ಹದವಾದ ಮಳೆಗೆ ಹಳ್ಳ-ಕೊಳ್ಳ ಭರ್ತಿ
Team Udayavani, Jun 11, 2018, 10:27 AM IST
ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗುತ್ತಲಿದ್ದು, ಹಳ್ಳ, ಕೊಳ್ಳ, ಚೆಕ್‌ಡ್ಯಾಮ್‌ಗಳು ಮೈದುಂಬಿ ಹರಿಯುತ್ತಿವೆ.
ಮೂರು ದಿನಗಳ ಹಿಂದೆ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ನಸುಕಿನ ಜಾವ ಸುರಿದ ಮಳೆಯಿಂದ ಭೂಮಿ
ತಣ್ಣಗಾಗಿತ್ತು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು 1 ಗಂಟೆ ಕಾಲ ಸುರಿದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಸಂತಸ ಮೂಡಿದೆ.
ಕೆಲವು ವರ್ಷಗಳಿಂದ ಮಳೆ ಕೊರತೆಯಿಂದ ನಲುಗಿದ್ದ ತಾಲೂಕಿನ ರೈತರು ಈ ವರ್ಷ ಉತ್ತಮ ಮಳೆ-ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕೃಷಿ ಇಲಾಖೆಯ ಮಾಹಿತಿ ಮೇರೆಗೆ 2018ರ ಜ.1ರಿಂದ ಮೇ 31ರ ವರೆಗೆ ತಾಲೂಕಿನ ವಾಡಿಕೆ ಮಳೆ 75ಮಿ.ಮೀ. ಇದೆ. ಇದರಲ್ಲಿ 64 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ 15 ಮಿ.ಮೀ. ಮಳೆಯ ಕೊರತೆ ಇತ್ತು.
ಜೂ.1ರಿಂದ 8ರ ವರೆಗೆಯೇ ಒಂದು ವಾರದ ವಾಡಿಕೆ ಮಳೆ 26 ಮಿ.ಮೀ. ಇದ್ದರೆ, ಎರಡು ದಿನಗಳಲ್ಲಿ 97 ಮಿ.ಮೀ.
ಮಳೆಯಾಗಿದೆ. ಒಟ್ಟಿನಲ್ಲಿ ಜ.1ರಿಂದ ಜೂ.8ರ ವರೆಗೆ ವಾಡಿಕೆ ಮಳೆ 102 ಮಿ.ಮೀ. ದೆ. ಕಳೆದ ಎರಡು ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಇದುವರೆಗೆ 161 ಮಿ.ಮೀ. ಮಳೆಯಾಗಿದೆ. ಹೀಗಾಗಿ ವಾಡಿಕೆಗಿಂತ 58 ಮಿ.ಮೀ. ಮಳೆ ಹೆಚ್ಚುವರಿಯಾಗಿದ್ದು, ಮಳೆಯಾಧಾರಿತ ಕೃಷಿ ಮಾಡುವ ರೈತರ ಮುಖದಲ್ಲಿ ಸಂತಸ ಮೂಡಿದೆ.
ಶನಿವಾರ ಸುರಿದ ಮಳೆ ಪ್ರಮಾಣ: ಭಾಲ್ಕಿ ಹೋಬಳಿ 40.8 ಮಿ.ಮೀ., ನಿಟ್ಟೂರ ಹೋಬಳಿ 48, ಖಟಕಚಿಂಚೋಳಿ ಹೋಬಳಿ 26.3, ಸೈಗಾವ ಹೋಬಳಿ 47, ಲಖಣಗಾಂವ ಹೋಬಳಿ 34.5, ಹಲಬರ್ಗಾ ಹೋಬಳಿಯಲ್ಲಿ 35.4 ಮಿ.ಮೀ., ಒಟ್ಟಿನಲ್ಲಿ ತಾಲೂಕಿನ ಸರಾಸರಿ ಮಳೆಯ ಪ್ರಮಾಣ 38.6 ಮಿ.ಮೀ. ಇದೆ.
ಬೀರಿ(ಬಿ), ಅಂಬೆಸಾಂಗವಿ, ವಳಸಂಗ, ತಳವಾಡ(ಕೆ), ಕದಲಾಬಾದ್, ಕರಡ್ಯಾಳ, ಕೋನಮೇಳಕುಂದಾ ಸೇರಿದಂತೆ ಮುಂತಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಬಹುತೇಕ ಕಡೆಗಳಲ್ಲಿ ಸಣ್ಣಪುಟ್ಟ ಹಳ್ಳ ಕೊಳ್ಳ, ಚೆಕ್ ಡ್ಯಾಮ್‌ಗಳು ತುಂಬಿ ಹರಿಯುತ್ತಿವೆ.
ತಾಲೂಕಿನಲ್ಲಿ ಎರಡೂಮೂರು ದಿನಗಳಿಂದ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.