ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥ
Team Udayavani, Jan 9, 2022, 3:06 PM IST
ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥಬೀದರ: ಉತ್ತಮ ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮಾನವೀಯ ಮೌಲ್ಯಗಳಲ್ಲಿ ಅಡಗಿದೆ. ಮನಸ್ಸು ಮಲ್ಲಿಗೆಯಾದರೆ ಮಾತಲ್ಲಿ ಪರಿಮಳ ಬರುತ್ತದೆ. ವಿದ್ಯಾರ್ಥಿಗಳ ಮನಸ್ಸು ಮಲ್ಲಿಗೆಯಂತಾಗಿರಲಿ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಿಲ್ಪಾ ಬಹೇನ್ ಹೇಳಿದರು.
ನಗರದ ಸಿದ್ದಾರ್ಥ ಪದವಿ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವ ನಿಮಿತ್ತ ಆಯೋಜಿಸಿದ್ದ “ಶಿಕ್ಷಣದಲ್ಲಿ ಮೌಲ್ಯಗಳು’ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಮೋಸ ವಂಚನೆ, ಅನ್ಯಾಯ ಅತ್ಯಾಚಾರಗಳಂತಹ ಅಮಾನವೀಯ ಕೃತ್ಯಗಳು ಉನ್ನತ ಶಿಕ್ಷಣ ಪಡೆದವರಿಂದಲೇ ನಡೆಯುತ್ತಿವೆ. ಅವರಲ್ಲಿನ ಉತ್ತಮ ಶಿಕ್ಷಣ ಮೌಲ್ಯಗಳ ಬಗೆಗಿನ ತಿಳಿವಳಿಕೆಯ ಕೊರತೆಯೇ ಕಾರಣ. ಹಾಗಾಗಿ ಆತ್ಮವಿಶ್ವಾಸ, ಧೈರ್ಯ, ಸವಿನಯತೆ, ವಿದ್ಯೆ, ಪ್ರಮಾಣಿಕತೆ, ಮಧುರವಾದ ಮಾತುಗಳಂಥ ಉತ್ತಮ ಶಿಕ್ಷಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಹುರುದೇವಿ ಅಕ್ಕ ಮಾತನಾಡಿ, ಜೀವನ ಸಾರ್ಥಕತೆಗೆ ಉತ್ತಮ ಮೌಲ್ಯಗಳ ಅವಶ್ಯಕತೆ ಇದೆ ಎಂದರು. ಪ್ರಾಚಾರ್ಯ ಪ್ರೊ| ವಿಜಯಕುಮಾರ ದೊಡ್ಡಗಾಣಿಗೇರ್ ಅಧ್ಯಕ್ಷತೆ ವಹಿಸಿ, ಜೀವನ ಮೌಲ್ಯ, ಮಾನವೀಯ ಮೌಲ್ಯಗಳು ಹಾಗೂ ಶಿಕ್ಷಣ ಮೌಲ್ಯಗಳು ಅವಿಭಾಜ್ಯಗಳಾಗಿವೆ. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಗುರಿ, ಸಾ ಧಿಸುವ ಛಲ, ಪ್ರಮಾಣಿಕ ಮತ್ತು ನಿರಂತರ ಪ್ರಯತ್ನ, ದೃಢವಾದ ಭಕ್ತಿ ಇವುಗಳಿದ್ದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ವಿಭಾಗದ ಸಂಯೋಜಕ ಪ್ರೊ| ರಾಜಕುಮಾರ ಸಿಂಧೆ ಸ್ವಾಗತಿಸಿದರು. ಪ್ರೊ ಬಸವರಾಜ ಸ್ವಾಮಿ ನಿರೂಪಿಸಿದರು. ಪ್ರೊ| ಗೋಪಾಲ ಬಡಿಗೇರ್ ವಂದಿಸಿದರು. ಕಾಲೇಜಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.