ರಂಗೇರಿದ ಕಸಾಪ ಚುನಾವಣೆ ಅಖಾಡ
Team Udayavani, Jan 15, 2021, 5:33 PM IST
ಬೀದರ: ಪ್ರವಾಸೋದ್ಯಮ ಜಿಲ್ಲೆ ಹೆಗ್ಗಳಿಕೆಯ ಬೀದರ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಕಾವು ತಣ್ಣಗಾಗುತ್ತಿದ್ದಂತೆ ಈಗ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಅಖಾಡ ರಂಗೇರುತ್ತಿದೆ.
ಅಧ್ಯಕ್ಷ ಗದ್ದುಗೆಗಾಗಿ ತೆರೆ ಮೆರೆಯಲ್ಲಿ ಕಸರತ್ತುಗಳು ಶುರುವಾಗಿವೆ. ಹಾಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವಧಿ ಬರುವ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಷ್ಟರ ಒಳಗಾಗಿ ಚುನಾವಣೆ ಆಗಬೇಕಿದೆ. ಅದರಂತೆ ಚುನಾವಣೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಅದಾಗಲೇ ಆಕಾಂಕ್ಷಿಗಳು ಸ್ಪರ್ಧೆಗೆ ಸಜ್ಜಾಗಿ ನಿಂತಿದ್ದಾರೆ. ತಮ್ಮ-ತಮ್ಮ ಬೆಂಬಲಿಗರ ಜತೆ ಸರಣಿ ಸಭೆಗಳು ನಡೆಸುವ ಮೂಲಕ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಸದಸ್ಯ ಮತದಾರರರಿಗೆ ನೇರ ಮತ್ತು ಮೊಬೈಲ್ ಮೂಲಕ ಸಂಪರ್ಕಿಸಿ ಪ್ರಚಾರಕ್ಕೂ ಸಹ ಚಾಲನೆ ಕೊಟ್ಟಿದ್ದಾರೆ. ಹಾಗಾಗಿ ಈ ಸಲ ಕಸಾಪ ಸಾರಥಿ ಯಾರು ಆಗಬಹುದು ಎಂಬ ಕುತೂಹಲ ಹೆಚ್ಚಿಸಿದೆ.
ಈ ಬಾರಿಯ ಚುನಾವಣೆಯ ಆಕಾಂಕ್ಷಿಗಳೆಲ್ಲರೂ ಯುವಕರೇ ಆಗಿರುವುದು ವಿಶೇಷ. ಪ್ರಸ್ತುತ ಅಧ್ಯಕ್ಷರಾಗಿರುವ ಸುರೇಶ ಚನಶೆಟ್ಟಿ ಮತ್ತೂಂದು ಅವಧಿಗೆ ಕಣಕ್ಕೆ ಇಳಿಯಲು ತಯ್ನಾರು ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಪ್ರತಿ ಸ್ಪರ್ದಿಯಾಗಿ ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇವರೊಟ್ಟಿಗೆ ಕರುನಾಡು ಸಾಂಸ್ಕೃತಿ ವೇದಿಕೆ ಅಧ್ಯಕ್ಷ ಡಾ| ಸಂಜುಕುಮಾರ ಅತಿವಾಳೆ ಅವರ ಹೆಸರು ಸಹ ಕೇಳಿ ಬರುತ್ತಿದೆ. ಮತದಾರರನ್ನು ಸೆಳೆಯಲು ಸಾಹಿತಿಗಳ ಗುಂಪುಗಳು ತಂತ್ರಗಾರಿಕೆ ಹೆಣೆಯಲು ಆರಂಭಿಸಿವೆ.
ಬೀದರ ಜಿಲ್ಲಾ ಕಸಾಪ ಅಂದಾಜು 15 ಸಾವಿರ ಸದಸ್ಯರನ್ನು ಹೊಂದಿದ್ದು, ಈ ಪೈಕಿ 6 ಸಾವಿರದಷ್ಟು ಸದಸ್ಯರು ಬೀದರ ತಾಲೂಕಿನಲ್ಲೇ ಇದ್ದಾರೆ. ಬುದ್ಧಿವಂತರ ಚುನಾವಣೆ ಎನಿಸಿಕೊಂಡಿರುವ ಪರಿಷತ್
ಚುನಾವಣೆಗೂ ಸಹ ರಾಜಕೀಯ ಲೇಪ ಪಡೆಯುತ್ತಿರುವುದರಿಂದ ಅಖಾಡ ಹೆಚ್ಚು ರಂಗೇರಲು ಕಾರಣವಾಗುತ್ತಿದೆ. ಮತದಾನದ ದಿನಗಳು ಸಮೀಪಿಸುತ್ತಿದ್ದಂತೆ “ವೋಟಿಗಾಗಿ ನೋಟು’ ವ್ಯವಸ್ಥೆ ಸಹ ಹೆಚ್ಚುತ್ತಿದೆ
ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್
ಕನ್ನಡ ಸಾಹಿತ್ಯ ಪರಿಷತ್ ಯಾರೊಬ್ಬರ ಸ್ವತ್ತಾಗಬಾರದು. ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖಗಳಿಗೆ ಅವಕಾಶ ಸಿಗುವಂತಾಗಬೇಕು. ಇದು ಹೆಚ್ಚಿನ ಸದಸ್ಯರ ಅಪೇಕ್ಷೆ ಸಹ ಇದೆ. ಬೀದರ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು, ಪರಿಣಾಮಕಾರಿಯಾಗಿ ನಡೆಯಬೇಕಿದೆ. ಮತದಾರರು ಅವಕಾಶ ನೀಡಿದರೆ ಕನ್ನಡದ ತೇರನ್ನು ಎಳೆದುಕೊಂಡು ಹೋಗುತ್ತೇವೆ. ಸದಸ್ಯರ ಜತೆಗೆ ಶೀಘ್ರ ಸಭೆ ಸೇರಿ ನನ್ನ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತೇನೆ.
ಡಾ| ಸಂಜೀವಕುಮಾರ ಅತಿವಾಳೆ,ಹಿರಿಯ ಸಾಹಿತಿ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.