ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ರದ್ದು: ಡಾ।ಚಂದ್ರಶೇಖರ್ ಪಾಟೀಲ್
Team Udayavani, Nov 3, 2022, 11:16 AM IST
ಹುಮನಾಬಾದ್ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ರದ್ದು ಮಾಡುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.
ಹುಮನಾಬಾದ ಪಟ್ಟಣದ ಹಳೆ ತಹಸೀಲ್ದಾರ ಕಚೇರಿ ಆವರಣದಲ್ಲಿ ಗುರುವಾರ ಬೆಳಿಗ್ಗೆ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ಎನ್.ಪಿ.ಎಸ್ ರದ್ದು ಮಾಡಿ, ಓಪಿಎಸ್ ಜಾರಿ ಮಾಡಿ ಎಂದು ನಡೆಯುತ್ತಿರುವ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ. ಮೊದಲು ಎನ್.ಪಿ.ಎಸ್ ರದ್ದು ಮಾಡಿ ಓಪಿಎಸ್ ಜಾರಿ ಆಗುತ್ತದೆ ಮಾಡುತ್ತಾರೆ ಎಂದ ಅವರು, ಸರ್ಕಾರಿ ನೌಕರರ ನಿವೃತ್ತಿ ಸಮಯದಲ್ಲಿ ಅನೇಕ ತಾಪತ್ರೆಗಳು ಇರುತ್ತವೆ. ನಿವೃತ್ತಿ ನಂತರ ನೌಕರರ ತಾಪತ್ರೆಗಳು ತಪ್ಪಿಸಬೇಕೆಂದರೆ ಓಪಿಎಸ್ ಜಾರಿಗೆ ಬರಬೇಕು. ಸರ್ಕಾರಿ ನೌಕರರು ಒಂದಾಗಿ ನಡೆಸುವ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಶಾಂತರಾಮ ಮಾತನಾಡಿ, ಎನ್.ಪಿ.ಎಸ್ ರದ್ದು ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಕಲ್ಪ ಯಾತ್ರೆನಡೆಸುತ್ತಿದ್ದು, ನಮ್ಮ ಹೋರಾಟಕ್ಕೆ ಎಲ್ಲಾಕಡೆಗಳಲ್ಲಿ ಉತ್ತಮ ಬೆಂಬಲ ದೊರೆಯುತ್ತಿದೆ. ಚುನಾವಣಾ ಹೊತ್ತಿನಲ್ಲಿ ನೌಕರರ ಬೇಡಿಕೆಗಳು ಈಡೇರಿರುವ ಭರವಸೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಕಾರ್ಯದರ್ಶಿ ನಾಡಗೌಡ, ಸಂಗಣ್ಣಾ, ತಾಲೂಕ ಅಧ್ಯಕ್ಷ ಶಿವಕುಮಾರ ಕಂಪ್ಲಿ, ಪ್ರಧಾನ ಕಾರ್ಯದರ್ಶಿ ಜೈರಾಜ ಹನುಮಶಟ್ಟಿ, ರವಿ ಪಂಚಾಳ, ಮಲ್ಲಪ್ಪ ಜಗಜಿವಾಣಿ, ಗುರುಶಾಂತ ವಾರದ, ಬಸವರಾಜ ಆರಾಳ, ಚಂದ್ರಶೇಖರ ಕಾರಕೊಳ, ಪ್ರಕಾಶ ಶಾಹಾಪೂರೆ, ಪ್ರದೀಪ ಕುಂಬಾರ, ಡಾ। ಶಾಂತು ಸಿದ್ದೇಶ್ವರ, ಡಾ। ಶಶಿಧರ ಧುಮ್ಮನಸೂರೆ, ನಾಗಾರಜುನ ರೆಡ್ಡಿ, ವಿಶಾಲ ಕುಮಟಾದ ತುಗಾಂವಕರ, ಆತೀಷ ದಾಂಡೆಕರ, ಮಾರ್ತಂಡ ತಳಗೇರಿ, ಕಿರಣ ಸಲಗರ, ತಿಪ್ಪಣ ಕೆ, ಡಾ। ನಾಗನಾಥ ಹುಲಸೂರೆ, ಶಾಂತವೀರ ಯಲಾಲ,ಅರವಿಂದ ಧುಮಾಳೆ ಸೇರಿದಂತೆ ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.