ಸರ್ಕಾರ ನಿಷೇಧಿಸಿದ್ದರೂ ಎಗ್ಗಿಲ್ಲದೆ ಸಾಗಿದೆ ಕ್ಯಾಟ್ ಫಿಶ್ ಸಾಕಣೆ ಹಾಗೂ ಮಾರಾಟ..!
Team Udayavani, Jul 21, 2022, 11:58 AM IST
ಹುಮನಾಬಾದ : ಸರಕಾರವೇ ನಿಷೇಧ ಮಾಡಿರುವ ಕ್ಯಾಟ್ ಫಿಶ್‌ಗಳು ಇನ್ನೂ ಬೀದರ ಜಿಲ್ಲೆಯ ವಿವಿಧ ಕೆರೆಗಳಲ್ಲಿ ಕಾಣಿಸುತ್ತಿವೆ. 2000ದಲ್ಲಿ ಸರಕಾರವೇ ಈ ಮೀನು ತಳಿಗಳನ್ನು ತಿನ್ನುವುದು, ಬೆಳೆಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧ ಮಾಡಿದರೂ ಕಾನೂನಿನ ಭಯ ಇಲ್ಲದ ಜನರು ನಿಷೇಧಿತ ಮಿನುಗಳ ಸಂತತಿ ಬೆಳೆಸುವಲ್ಲಿ ಮುಂದಾಗಿದ್ದಾರೆ.
ಹುಮನಾಬಾದ ತಾಲೂಕಿನ ಮರಕಲ್ ಗ್ರಾಮದ ಸುತ್ತಮುತ್ತಲ್ಲಿನ ಕಾರಂಜಾ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆಯ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಪ್ರದೇಶಕ್ಕೆ ಈ ಹಿಂದೆ ಅಧಿಕಾರಿಗಳು ಸೇರಿದಂತೆ ಅನೇಕರು ಭೇಟಿ ನೀಡಿದರೂ ಅವ್ಯಾಹತವಾಗಿ ಕಾನೂನು ಗಾಳಿಗೆ ತೂರಿ ನಿಷೇಧಿತ ಮೀನುಗಳ ಸಾಕಾಣಿಕೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
ಕಂದಾಯ ಭೂಮಿ ಪ್ರದೇಶದಲ್ಲಿ ಒಂದು ಕಡೆಗೆ ಸುಮಾರು 30ಕ್ಕೂ ಅಧಿಕ ಹೊಂಡಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಜೆಸಿಬಿ ಯಂತ್ರಗಳು ಬಳಸಿಕೊಂಡು ಹೊಂಡಗಳ ನಿರ್ಮಾಣ, ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಮೀನು ಸಾಕಾಣಿಕೆ ಮಾಡುತ್ತಿರುವ ವ್ಯಕ್ತಿಗಳ ಪ್ರಕಾರ ಇಲ್ಲಿ ರೂಪಚಂದ್ ಹಾಗೂ ಫಂಗ್ಸ್ ಮೀನುಗಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿನೀಡಿದ ಜನರಿಗೆ ವಿವರಣೆ ನೀಡುತ್ತಿದ್ದಾರೆ. ಇವುಗಳು ಕ್ಯಾಟ್ ಫಿಶ್ ತರಹ ಇರುತ್ತವೆ ಎಂದು ಕೂಡ ಹೇಳುತ್ತಿದ್ದಾರೆ. ಈ ತಳಿ ಮೀನುಗಳು ಕೂಡ ಮಾಂಸಹಾರಿಯಾಗಿವೆ ಎಂದು ವಿವರಿಸಿದ್ದಾರೆ. ಆದರೆ, ನೂರಿತ ತಜ್ಞರ ಪ್ರಕಾರ ಆ ಪ್ರದೇಶದಲ್ಲಿ ಸಾಕಾಣಿಕೆ ಆಗುತ್ತಿರುವುದು ಕ್ಯಾಟ್ ಫಿಶ್ ಎಂದು ಹೇಳಲಾಗುತ್ತಿದ್ದು, ಮೀನುಗಾರಿಕೆ, ಪಶು ವೈದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ.
