ಅರೆಯದ ಕಬ್ಬು; ಸೊರಗಿದ ಅನ್ನದಾತ
Team Udayavani, Feb 22, 2019, 9:29 AM IST
ಹುಮನಾಬಾದ: ಕಳೆದೊಂದು ತಿಂಗಳ ಹಿಂದೆಯಷ್ಟೇ ಕಬ್ಬು ನುರಿಸುವಿಕೆ ಆರಂಭಿಸಿರುವ ಬೀದರ್ ಸಹಕಾರ ಸಕ್ಕರೆ ಯಂತ್ರೋಪಕರಣ ತಾಂತ್ರಿಕ ದೋಷದಿಂದ ಮತ್ತೆ ಕಳೆದ ಒಂದು ವಾರದಿಂದ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಿದೆ. ಇದರಿಂದ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಹಿಸಿದ ರೈತರ ಕಬ್ಬು ಕಾರ್ಖಾನೆ ಪ್ರಾಂಗಣದಲ್ಲಿ ಒಣಗುತ್ತಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಕಾರ್ಖಾನೆ ಆರಂಭಿಸುವುದೇ ಕಷ್ಟಸಾಧ್ಯವಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಬಿ. ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಂದ 2 ಕೋಟಿ ರೂ. ಆರ್ಥಿಕ ನೆರವಿನ ಪೈಕಿ 65 ಲಕ್ಷ ರೂ. ಅನುದಾನ ಜನವರಿ 10ರಂದು ಕಾರ್ಖಾನೆ ಕಬ್ಬು ನುರಿಸುವಿಕೆ ಆರಂಭಿಸಿದ್ದರು. ಆರಂಭದಿಂದ ಈ ವರೆಗೆ ಒಟ್ಟು 68,869 ಸಾವಿರ ಟನ್ ಕಬ್ಬು ಯಶಸ್ವಿಯಾಗಿ ನುರಿಸಲಾಗಿದೆ.
ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಫೆ.14ರಿಂದ ಕಬ್ಬು ನುರಿಸುವಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಅನ್ನದಾತರ ಪಾಡು ಹೇಳತೀರದಾಗಿದೆ.
ಒಣಗುತ್ತಿರುವ ಕಬ್ಬು: ಕಬ್ಬು ನುರಿಸುವ ವಿಶ್ವಾಸದಿಂದ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆ ಪ್ರಾಂಗಣದಲ್ಲಿ ಲಾರಿಗಳಲ್ಲಿ ತುಂಬಿ ನಿಲ್ಲಿಸಿರುವ ಕಬ್ಬು ಮತ್ತು ಹೊಲಗಳಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟ ಕಬ್ಬು ದಿನದಿಂದ ದಿನಕ್ಕೆ ಒಣಗುತ್ತಿರಯವುದರಿಂದ ರೈತರ ಮುಖದಲ್ಲಿ ಕಳೆಯೇ ಇಲ್ಲದಂತೆ ಮಾಡಿದೆ.
ಆರ್ಥಿಕ ಸಂಕಷ್ಟದಲ್ಲಿ ರೈತರು: ಸದ್ಯ ಕಾರ್ಖಾನೆ ಪ್ರಾಂಗಣದಲ್ಲಿ ಕಟಾವು ಮಾಡಿ, 200ಕ್ಕೂ ಅಧಿಕ ಲಾರಿಗಳಲ್ಲಿ 2000ಕ್ಕೂ ಅಧಿಕ ಟನ್ ಕಬ್ಬು ದಿನೇ ದಿನೇ ಒಣಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅನ್ಯ ಕಾರ್ಖಾನೆಗೆ ಸಾಗಣೆ: ಲಾರಿಯಲ್ಲಿ ತುಂಬಿರುವ ಕಬ್ಬು ಒಣಗುತ್ತಿರುವ ಆತಂಕದಿಂದಾಗಿ ಅದೆಷ್ಟೋ ರೈತರು ಕಬ್ಬನ್ನು ತಾಲೂಕಿನ ಮೊಗದಾಳ ಹತ್ತಿರದ ಬೀದರ್ ಕಿಸಾನ್ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಕಲ್ಬುರ್ಗಿ ಜಿಲ್ಲೆ ಆಳಂದ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಗಿಸುವಲ್ಲಿ ನಿರತರಾಗಿದ್ದಾರೆ.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಇನ್ನು ವಿಳಂಬ ಮಾಡದೇ ಸಾಧ್ಯವಾದಷ್ಟು ಶೀಘ್ರ ಕಬ್ಬು ನುರಿಸುವಿಕೆ ಆರಂಭಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆನ್ನುವುದು ಅನ್ನದಾತರ ಅಂಬೋಣ.
ಬೀದರ್ ಸಹಕಾರ ಸಕ್ಕರೆ ಆರಂಭಗೊಂಡಿದ್ದಕ್ಕೆ ಸಂತಸ ಪಟ್ಟಿದ್ದೆ. ನಮ್ಮ 6 ಎಕರೆ ತೋಟದಲ್ಲಿ 160 ಟನ್‌ಗಿಂತಲೂ ಅಧಿಕ ಕಬ್ಬು ಬೆಳೆಯಲಾಗಿದೆ. ಆ ಪೈಕಿ 100 ಟನ್ ಕಬ್ಬು ನುರಿಸಲಾಗಿದೆ. ಉಳಿದ 30 ಟನ್ ಕಾರ್ಖಾನೆ ಪ್ರಾಂಗಣದಲ್ಲಿ ಒಣಗಿದೆ. ಈಗಾಗಲೇ ಕಟಾವು ಮಾಡಿದ 30 ಟನ್ ಕಬ್ಬು ಸಹ ತನ್ನ ತೂಕ ಕಳೆದುಕೊಳ್ಳುತ್ತಿದೆ. ಈ ಹಾನಿಗೆ ಹೊಣೆ ಯಾರು?.
ರಾಜಣ್ಣ ಹುಡಗೀಕರ್, ಕಬ್ಬು ಬೆಳೆಗಾರ, ಹಣಕುಣಿ
ಬಾಯ್ಲರ್‌ನಲ್ಲಿ ಕಂಡುಬಂದ ದೋಷ ಈಗಾಗಲೇ ಸರಿಪಡಿಸಲಾಗಿದೆ. ಈಗ ಟರ್ಬನ್ ಎಲೆಕ್ಟ್ರಿಕಲ್ ವಿಭಾಗದಲ್ಲಿ ಮುಖ್ಯ ಬೇರಿಂಗ್ ಕೆಟ್ಟು ಹೋಗಿದ್ದರಿಂದ ಅನಿವಾರ್ಯವಾಗಿ ಕಬ್ಬು ನುರಿಸುವಿಕೆ ಕಾರ್ಯ ಸ್ಥಗಿತಗೊಂಡಿದೆ. ಸರಪಡಿಸಲು ಈಗಾಗಲೇ ಹೈದ್ರಾಬಾದನಿಂದ ತಜ್ಞ ಎಂಜಿನಿಯರ್‌ಗಳನ್ನು ಬಂದ್ ದುರಸ್ತಿ ಕೈಗೊಳ್ಳುತ್ತಿದ್ದಾರೆ. ಶನಿವಾರ ಅಥವಾ ರವಿವಾರ ಕಬ್ಬು ನುರಿಸುವಿಕೆ ಆರಂಭಗೊಳ್ಳಲಿದೆ.
ಒಬ್ಬಣಗೋಳ್ ವ್ಯವಸ್ಥಾಪಕ ನಿರ್ದೇಶಕರು, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ
ಶಶಿಕಾಂತ ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.