ಹುಲಸೂರ ಶ್ರೀಗಳಿಗೆ ಡಾಕ್ಟರೆಟ್: ಅದ್ದೂರಿ ಮೆರವಣಿಗೆ
Team Udayavani, Aug 14, 2017, 12:20 PM IST
ಬಸವಕಲ್ಯಾಣ: ಚೆನ್ನೈನ ಭಾರತ ಶಾಂತಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಹುಲಸೂರನ ಶ್ರೀ ಗುರು ಬಸವೇಶ್ವರ
ಸಂಸ್ಥಾನ ಮಠದ ಪಿಠಾ ಧಿಪತಿ ಡಾ| ಶಿವಾನಂದ ಮಹಾಸ್ವಾಮೀಜಿ ಅವರಿಗೆ ಹುಲಸೂರನಲ್ಲಿ ರವಿವಾರ ಸಂಜೆ ಭವ್ಯ ಸ್ವಾಗತ ನೀಡಲಾಯಿತು. ಶ್ರೀಗಳು ಚೆನ್ನೈನಿಂದ ಗ್ರಾಮಕ್ಕೆ ಆಗಮಿಸುತ್ತಿದಂತೆ ಗ್ರಾಮದ ಗುರುಬಸವೇಶ್ವರ ಪ್ರೌಢಶಾಲೆ ಬಳಿ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಶ್ರೀಗಳನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಗಾಂ ಧಿ, ಲಕ್ಷ್ಮೀಚೌಕ್, ಚೌಕಿ ಮಾರ್ಗವಾಗಿ ಗುರು ಬಸವೇಶ್ವರ ಮಠದ ವರೆಗೆ ಮೆರವಣಿಗೆ ನಡೆಯಿತು. ರಸ್ತೆಯುದಕ್ಕೂ ನಿಂತ ಜನ ಭಕ್ತಿಯಿಂದ ಪುಷ್ಪ ವೃಷ್ಟಿ ಮಾಡಿ ಶ್ರೀಗಳನ್ನು ಸ್ವಾಗತಿಸಿದರು. ಜಯ ಘೋಷಗಳು, ಫಟಾಕಿ ಸದ್ದಿನ ಸಂಭ್ರಮ, ವಿದ್ಯಾರ್ಥಿಗಳ ಕೋಲಾಟ, ಲೇಜಿಮ್ ಪ್ರದರ್ಶನ ಮೆರವಣಿಗೆಯಲ್ಲಿ ಗಮನಸೆಳೆದವು. ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೊಣಗಾಂವಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಶಿನಾಥ ಬೀರಗೆ, ಶ್ರೀವೀರಭದ್ರೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಕಾಶಿನಾಥ ಪಾರಶೆಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ಮುಖಂಡರಾದ ಬಾಬುರಾವ್ ಗೌಂಡಗಾವೆ, ಎಂ.ಜಿ. ರಾಜೋಳೆ, ಚಂದ್ರಕಾಂತ ಧೇಟೆ, ಶಾಂತಕುಮಾರ ಹಾರಕೂಡೆ, ಬಸವರಾಜ ಡೊಣಗಾಂವಕರ್, ಸೋಮನಾಥ ನಂದಗೆ, ಪ್ರೊ| ಚಂದ್ರಶೇಖರ್ ಕಾಡಾದಿ, ಸಂಗಮೇಶ ಭೋಪಳೆ, ಶಿವಲಿಂಗಯ್ಯ ಕನ್ನಾಡೆ, ರವಿ ತೋಗರಗೆ, ಬಸವರಾಜ ಜಡಗೆ, ರಾಜಕುಮಾರ ನಿಡೋಡೆ, ಮಡೋಳಿ ಖಪಲೆ, ರಮಾಕಾಂತ ತೋಟದ ಹಾಗೂ ವಿವಿಧ ಪಕ್ಷಗಳ ಮುಖಂಡರು, ಗಣ್ಯರು, ಸಂಘ-ಸಂಸ್ಥೆ ಪದಾ ಧಿಕಾರಿಗಳು, ಮಠದ ಭಕ್ತರು ಭಾಗವಹಿಸಿದ್ದರು. ಮಠದಲ್ಲಿ ಕಾರ್ಯಕ್ರಮ: ನಂತರ ಶ್ರೀಗುರುಬಸವೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆ ಪ್ರಮುಖರು, ಸಾರ್ವಜನಿಕರು ಶ್ರೀಗಳನ್ನು ಸನ್ಮಾನಿಸಿದರು. ಜಿಪಂ ಸದಸ್ಯ ಸುಧಿಧೀರ ಕಾಡಾದಿ ಮಾತನಾಡಿ, ಮಾನವೀಯ, ಪರೋಪಕಾರಿ ಸೇವೆ ಹಾಗೂ ಪ್ರಶಂಶನಾರ್ಹ ಕಾರ್ಯ ಸಾಧನೆ ಗುರುತಿಸಿ
ಶ್ರೀಗಳಿಗೆ ಚೆನ್ನೈನ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪ್ರದಾನ ಮಾಡಿ ವಿವಿ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದು ಬಣ್ಣಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಬಸವ ತತ್ವ ಪ್ರಚಾರದೊಂದಿಗೆ ವ್ಯಸನ
ಮುಕ್ತವಾದ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲು ಈ ಹಿಂದೆ ಶ್ರೀಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪಾದ
ಯಾತ್ರೆ ನಡೆಸಿದ ಕಾರ್ಯ ದಾಖಲಾರ್ಹ ಎಂದು ಪ್ರಸಂಶಿಸಿದರು. ಬಸವ ತತ್ವ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಶ್ರೀಗಳು, ನಾಟಕ, ಕವನ ಸಂಕಲನ, ಜಾನಪದ ಗೀತೆಗಳು ಸೇರಿದಂತೆ ಒಟ್ಟು 7 ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ. ಶ್ರೀಗಳಿಗೆ ಗೌರವ ಡಾಕ್ಟರೆಟ್ ಸಿಕ್ಕಿರುವುದು ಶ್ರೀಗಳ ಕಾರ್ಯಕ್ಕೆ ಸಂದ ಗೌರವವಾಗಿದೆ ಎಂದರು. ಡಾ| ವಿ.ಎಸ್.ಮಠಪತಿ, ಪ್ರೊ| ಚಂದ್ರಶೇಖರ ಕಾಡಾದಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.