ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಿ
Team Udayavani, May 20, 2018, 11:21 AM IST
ಬಸವಕಲ್ಯಾಣ: ತಾಂತ್ರಿಕ ಕ್ಷೇತ್ರದಲ್ಲಿ ಆಗುವ ಬದಲಾವಣೆ ಗಮನಿಸಿ ವಿದ್ಯಾರ್ಥಿಗಳು ಸಮಯಕ್ಕೆ ಅನುಗುಣವಾಗಿ ವಿಚಾರಧಾರೆ ಬದಲಿಸುವುದು ಅಗತ್ಯವಾಗಿದೆ ಎಂದು ಆಟೋಡೆಸ್ಕ್ ಸಿಇಒ ಪ್ರದೀಪ ಕಲ್ಲೂರೆ ಅಭಿಪ್ರಾಯಪಟ್ಟರು.
ನಗರದ ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಕಲಬುರ್ಗಿ ವಿಭಾಗದ ಅಂತರ ಕಾಲೇಜು ಮಟ್ಟದ ಟೆಕ್ನೋ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ತಾಂತ್ರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕ್ರಿಯಾಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಂಡು ಕಾರ್ಯಪ್ರವತ್ತರಾಗಬೇಕು ಎಂದು ಹೇಳಿದರು.
ಕಲಬುರಗಿ ಪಿಡಿಎ ಕಾಲೇಜು ಪ್ರೊ| ಬಾಬುರಾವ್ ಶೇರಿಕಾರ ಮಾತನಾಡಿ, ನಮ್ಮ ವಿಚಾರ ಸಂಕಿರರ್ಣ ಕಾರ್ಯಕ್ರಮ ತಾಂತ್ರಿಕ ಸುಧಾರಣೆಗಾಗಿ ಪ್ರಯೋಗಿಸುತ್ತಾ ಹೊಸ ಆವಿಷ್ಕಾರಗಳಿಗೆ ನಾಂದಿಯಾಗಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂತಹ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ತಾಂತ್ರಿಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಸ್. ಬಿ. ಕಿವಡೆ ಮಾತನಾಡಿ, ಸಾಧನೆಗೆ ಸಾಧಿಸುವ ಮನಸ್ಸು ಮತ್ತು ಇದಕ್ಕೆ ಪೂರಕವಾದ ಪರಿಶ್ರಮ ಅವಶ್ಯ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ತಮ್ಮಲ್ಲಿಯ ಎಲ್ಲ ಶಕ್ತಿಯನ್ನು ಪರಿಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಯೋಜಕ ಪ್ರೊ| ಬಾಲಾಜಿ ದೇಶಮುಖ, ಪ್ರೊ| ವಿವೇಕಾನಂದ ಅಲೋಜಿ, ಪ್ರೊ| ಪ್ರವೀಣ ಪವಾರ, ಕಾಲೇಜು ಕುಲಸಚಿವ ಪ್ರೇಮಸಾಗರ ಪಾಟೀಲ ಇದ್ದರು. ಕಾರ್ಯಕ್ರಮದ ಸಂಚಾಲಕ, ವಿಭಾಗದ ಮುಖ್ಯಸ್ಥ ಪ್ರೊ| ದಯಾನಂದ ಶೀಲವಂತ ಸ್ವಾಗತಿಸಿದರು. ಪ್ರೊ| ಮೀನಾಕ್ಷಿ ಪವಾರ ನಿರೂಪಿಸಿದರು. ಪ್ರೊ| ರಾಹುಲ ರೆಡ್ಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.