ನಿಷೇಧಕ್ಕೆ ಕಾರಣಗಳು: ಈ ಮೀನುಗಳು ಮಾಂಸಹಾರಿ ಪ್ರವೃತ್ತಿಯನ್ನು ಹೊಂದಿದ್ದು, ನೀರಿನಲ್ಲಿರುವ ಜಲಚರಗಳನ್ನು ತಿನ್ನುವುದರಿಂದ ಕೆಲ ಜಲ ಸಂತತಿಗಳು ಅಳಿವಿನ ಅಂಚಿಗೆ ಬಂದಿವೆ. ಈ ಮೀನು ಸಾಕಾಣಿಕೆ ಮಾಡಲು ಕೋಳಿ ತ್ಯಾಜ್ಯ ಮತ್ತು ಮಾಂಸವನ್ನು ಬಳಕೆ ಮಾಡುತ್ತಾರೆ. ಇದು ನೀರು ಅಲ್ಲದೆ ಬರಿ ಕೆಸರಿನಲ್ಲಿ ವಾಸ ಮಾಡುವ ಸಾಮರ್ಥ್ಯ ಹೊಂದಿದೆ. ನೀರಿನಲ್ಲಿ ಇರುವ ಆಮ್ಲಜನಕ ಅಲ್ಲದೆ, ವಾತಾವರಣದಲ್ಲಿರುವ ಆಮ್ಲಜನಕವನ್ನೂ ಸೇವನೆ ಮಾಡುತ್ತವೆ. ಮಾಂಸಾಹಾರಿ ಇರುವ ಕಾರಣಕ್ಕೆ ಮಾನವ ಜೀವಕ್ಕೂ ಹಾನಿ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಿರುವ ಕಾರಣಕ್ಕೆ ಸರ್ಕಾರ ಇವುಗಳನ್ನು ಸಾಕಾಣಿಕೆಯನ್ನು ನಿಷೇಧಿಸಿದೆ ಎಂದು ಮೀನು ತಜ್ಞರು ವಿವರಿಸಿದ್ದಾರೆ.
ಮಾರಾಟ ನಿಷೇಧ: ಕೆರೆಯಲ್ಲಿ ಸಿಗುವ ಹಾಗೂ ಒಂದು ಪ್ರದೇಶದಲ್ಲಿ ಬೆಳೆಸಲಾದ ನಿಷೇಧಿತ ಮೀನುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಾರದು ಎಂಬ ಮೀನುಗಾರಿಕೆ ಇಲಾಖೆ ಈ ಹಿಂದೆಯೇ ನಿರ್ದೇಶನ ನೀಡಿದ್ದರೂ ಸಹ ನಿಯಮವನ್ನು ಗಾಳಿಗೆ ತೂರಿ ಮಾರಾಟ ಮಾಡಲಾಗುತ್ತಿದೆ. ಈ ಮೀನುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಕೆಲ ಮಾಂಸಾಹಾರಿ, ಕಸಾಯಿಖಾನೆ ಸೇರಿದಂತೆ ದೊಡ್ಡ ಉದ್ಯಮ ನಡೆಸುವರು ಮಾಂಸದ ತ್ಯಾಜ್ಯಗಳನ್ನು ಖಾಲಿ ಮಾಡಲು ಇವುಗಳ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಲೈಗರ್’ ಘರ್ಜನೆ..: ವಿಜಯ್ ದೇವರಕೊಂಡ ಚಿತ್ರದ ಪವರ್ ಫುಲ್ ಟ್ರೇಲರ್ ಬಿಡುಗಡೆ
ಆರೋಗ್ಯದ ದುಷ್ಟಪರಿಣಾಮ: ಕ್ಯಾಟ್ ಫಿಶ್ ತಳಿಯ ಮೀನುಗಳಲ್ಲಿ ವಿಷಕಾರಿ ಅಂಶ ಅಧಿಕ ಪ್ರಮಾಣದಲ್ಲಿದ್ದು, ಇದು ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಮೀನಿನ ಸೇವನೆಯಿಂದ ಹೃದಯ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೂ ಕೂಡ ಕೆಲವರು, ಈ ಮೀನು ಮಾಂಸಹಾರಿಯಾಗಿದ್ದು, ಇದರಿಂದ ಅಧಿಕ ಶಕ್ತಿ, ಪೌಷ್ಠಿಕತೆ ಬರುತ್ತದೆ ಎಂದು ಪರಿಗಣಿಸಿ ಸೇವೆ ಕೂಡ ಮಾಡುತ್ತಾರೆ ಎಂದು ತಿಳಿದುಬಂದಿದೆ. ಸತ್ತಿರುವ ನಾಯಿಗಳು, ದನಕರುಗಳ ಮಾಂಸ, ಕೆಟ್ಟುಹೋದ ಮೊಟ್ಟೆಗಳು, ಸತ್ತ ಕೋಳಿಗಳನ್ನು ಕ್ಯಾಟ್ ಫಿಶ್‌ಗೆ ಆಹಾರವಾಗಿ ನೀಡಲಾಗುತ್ತದೆ ಎಂದು ಕೆಲಸ ಮಾಡುವ ಸಿಬ್ಬಂದಿಗಳು ವಿವರಿಸಿದ್ದಾರೆ.
