![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 16, 2022, 5:44 PM IST
ಬೀದರ: ಬೀದರ ತಾಲೂಕು ಅತಿವೃಷ್ಟಿ ಎಂದು ಘೋಷಣೆ ಮಾಡಬೇಕೆಂದು ಬಿಜೆಪಿ ಬೀದರ ಗ್ರಾಮಾಂತರ ಮಂಡಲ ಆಗ್ರಹಿಸಿದೆ. ಈ ಕುರಿತು ಗುರುವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿ, ಬೆಳೆಹಾನಿ ಸಮೀಕ್ಷೆಯ ವರದಿಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾದ್ಯಂತ ಬೆಳೆಹಾನಿ ಸಮೀಕ್ಷೆ ಮಾಡಲಾಗಿದ್ದು, ಬೀದರ ತಾಲೂಕಿನಲ್ಲಿ ತಾರತಮ್ಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಉದಾಹರಣೆಗೆ ಭಾಲ್ಕಿ ತಾಲೂಕಿನಲ್ಲಿ 9873 ಹೆಕ್ಟೇರ್, ಔರಾದ ತಾಲೂಕಿಗೆ 9840, ಬಸವಕಲ್ಯಾಣ ತಾಲೂಕಿಗೆ 9790 ನೀಡಿರುತ್ತಾರೆ. ಆದರೆ ನಮ್ಮ ಬೀದರ ತಾಲೂಕಿನ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ಸೇರಿ ಕೇವಲ 2838 ಹೆಕ್ಟೇರ್ ಮಾತ್ರ ಸಮೀಕ್ಷೆಯಲ್ಲಿ ಬೆಳೆ ಹಾನಿಯಾಗಿರುವುದೆಂದು ಸಮೀಕ್ಷೆಯಲ್ಲಿ ತಿಳಿಸಿರುವುದು ಕಂಡುಬಂದಿರುತ್ತದೆ ಎಂದಿದ್ದಾರೆ.
ಬೀದರ ತಾಲೂಕಿನ ಕಾರಂಜಾ ಜಲಾಶಯ, ಮಾಂಜ್ರಾ ನದಿ, ಹಳ್ಳ-ಕೊಳ್ಳಗಳು ಇರುತ್ತವೆ. ಬೀದರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿರುವುದರಿಂದ ಬೀದರ ತಾಲೂಕಿನಲ್ಲಿ ಸಾಕಷ್ಟು ಬೆಳೆಗಳು ನಾಶವಾಗಿದ್ದು, ರೈತರು ಆತ್ಮಹತ್ಯೆಗೆ ಶರಣಾಗುವಂತಹ ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿರುತ್ತದೆ. ಹೀಗಿರುವಾಗ ಬೀದರ ತಾಲೂಕಿಗೆ ಸಮೀಕ್ಷೆಯ ವರದಿಯಲ್ಲಿ ಕಡಿಮೆ ಪ್ರಮಾಣ ವರದಿ ಸಲ್ಲಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪುನಃ ಸರ್ವೆ ಮಾಡಿ, 3-4 ದಿನಗಳ ಧಾರಾಕಾರ ಮಳೆಯಿಂದ ಅಲ್ಪ-ಸ್ವಲ್ಪ ಉಳಿದಿರುವ ಬೆಳೆಯು ಕೂಡ ಸಂಪೂರ್ಣ ನಾಶವಾಗಿರುತ್ತದೆ. ಆದ್ದರಿಂದ ತಾವುಗಳು ದಯಮಾಡಿ ಬೀದರ ತಾಲೂಕಿಗೆ ಅತಿವೃಷ್ಟಿ ಘೋಷಣೆ ಮಾಡಿ, ಬೀದರ ತಾಲೂಕಿನ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅಧ್ಯಕ್ಷ ರಾಜೇಂದ್ರ ಬಗ್ಗೆ ಪೂಜಾರಿ, ಪ್ರಮುಖರಾದ ದೀಪಕ ಗಾದಗಿ, ರಾಜಶೇಖರ, ಪಂಢರಿನಾಥ ಲದ್ದೆ, ರವಿ ಚನ್ನಪ್ಪನೋರ್, ನಾಗಶೆಟ್ಟಿ ಅಲಿಯಂಬರ್, ಅಂಬವ್ವ ಕಗಂಟಿ, ಪುಟ್ಟರಾಜ, ರವೀಂದ್ರ, ವೆಂಕಟ, ವಿಶ್ವನಾಥ, ಕಬೀರ್ ದಾಸ್, ಶಂಕರ ಇತರರು ಮನವಿ ಮಾಡಿದ್ದಾರೆ.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.