ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿ: ಪ್ರಕಾಶ
Team Udayavani, Oct 5, 2018, 11:32 AM IST
ಹುಮನಾಬಾದ: ಸಂಘಟಿತ ಹೋರಾಟ ಮಾರ್ಗದಿಂದ ಮಾತ್ರ ಪಡಿತರ ವಿತರಕರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಮೆಂಡೋಳೆ ಹೇಳಿದರು.
ಪಟ್ಟಣದ ಭವಾನಿ ಮಂದಿರದಲ್ಲಿ ಗುರುವಾರ ನಡೆದ ಸಂಘದ ಕಾರ್ಯಕಾರಿ ಸಮಿತಿ ಜಿಲ್ಲಾ ಪದಾಧಿಕಾರಿಗಳ ಸಾಮಾನ್ಯ
ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಅಭಿವೃದ್ಧಿ ಪ್ರಶ್ನೆ ಬಂದಾಗ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಹಲವು ದಶಕಗಳಿಂದ ಪಡಿತರ ವಿತರಣೆಯನ್ನೇ ಜೀವಾಳವಾಗಿ ಮಾಡಿಕೊಂಡ ನಮ್ಮ ಬದುಕು ಈಗ ತೀರಾ ಸಂಕಷ್ಟದಲ್ಲಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ವಿಷಯದಲ್ಲಿ ರಾಜ್ಯದ ಈವರೆಗಿನ ಯಾವೊಂದು ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸದೇ ಅನ್ಯಾಯ ಮಾಡುತ್ತಿವೆ ಅಸಮಾಧಾನ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಘಟಕ
ಅಧ್ಯಕ್ಷ ಸುಧಾಕರ ರಾಜಗೀರಾ ಮಾತನಾಡಿ, ಪ್ರತಿಯೊಬ್ಬರಿಗೂ ಕಡ್ಡಾಯ ಪಡಿತರ ವಿತರಿಸುವುದು, ಪಿಡಿಎಸ್ ಮೂಲಕ ಸೀಮೆ ಎಣ್ಣೆ ವಿತರಿಸುವ ವ್ಯವಸ್ಥೆ ಜಾರಿಗೆ ತರುವುದು, ಚಂಢಿಗಡ್ ಮತ್ತು ಪಾಂಡಿಚೇರಿಯಲ್ಲಿರುವ ನೇರಸೌಲಭ್ಯ ವರ್ಗಾವಣೆ ಯೋಜನೆ ಕೈ ಬಿಡುವುದು, ಅಲ್ಲಿಯೂ ಪಿಡಿಎಸ್ ಯೋಜನೆ ಜಾರಿಗೆ ತರುವಂತೆ ಅವರು ಒತ್ತಾಯಿಸಿದರು.
ಪ್ರತಿ ಕ್ವಿಂಟಲ್ ಅಕ್ಕಿಗೆ 250ರೂ. ಕಮಿಷನ್ ನಿಗದಿಪಡಿಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತೀ ತಿಂಗಳು 30,000 ರೂ. ಕಮಿಷನ್ ಖಾತ್ರಿಪಡಿಸಬೇಕು. ದೇಶದಾದ್ಯಂತ ವಿತರಣೆ ಹಾಗೂ ಕಮಿಷನ್ ಏಕ ಮಾದರಿ
ಇರುವಂತೆ ನೋಡಿಕೊಳ್ಳುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್ 25ಕ್ಕೆ ನವದೆಹಲಿ ರಾಮಲೀಲಾ ಮೈದಾನದಲ್ಲಿ ಪಡಿತರ ವಿತರಕರ ಜೈಲ್ ಭರೋ ಕಾರ್ಯಕ್ರಮ ನಡೆಯಲಿದೆ. ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಶಿವರಾಯ್ ಮೋಳಕೇರಾ, ಕಾರ್ಯದರ್ಶಿ ಚಂದ್ರಕಾಂತ ಕೋಟೆ ಮಾತನಾಡಿದರು. ಸಂಘದ ಹಿರಿಯ ಸದಸ್ಯರಾದ ಹುಲೆಪ್ಪ ಠಾಕೂರ, ಹುಲೆಪ್ಪ ಮುಸ್ತಾಪುರ, ವೀರಣ್ಣ ಮಿರೆ, ಗುರುನಾಥ ತೀರ್ಥ, ಸುಭಾಷರಾವ್ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.