ಅಪಾಯ ಹೆಚ್ಚು: ಕಾರಂಜಾ ಹಿನ್ನೀರಿನಲ್ಲಿ ಪ್ರದೇಶದಲ್ಲಿ ಹಿನ್ನೀರನ್ನೆ ಬಳಸಿಕೊಂಡು ನೀರಿನ ಬೃಹತ್ ಹೊಂಡಗಳನ್ನು ನಿರ್ಮಾಣ ಮಾಡಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ಭಾಗದ ಜನರು ಇಲ್ಲಿನ ಭೂಮಿ ಗುತ್ತಿಗೆ ಪಡೆದುಕೊಂಡು ಮೀನುಗಾರಿಕೆ ಮಾಡುತ್ತಿದ್ದಾರೆ. ಅಲ್ಲದೆ, ಆ ರಾಜ್ಯದಿಂದ ಬಂದಿರುವ ಹತ್ತಾರು ಕಾರ್ಮಿಕ ಕುಟುಂಬಗಳು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸಾಕುವ ಮೀನುಗಳಿಗೆ ಸತ್ತ ಪ್ರಾಣಿಗಳ ಮಾಂಸವನ್ನು ಹಾಕಲಾಗುತ್ತಿದ್ದು, ಇದರಲ್ಲಿನ ನೀರು ವಿಷಕಾರಿಯಾಗಿ ಮಾರ್ಪಾಡುತ್ತಿದೆ. ನಂತರ ಅದೇ ವಿಷಕಾರಿ ನೀರನ್ನು ಕಾಂರಜಾ ಡ್ಯಾಂಗೆ ಹರಿ ಬಿಡಲಾಗುತ್ತಿದೆ ಎಂದು ಸ್ಥಳಿಯರು ದೂರುತ್ತಿದ್ದಾರೆ. ಕಾರಂಜಾ ನೀರು ಹುಮನಾಬಾದ, ಬೀದರ, ಚಿಟಗುಪ್ಪ, ಭಾಲ್ಕಿ ತಾಲೂಕುಗಳು ಸೇರಿದಂತೆ ಅನೇಕ ಗ್ರಾಮೀಣ ಭಾಗಕ್ಕೂ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಇದೇ ರೀತಿ ಮುಂದುವರೆದರೆ ಜನರ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು ಪಶು ವೈದ್ಯ ಡಾ। ಗೋವಿಂದ ಪ್ರತಿಕ್ರೀಯೆ ನೀಡಿದ್ದು, ಕೂಡಲೇ ಪರಿಶೀಲನೆ ನಡೆಸಿ, ಆ ಪ್ರದೇಶದಲ್ಲಿ ಯಾವ ತಳಿ ಮೀನುಗಾರಿಕೆ ಮಾಡಲಾಗುತ್ತಿದೆ ಎಂದು ಖಚಿತ ಪಡಿಸುವುದಾಗಿ ತಿಳಿಸಿದ್ದಾರೆ.
-ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.