![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 15, 2022, 2:21 PM IST
ಹುಮನಾಬಾದ್ : ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ನಡೆಯುತ್ತಿರುವ 10ನೇ ದಿನದ ಸತ್ಯಾಗ್ರಹದಲ್ಲಿ ಶುಕ್ರವಾರ ಜಂಗಮರು ತಲೆ ಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಂಗಮರ ತಾಳ್ಮೆ ಪರೀಕ್ಷೆ ಮಾಡಬಾರದು. ಕೈ ಎತ್ತಿ ಆಶೀರ್ವಾದ ಮಾಡುವ ಸ್ವಾಮಿಗಳಿಂದ ಮುಖ್ಯಮಂತ್ರಿಗಳಿಗೆ ಶಾಪ ಹಾಕುವ ಸ್ಥಿತಿ ಬರಬಾರದು. ಜಂಗಮರು ತಲೆಬೋಳಿಸುವುದು ಎರಡು ಬಾರಿ ಮಾತ್ರ. ಒಂದು ದೀಕ್ಷೆ ನೀಡುವಾಗ ಇನ್ನೊಂದು ಅಯ್ಯಾಚಾರ ಮಾಡುವಾಗ ಇದೀಗ ಹಕ್ಕಿಗಾಗಿ ತಲೆ ಬೋಳಿಸಿಕೊಳ್ಳುವ ಸ್ಥಿತಿ ಸರ್ಕಾರ ಮಾಡಿದೆ. ಜಂಗಮ ಮುನಿದರೆ ಭಗವಂತ ಮುರಿದಂತೆ ಎಂಬುವುದು ಮುಖ್ಯಮಂತ್ರಿಗಳು ತಿಳಿದುಕೊಳ್ಳಬೇಕು. ಮನುಷ್ಯ ಜೀವನಕ್ಕೆ ಮುಕ್ತಿ ದೊರೆಯಬೇಕಾದರೆ ಜಂಗಮರ ಪಾತ್ರ ಮುಖ್ಯವಾಗಿದ್ದು ಕೂಡಲೇ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಬೇಡ ಜಂಗಮರ ಬೇಡಿಕೆಗಳು ಈಡೇರಿಸುವ ಗಮನಹರಿಸಬೇಕು. ಇಲ್ಲವಾದರೆ ಜಂಗಮರ ಶಾಪ ಮುಖ್ಯಮಂತ್ರಿಗಳಿಗೆ ತಟ್ಟುತ್ತದೆ ಎಂದು ಖಾರವಾಗಿ ಹೇಳಿದರು.
ರವಿ ಸ್ವಾಮಿ, ಸಿದ್ದು ಚಕ್ಕಪಳ್ಳಿ ಮಾತನಾಡಿ, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಜಂಗಮ ಸಮಾಜದಿಂದ ಕಳೆದ 10 ದಿನಗಳಿಂದ ಹಗಲು-ರಾತ್ರಿ ಸತ್ಯಗ್ರಹ ನಡೆಸಿದ್ದು, ಸರ್ಕಾರ ಮಾತ್ರ ಜಂಗಮರ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಿರಂತರ ಮಳೆ ಸುರಿಯುತ್ತಿದ್ದರೂ ಕೂಡ ಪ್ರತಿಭಟನಾ ಸ್ಥಳದಿಂದ ಯಾರೊಬ್ಬರೂ ಕದಲಿಲ್ಲ. ಈ ಹಿಂದೆ ರಕ್ತದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಇದೀಗ ಜಂಗಮರು ತಲೆ ಕೂದಲು ಬೋಳಿಸಿಕೊಂಡು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾನಿರತರು ತಿಳಿಸಿದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.