ಅಶಾಂತಿಗೆ ಅವಕಾಶ ಬೇಡ: ಎಸ್‌ಪಿ
Team Udayavani, Aug 22, 2017, 12:53 PM IST
ಬಸವಕಲ್ಯಾಣ: ಪರಸ್ಪರ ಸೌಹಾರ್ದ-ಶಾಂತಿಯುತವಾಗಿ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸೂಸೂತ್ರವಾದ ಆಚರಣೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಹೇಳಿದರು. ಗಣೇಶೋತ್ಸವ ಹಾಗೂ ಬಕ್ರೀದ ಹಬ್ಬದ ನಿಮಿತ್ತ ನಗರ ಪೊಲೀಸ್ ಠಾಣೆಯಿಂದ ಸಿಪಿಐ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಈ ನೆಲದಲ್ಲಿ ಅಶಾಂತಿಗೆ ಅವಕಾಶ ನೀಡಬಾರದು ಎಂದರು. ಗಣೇಶ ಮೆರವಣಿಗೆ ಸಂದರ್ಭದಲ್ಲಿ ಸಮಯ ಮತ್ತು ನಿಯಮಗಳನ್ನು ಎಲ್ಲರೂ ಪಾಲೀಸಬೇಕು. ಮೆರವಣಿಗೆ ವೇಳೆ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು. ಮದ್ಯ ಸೇವಿಸಿ ಸಮಸ್ಯೆ ಸೃಷ್ಟಿಸಲು ಯತ್ನಿಸಿದರೆ ಮಂಡಳಿಯವರು ಪೊಲೀಸರ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವದು ಎಂದ ಅವರು, ಮೆರವಣಿಗೆಯಲ್ಲಿ ಡಿಜೆ ಬಳಸುವ ಸಂಬಂಧ ನಾಳೆ ಬೀದರನಲ್ಲಿ ನಡೆಯಲಿರುವ ಸಭೆಯಲ್ಲಿ ತಿಮಗೊಳಿಸಲಾಗುವುದು
ಎಂದರು. ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಮಾತನಾಡಿ, ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸ ಮತ್ತು ಹಿನ್ನೆಲೆ ಇದ್ದು, ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಉತ್ಸವ ಆಚರಿಸಬೇಕು. ಗಣೇಶೋತ್ಸವ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ. ಬೆರೆಯವರಿಗೆ ತೊಂದರೆ ಆಗದಂತೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಮೀರ ಅಜರಲಿ ನವರಂಗ ಮಾತನಾಡಿ, ಗಣೇಶ ಉತ್ಸವದ ವೇಳೆ ಯಾವುದೇ ಸಮಸ್ಯೆಯಾಗದಂತೆ ನಗರ ಸಭೆಯಿಂದ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು. ನಗರದ ರಸ್ತೆ ಗುಂಡಿಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಮಂಠಾಳ ಸಿಪಿಐ ಶಿವನಗೌಡ ಪವಾಡಶೆಟ್ಟಿ ಮಾತನಾಡಿದರು. ತಹಶೀಲ್ದಾರ ಕೀರ್ತಿ, ನಗರಸಭೆ ಪೌರಾಯುಕ್ತ ಮಹ್ಮದ ಯುಸೂಫ್, ಜೆಸ್ಕಾಂ ಇಂಜಿನಿಯರ್ ಜಾಫರ್ ಉಪಸ್ಥಿತರಿದ್ದರು. ಎಸ್‌ಐ ಗುರು ಪಾಟೀಲ ಸ್ವಾಗತಿಸಿದರು. ಸಿಪಿಐ ಅಲಿಸಾಬ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಜನಪ್ರತಿನಿ ಗಳು, ಮುಖಂಡರು, ಸಂಘ-ಸಂಸ್ಥೆ ಪದಾದಿಕಾರಿಗಳು, ಗಣ್ಯರು, ಗಣೇಶ ಮಂಡಳಗಳ ಪದಾದಿಕಾರಿಗಳು, ಶಾಂತಿ ಸಭೆ ಸದಸ್ಯರು, ಸಾರ್ವಜನಿಕರು ಭಾಗವಹಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.