ಜಾತಿನಿಂದನೆ ಪ್ರಕರಣ: ತಪ್ಪಿತಸ್ಥರ ವಜಾಕ್ಕೆ ದಲಿತ ಸಂಘಟನೆಗಳ ಆಗ್ರಹ
Team Udayavani, Jan 31, 2022, 2:44 PM IST
ಹುಮನಾಬಾದ: ರಾಯಚೂರು ನ್ಯಾಯಾಧೀಶರನ್ನು ಹಾಗೂ ಹುಮನಾಬಾದ ತಹಶೀಲ್ದಾರ ಅವರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾಮಾಡಿ ಬಂಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.
ಸೋಮವಾರ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ವಿವಿದ ದಲಿತ ಮುಖಂಡರು, ರಾಯಚೂರು ಘಟನೆ ಕುರಿತು ಖಂಡಿಸುವ ನಿಟ್ಟಿನಲ್ಲಿ ಅಂಕುಶ ಗೋಖಲೆ ತಹಶೀಲ್ದಾರ ಅವರಿಗೆ ಮನವಿ ಪತ್ರ ನೀಡಲು ತೆರಳಿದ ಸಂದರ್ಭದಲ್ಲಿ ಮನವಿ ಪತ್ರ ತೆಗೆದುಕೊಳ್ಳಲು ತಹಶೀಲ್ದಾರ ಬಂದಿಲ್ಲ. ಸುಮಾರು ಹೊತ್ತು ಕಚೇರಿ ಎದುರಿಗೆ ನಿಂತ ಪ್ರತಿಭಟನಾ ನಿರತರಿಗೆ ಗೌರವ ನೀಡುವ ಕೆಲಸ ಮಾಡದೆ ಅವಮಾನ ಮಾಡಿದ್ದಾರೆ. ಘಟನೆ ನಡೆದ ಕೆಲ ಘಂಟೆಗಳಲ್ಲಿ ಅಂಕುಶ ಗೋಖಲೆ ಅವರನ್ನು ಬಂಧಿಸುವ ಕಾರ್ಯ ಪೊಲೀಸ್ ಇಲಾಖೆ ಮಾಡಿದ್ದು, ಅದೇ ರೀತಿ ತಹಶೀಲ್ದಾರ ವಿರುದ್ದವೂ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ತಹಶೀಲ್ದಾರ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಶವ ಯಾತ್ರೆ: ಪಟ್ಟಣದ ಎಂ.ಪಿ ಬಡಾವಣೆಯಿಂದ ಆರಂಭಗೊಂಡಿರುವ ಪ್ರತಿಭಟನೆ ಪಟ್ಟಣದ ಹಳೆ ತಹಸೀಲ್ ಕಚೇರಿಗೆ ತಲುಪಿ ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಅಂಭೇಡ್ಕರ್ ವೃತ್ತದ ವರೆಗೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ರಾಯಚೂರ ನ್ಯಾಯಾಧೀಶ ಹಾಗೂ ಹುಮನಾಬಾದ ತಹಶೀಲ್ದಾರ ಪ್ರದೀಪಕುಮಾರ ಅವರ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಬಂದ್ ವಾತಾವರಣ ನಿರ್ಮಾಣಗೊಂಡಿತ್ತು.
ಮುಖಂಡರಾದ ಲಕ್ಷ್ಮಿಪುತ್ರ ಮಾಳಗೆ, ಪರಮೇಶ್ವರ ಆರ್ಯ, ದಿಲೀಪಕುಮಾರ ಮರಪಳ್ಳಿ, ಪ್ರಭು ಚಿತ್ತಕೊಟಾ, ಗೌತಮ್ ಪ್ರಸಾದ, ವೀರಪ್ಪಾ ಧೂಮನಸ್ಸೂರ್, ಅನೀಲ ದೊಡ್ಡಿ, ಗೌತಮ್ ಚವ್ಹಾಣ್, ಸಿದ್ಧಾರ್ಥ ಡಾಂಗೆ, ಶರಣ್ಣಪ್ಪಾ ಮೆತ್ರೆ, ಮಾಣಿಕ ಮಾಡಗೊಳ್ಳ, ರವಿ ಹೋಸಳ್ಳಿ, ಗಜೇಂದ್ರ ಕನಕಟ್ಟಕರ್, ಮಧುಕರ್ ಹಿಲಾಲಪೂರ್, ರಮೇಶ ಡಾಕುಳಗಿ, ಸುರೇಶ ಘಾಂಗರೆ, ಚೇತನ್ ಗೋಖಲೆ, ಗೌತಮ್ ಮೇಟಿ, ಮಾಣಿಕರಾವ ಪವಾರ ಸೇರಿದಂತೆ ಅನೇಕ ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.