ಯ ಮಾಡಿದಯುವಕರೊಂದಿಗೆ ಹೆಜ್ಜೆ ಹಾಕಿದ ಪೂಜ್ಯರು. ಜನಪದ ಕಲಾ ವೈಭವ ಸಾರಿದ ಕಲಾ ತಂಡಗಳು.
ತಾಲೂಕಿನ ಹುಲಸೂರಿನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಶನಿವಾರ ನಡೆದ ಸಾಂಸ್ಕೃತಿ ವೈಭವದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ ಇದು.
ಅಲಂಕೃತ ವಾಹನಗಳಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ, ಗುರು ಬಸವಣ್ಣನವರ ಭಾವಚಿತ್ರ, ಜಗದ್ಗುರು ಬಸವಕುಮಾರ ಶಿವಯೋಗಿಗಳ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಯಲ್ಲಿ ಅಲಂಕೃತ ಸಾರೋಟಿನಲ್ಲಿ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ಎಂ.ಜಿ. ದೇಶಪಾಂಡೆ ಅವರ ಮೆರವಣಿಗೆ ವೈಭವಪೂರ್ಣವಾಗಿ ನಡೆಯಿತು.
ಗ್ರಾಮದ ಹಾಲಹಳ್ಳಿ ರಸ್ತೆ ಬದಿಯಲ್ಲಿ ಅನುಭವ ಮಂಟಪದಿಂದ ಧಬಾಲೆ ಗಲ್ಲಿ, ಲಕ್ಷ್ಮೀ ವೃತ್ತ, ಗಾಂಧಿ ವೃತ್ತದ ಮೂಲಕ ಮುಖ್ಯ ಮಾರ್ಗವಾಗಿ ವೇದಿಕೆ ವರೆಗೆ ನಡೆದ ಮೆರವಣಿಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳಿಸಿತು.
16ನೇ ಸಾಹಿತ್ಯ ಸಮ್ಮೇಳನವಾಗಿದ್ದ ರಿಂದ 16 ಎತ್ತಿನ ಬಂಡಿಗಳಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ವೇಶಭೂಷಣದಲ್ಲಿ ಶ್ರೀ ವೀರಭದ್ರೇಶ್ವರ ಶಾಲೆ ಮಕ್ಕಳು ಗಮನ ಸೆಳೆದರು. ಬಂಡಿ ಹಿಂಬದಿಯಲ್ಲಿ ಈ ಹಿಂದೆ ನಡೆದ 16 ಸಮ್ಮೇಳನದ ಸರ್ವಾಧ್ಯಕ್ಷರ ಚಿತ್ರಗಳು ಕಂಡು ಬಂದವು.
ಶಿವಮೊಗ್ಗದ ಮಹಿಳಾ ತಂಡ ದಿಂದ ವೀರಗಾಸೆ ನೃತ್ಯ, ಚಿತ್ರದುರ್ಗದ ತಂಡದ ಪೂಜಾ ಕುಣಿತ, ಕರಿಗೆ ಕುಣಿತ, ಹಣಮಂತವಾಡಿ ಡೊಳ್ಳು ಕಲಾ ತಂಡಗಳಿದ ನಡೆದ ಪ್ರಗದರ್ಶನ ಗಮನ ಸೆಳೆದವು. ಗ್ರಾಮದ ವಿವಿಧ ಶಾಲಾ
ವಿದ್ಯಾರ್ಥಿಗಳು ಸಮವಸ್ತ್ರಗಳಲ್ಲಿ ಹೆಜ್ಜೆ ಹಾಕುತ್ತ ಲೇಜಿಮ್, ಡೆಂಬಲ್ಸ್‌ಗಳೊಂದಿಗೆ ನೃತ್ಯ ಮಾಡುತ್ತ ಮೆರವಣಿಗೆಗೆ ಶೋಭೆ ಹೆಚ್ಚಿಸಿದರು.
ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರ ಸಾರಥ್ಯದಲ್ಲಿ ನಡೆದ ಮೆರವಣಿಗೆಗೆ ಗ್ರಾಮದ ಅನುಭವ ಮಂಟಪದ ಬಳಿ ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಚಾಲನೆ ನೀಡಿದರು.
ಸಾಯಗಾಂವನ ಶ್ರೀ ಶಿವಾನಂದ ದೇವರು, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೋಣಗಾಂವಕರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ತಹಶೀಲ್ದಾರ ಜಗನ್ನಾಥರೆಡ್ಡಿ, ಚಂದ್ರಪ್ಪ ಹೆಬ್ಟಾಳಕರ್, ಡಾ| ಬಸವರಾಜ ಬಲ್ಲೂರ, ಎಂ.ಜಿ. ರಾಜೋಳೆ, ಸಂಜು ಭೈರೆ, ಕಾಶಿನಾಥ ಬೀರಗೆ, ಗೋವಿಂದರಾವ ಸೋಮವಂಶಿ, ಮಲ್ಲಾರಿ ವಾಗಮಾರೆ, ಚಂದ್ರಕಾಂತ ಧೆಟೆ, ಮಲ್ಲಪ್ಪ ಧಬಾಲೆ, ಶ್ರೀಕಾಂತ ಇಲ್ಲಾಮಲ್ಲೆ, ಶಿವಲೀಲಾ ಮಠಪತಿ, ಬಸವರಾಜ
ಡೊಂಣಗಾಂವೆ, ಭೀಮಾಶಂಕರ ಬಿರಾದಾರ, ಬಾಬುರಾವ ಗೌಂಡಗಾವೆ, ಬಾಲಾಜಿ ಅದೆಪ್ಪ, ಆಕಾಶ ಖಂಡಾಳೆ, ದೇವೇಂದ್ರ ಭೋಪಳೆ, ಬಸವಕುಮಾರ ಕೌಟೆ, ಸಂಗಮೇಶ ಭೋಪಳೆ, ಶ್ರೀದೇವಿ ನಿಡೋದೆ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಗಣ್ಯರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.
ಎಸಿ ಶರಣಬಸಪ್ಪ ಕೊಟಪ್ಪಗೋಳ ರಾಷ್ಟ್ರಧ್ವಜ, ತಹಶೀಲ್ದಾರ ಜಗನ್ನಾಥರೆಡ್ಡಿ ನಾಡಧ್ವಜ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪರಿಷತ್ ಧ್ವಜರೋಹಣ ನೆರವೇರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.