ರಾಮ ಮಂದಿರಕ್ಕೆ ದೇಣಿಗೆ ಮಹಾಪೂರ
ಬೀದರ ಜಿಲ್ಲೆಯಿಂದ 4.5 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಸಾಧ್ಯತೆ ಇದೆ.
Team Udayavani, Feb 3, 2021, 4:56 PM IST
ಬೀದರ: ಅಯೋಧ್ಯೆಯಲ್ಲಿ ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಡೆಯುತ್ತಿರುವ ನಿಧಿ ಸಮರ್ಪಣಾ ಅಭಿಯಾನಕ್ಕೆ ರಾಮ ಭಕ್ತರಿಂದ ಅಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರವಾಸಿ ಜಿಲ್ಲೆ ಬೀದರನಿಂದಲೂ ಕೇವಲ 15 ದಿನಗಳಲ್ಲಿ 2 ಕೋಟಿ ರೂ. ದೇಣಿಗೆ ಹರಿದು ಬಂದಿದೆ.
ನಿಧಿ ಸಂಗ್ರಹಕ್ಕಾಗಿ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ತಂಡಗಳು ಪರಿಶ್ರಮಿಸುತ್ತಿವೆ. ಕಾನೂನು ತೊಡಕುಗಳೆಲ್ಲ ನಿವಾರಣೆಗೊಂಡು ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಸುಮಾರು 1100 ಕೋಟಿ ರೂ. ವೆಚ್ಚದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದರ ಜವಾಬ್ದಾರಿ ಹೊತ್ತಿದೆ. ಮಂದಿರ ರಾಷ್ಟ್ರೀಯ ಸ್ಮಾರಕವಾಗಿ ರೂಪಿಸುವ ದಿಸೆಯಲ್ಲಿ ಟ್ರಸ್ಟ್ ದೇಶ-ವಿದೇಶಗಳ ರಾಮನ ಅನುಯಾಯಿಗಳಿಂದ ನಿಧಿ
ಪಡೆಯುತ್ತಿದೆ. ಈ ಕಾರ್ಯಕ್ಕೆ ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳು ಕೈಜೋಡಿಸಿವೆ.
ಶ್ರೀರಾಮ ಮಂದಿರ ಸಂಪೂರ್ಣವಾಗಿ ರಾಮನ ಭಕ್ತರಿಂದಲೇ ನಿರ್ಮಿಸಲು ನಿರ್ಧರಿಸಿರುವುದು ವಿಶೇಷ. ಈ ಮೂಲಕ ಈ ಕಾರ್ಯದಲ್ಲಿ ಎಲ್ಲರ ಭಾಗಿದಾರಿಕೆ ಇರಬೇಕೆಂಬ ಉದ್ದೇಶದಿಂದ ಧನ ಸಂಗ್ರಹ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಭಕ್ತರಿಂದ ವೈಯಕ್ತಿಕ, ಕುಟುಂಬದ ಪರವಾಗಿ ಹಣ ದೇಣಿಗೆ ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಜ.15ಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಫೆ.1ರವರೆಗೆ ಅಂದಾಜು 2 ಕೋಟಿ ರೂ. ನಿಧಿ ಸಂಗ್ರಹವಾಗಿದೆ.
ಫೆ.5ರವರೆಗೆ ಅಭಿಯಾನ ನಡೆಯಲಿದ್ದು, ಬೀದರ ಜಿಲ್ಲೆಯಿಂದ 4.5 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಸಾಧ್ಯತೆ ಇದೆ. ಭಕ್ತರು 10 ರೂ.ಗಳಿಂದ ತಮ್ಮ ಶಕ್ತಿಗೆ ಅನುಸಾರ ಹಣ ನೀಡುತ್ತಿದ್ದು, ಇದುವರೆಗೆ ಗುತ್ತಿಗೆದಾರರೊಬ್ಬರು ಅತಿ ಹೆಚ್ಚು 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮುಸ್ಲಿಂ ಬಾಂಧವರು ಸೇರಿದಂತೆ ಜಾತಿ-ಧರ್ಮ ಎನ್ನದೇ ನಿಧಿ ಸಂಗ್ರಹಕ್ಕೆ ಕೈಜೋಡಿಸಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ. ನಿಧಿ ಸಂಗ್ರಹ ಅಭಿಯಾನಕ್ಕಾಗಿ ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೆ ಪ್ರಮುಖ ಮತ್ತು ಸಹ ಪ್ರಮುಖರ ತಂಡಗಳನ್ನು ರಚಿಸಿದ್ದು, ಮನೆ-ಮನೆ, ಅಂಗಡಿಗಳ ಭೇಟಿ ಮೂಲಕ ದೇಣಿಗೆ ಸಂಗ್ರಹ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿವೆ. ಪ್ರತಿ ದಿನ ಸಂಗ್ರಹವಾಗುವ ನಿಧಿಯನ್ನು ಟ್ರಸ್ಟ್‌ನ ಬ್ಯಾಂಕ್‌ಗೆ ಜಮೆ ಮಾಡಿ, ನಂತರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೊಬೈಲ್ ಆ್ಯಪ್‌ಗೆ ದೇಣಿಗೆದಾರರ ಮಾಹಿತಿ ನಮೂದಿಸಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರ ಧಾರ್ಮಿಕ ಸಂಕೇತವಷ್ಟೇ ಅಲ್ಲ, ಭಾರತದ ಸಂಸ್ಕೃತಿಯ ಪ್ರತಿಬಿಂಬ. ಅದೊಂದು ರಾಷ್ಟ್ರ ಮಂದಿರ. ಈ ಐತಿಹಾಸಿಕ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕು. ಒಬ್ಬರಿಂದ ಆಯ್ತು ಎನ್ನುವುದಕ್ಕಿಂತ ದೇಶಾದ್ಯಂತ ಜನರಿಂದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಲಾಗುತ್ತಿದ್ದು, ಬೀದರ ಜಿಲ್ಲೆಯಲ್ಲಿ ಈವರೆಗೆ 2 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ. ಫೆ.5ರವರೆಗೆ 4.5 ಕೋಟಿ ರೂ. ನಿಧಿ ಸಮರ್ಪಣೆ ಆಗಲಿದೆ. ಜಾತಿ, ಧರ್ಮ ಎನ್ನದೇ ಸಮುದಾಯದ ಸಹಭಾಗಿತ್ವದಲ್ಲಿ ಈ ಅಭಿಯಾನ ನಡೆಯುತ್ತಿರುವುದು ಸಾಮಾಜಿಕ ಸಾಮರಸ್ಯ ಬೆಸೆದಂತಾಗುತ್ತಿದೆ.
ಜೈಭೀಮ ಸೋಲಾಪುರೆ, ಜಿಲ್ಲಾ ಪ್ರಮುಖ, ನಿಧಿ ಸಮರ್ಪಣಾ ಅಭಿಯಾನ ಬೀದರ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.