72 ಗ್ರಾಪಂಗಳಿಗೆ ಚುನಾವಣೆ
Team Udayavani, Dec 24, 2020, 3:57 PM IST
ಬೀದರ: ಬೀದರ, ಔರಾದ ಮತ್ತು ಕಮಲನಗರ ತಾಲೂಕುಗಳಲ್ಲಿ ಡಿ. 27ರಂದು 2ನೇ ಹಂತದ ಮತದಾನ ನಡೆಯಲಿದೆ ಎಂದು ಡಿಸಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.
ಬೀದರ 33, ಔರಾದ 21 ಮತ್ತು ಕಮಲನಗರ 18 ಸೇರಿ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆಮತದಾನ ನಡೆಯಲಿದೆ. ಈ ಮೂರು ತಾಲೂಕುಗಳು ಪುರುಷ 2,07,886 ಮತ್ತುಮಹಿಳೆಯರು 1,94,286, ಇತರೇ 7 ಸೇರಿಒಟ್ಟು 4,02,179 ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಲಿದ್ದಾರೆ. ಬೀದರನಲ್ಲಿ 204 ಕ್ಷೇತ್ರದಲ್ಲಿ 615 ಸದಸ್ಯ ಸ್ಥಾನಗಳಿಗೆ, ಔರಾದನಲ್ಲಿ133 ಕ್ಷೇತ್ರದಲ್ಲಿ 389 ಸದಸ್ಯ ಸ್ಥಾನಗಳಿಗೆ ಮತ್ತು ಕಮಲನಗರದಲ್ಲಿ 100 ಕ್ಷೇತ್ರಗಳಲ್ಲಿ 281 ಸದಸ್ಯ ಸ್ಥಾನಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದೆ.
ಬೀದರ ತಾಲೂಕಿನಲ್ಲಿ ಒಟ್ಟು 43 ಸೂಕ್ಷ್ಮ, 32 ಅತೀಸೂಕ್ಷ್ಮ ಮತ್ತು 166 ಸಾಮಾನ್ಯ ಮತಗಟ್ಟಕೇಂದ್ರಗಳೆಂದು, ಔರಾದ ತಾಲೂಕಿನಲ್ಲಿ 30 ಸೂಕ್ಷ್ಮ, 39 ಅತೀ ಸೂಕ್ಷ್ಮ ಮತ್ತು 84 ಸಾಮಾನ್ಯಮತಗಟ್ಟೆಗಳೆಂದು, ಅದೇ ರೀತಿ ಕಮಲನಗರದಲ್ಲಿ23 ಸೂಕ್ಷ್ಮ, 11 ಅತೀ ಸೂಕ್ಷ್ಮ ಮತ್ತು 81 ಸಾಮಾನ್ಯ ಮತಗಟ್ಟೆ ಕೇಂದ್ರಗಳೆಂದು ಗುರುತಿಸಲಾಗಿದೆ. ಒಟ್ಟು 72 ಗ್ರಾಪಂಗಳ 1285 ಸ್ಥಾನಗಳಿಗೆಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸದೇ4 ಸ್ಥಾನ ಖಾಲಿ ಉಳಿದಿದ್ದು, 109 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದ್ದು, 1172 ಸ್ಥಾನಗಳಿಗೆಚುನಾವಣೆ ನಡೆಯಲಿದೆ. ಎಸ್‌ಸಿ 1007, ಎಸ್‌ಟಿ437, ಹಿಂದುಳಿದ ಅ ವರ್ಗದ 210, ಹಿಂದುಳಿದಬ ವರ್ಗ 20, ಸಾಮಾನ್ಯ 1715 ಸೇರಿ ಒಟ್ಟು 3389 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿಇರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದೋಬಸ್ತ್ ಗೆ ವ್ಯವಸ್ಥೆ: ಎರಡನೇ ಹಂತದ ಮತದಾನದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು 37 ಪಿಎಸ್‌ಐಗಳು, 5 ಸಿಪಿಐಗಳು ಮತ್ತು 3 ಡಿಎಸ್ಪಿಅವರನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ನಾಗೇಶ ಡಿ.ಎಲ್. ