ಆಂಧ್ರ ಮಾದರಿಯಲ್ಲಿ ಭತ್ತ ಖರೀದಿಗೆ ಬೇಡಿಕೆ
Team Udayavani, Nov 23, 2021, 12:38 PM IST
ಸಿಂಧನೂರು: ಕಳೆದ ಎರಡ್ಮೂರು ದಶಕಗಳಿಂದಲೂ ಭತ್ತ ಖರೀದಿ ಮಾಡಲು ಸರಕಾರದಿಂದ ಖರೀದಿ ಕೇಂದ್ರ ತೆರೆದರೂ ಖರೀದಿ ಪ್ರಮಾಣ 20 ಕ್ವಿಂಟಲ್ ದಾಟುತ್ತಿಲ್ಲ. ಆದರೆ, ಆಂಧ್ರಪ್ರದೇಶದಲ್ಲಿ ವಾರ್ಷಿಕ 50 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕೆಂಬ ಕೂಗು ಬಲವಾಗಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕೃತ ನೀರಾವರಿ ಪ್ರದೇಶವಾದ 6 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತಿದ್ದರೂ ಎಪಿಎಂಸಿ ವರ್ತಕರನ್ನೇ ಮಾರಾಟಕ್ಕೆ ಅವಲಂಬಿಸಲಾಗಿದೆ. ಇಂತಹ ಪರಿಸ್ಥಿತಿಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಈಗಾಗಲೇ ಹೊರಬಂದಿವೆ. ಅಲ್ಲಿನ ಸರಕಾರಗಳು ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿದ ಭತ್ತವನ್ನು ಮರಳಿ ಪಡಿತರ ವಿತರಣೆಗೆ ಬಳಸುವ ಮೂಲಕ ಮುನ್ನಡೆ ಸಾಧಿಸಿವೆ. ಅದನ್ನೇ ರಾಜ್ಯದಲ್ಲೂ ನೀತಿಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಷರತ್ತುಗಳು ವಿಭಿನ್ನ
ಭತ್ತ ನುಚ್ಚಾಗುವ ಪ್ರಮಾಣ, ಬಣ್ಣ ಬದಲಿಸುವ ಪ್ರಮಾಣ, ಕೆಂಪು ಅಕ್ಕಿಯ ಪ್ರಮಾಣ, ತೇವಾಂಶ ಪ್ರಮಾಣವನ್ನು ಪ್ರತ್ಯೇಕವಾಗಿ ವಿಭಜಿಸಿ ಶೇ.17ರಷ್ಟು ಗುಣಮಟ್ಟವನ್ನು ಅಳೆಯುವಂತೆ ಆಂಧ್ರಪ್ರದೇಶ ಸರಕಾರ ಸೂಚನೆ ನೀಡಿದೆ. ಇದರಲ್ಲಿ ಶೇ.14ರಷ್ಟು ತೇವಾಂಶ ಇರುವ ಅಕ್ಕಿಯನ್ನು ಕೂಡ ಖರೀದಿ ಮಾಡಲಾಗುತ್ತಿದೆ. ನುಚ್ಚಾಗುವ ಪ್ರಮಾಣ, ಕಪ್ಪಾಗುವ ಪ್ರಮಾಣ ಪ್ರತ್ಯೇಕಗೊಳಿಸಿ ಮಾರ್ಗಸೂಚಿ ಹೊರಡಿಸಲಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಶೇ.17ಕ್ಕಿಂತಲೂ ಕಡಿಮೆ ತೇವಾಂಶ ಇರುವ ಅಕ್ಕಿಯನ್ನು ಖರೀದಿ ಮಾಡಬಾರದೆಂಬ ಷರತ್ತು ಇದುವರೆಗೂ ರೈತರನ್ನು ಕಟ್ಟಿ ಹಾಕಿದೆ. ಇಂತಹ ಷರತ್ತು ಸಡಿಲಗೊಳಿಸಿದರೆ ಮಾತ್ರ ಖರೀದಿ ಕೇಂದ್ರಗಳ ನೈಜ ಪ್ರಯೋಜನ ದೊರೆಯುತ್ತದೆಂಬ ಒತ್ತಾಯ ರೈತರದ್ದು.
ರಾಜ್ಯದಲ್ಲಿ ಮಿತಿಯೂ ಕಡಿಮೆ
ರಾಯಚೂರು ಜಿಲ್ಲೆಯಲ್ಲಿ 1 ಲಕ್ಷ 55 ಸಾವಿರ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು, 7 ಲಕ್ಷ 30 ಸಾವಿರ ಟನ್ ಉತ್ಪಾದನೆ ಲೆಕ್ಕ ಹಾಕಲಾಗಿದೆ. ವಾಸ್ತವದಲ್ಲಿ ಪ್ರತಿ ಎಕರೆಗೆ 40 ಚೀಲಗಳ ಲೆಕ್ಕದಲ್ಲಿ ಉತ್ಪಾದನೆ ಪ್ರಮಾಣ ದ್ವಿಗುಣವಿದೆ. ಖರೀದಿಗೆ ನಿಗದಿಪಡಿಸಿದ 3.5 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಬರೀ ಸಿಂಧನೂರು ತಾಲೂಕಿನಿಂದಲೇ ಕೊಡಲು ಸಾಧ್ಯವಿದೆ. ಖರೀದಿಗೆ ಸುಲಭ ಮಾರ್ಗಸೂಚಿ ಇಲ್ಲದ ಪರಿಣಾಮ ರಾಜ್ಯದಲ್ಲಿ ತೊಂದರೆ ಎದುರಾಗಿದೆ. ಆಂಧ್ರಪ್ರದೇಶದಲ್ಲಿ ಭತ್ತದ ಗುಣಮಟ್ಟ ಅಳೆಯುವ ರೀತಿ ವಿಭಿನ್ನವಾಗಿದ್ದರಿಂದ ಅಲ್ಲಿ ಯಶಸ್ಸು ಸಾಧಿಸಲಾಗಿದೆ. ಅದೇ ಪದ್ಧತಿ ಕರ್ನಾಟಕದಲ್ಲೂ ಜಾರಿಗೆ ಬರಬೇಕೆಂದು ರೈತರು ಒತ್ತಾಯಿಸಲಾರಂಭಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರೈತರ ಭತ್ತವನ್ನು ಖರೀದಿಸಲು ಸಾಧ್ಯವಾಗಿದ್ದರೂ ಕರ್ನಾಟಕದಲ್ಲಿ ಇದುವರೆಗೂ ಪ್ರಯೋಜನ ಲಭಿಸಿಲ್ಲ. ಆಂಧ್ರ ಸರಕಾರದ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಿ, ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು. -ಹಂಪನಗೌಡ ಬಾದರ್ಲಿ, ಮಾಜಿ ಶಾಸಕರು, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.