ಕೆರೆ ಹೂಳೆತ್ತುವ ಕಾರ್ಯ ಪರಿಶೀಲಿಸಿದ ಡಿಸಿ
Team Udayavani, Jan 9, 2019, 10:58 AM IST
ಬೀದರ: ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಸೋಮವಾರ ತಾಲೂಕಿನ ಚಿಮಕೋಡ ಹಾಗೂ ಮಮದಾಪುರ ಕೆರೆಗಳಿಗೆ ಭೇಟಿ ನೀಡಿ, ಕೆರೆ ಹೂಳೆತ್ತುವ ಕಾರ್ಯ ಪರಿಶೀಲಿಸಿದರು.
ಕೆರೆಯ ಮಣ್ಣನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರೈತರು ಯಾವುದೇ ಕಾರಣಕ್ಕೂ ಹಣ ಕೊಡಬಾರದು. ಕೆರೆಯ ಮಣ್ಣನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿದ್ದು, ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಜೆಸಿಬಿಗಳು ಬೆಳಗ್ಗೆ 8 ಗಂಟೆಗೆ ತಪ್ಪದೇ ಕೆರೆಯಲ್ಲಿರಬೇಕು. ಮತ್ತು 8 ಗಂಟೆ ಕೆಲಸ ನಿರ್ವಹಿಸಬೇಕು. ಮಣ್ಣು ಕೇಳಿಕೊಂಡು ಬರುವ ರೈತರಿಗೆ ಉಚಿತವಾಗಿ ಕೊಡಬೇಕು. ಮನಸಿಗೆ ತೋಚಿದಂತೆ ಮಣ್ಣನ್ನು ತೆಗೆಯದೇ ಎಂಜಿನಿಯರ್‌ಗಳ ಮಾರ್ಗದರ್ಶನದಂತೆ ಕೆಲಸ ಮುಂದುವರೆಸಿ ಎಂದು ಸೂಚಿಸಿದರು. ಸಮಯಕ್ಕೆ ಬರದೇ ಇರುವ ಜೆಸಿಬಿಗಳನ್ನು ಕೆಲಸದಿಂದ ಕೈ ಬಿಡಿ ಎಂದು ನಿರ್ದೇಶನ ನೀಡಿದರು.
ನಾಡ ತಹಶೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ದಿನ ಕೆರೆಗಳಿಗೆ ಭೇಟಿ ನೀಡಿ ಕೆಲಸ ಪರಿಶೀಲಿಸಬೇಕು. ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು. ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ತಹಶೀಲ್ದಾರ್ ಕೀರ್ತಿ ಚಾಲಕ್, ನಿರ್ಮಿತಿ ಕೇಂದ್ರದ ಅಧಿಕಾರಿ ಜಾಫರ್ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.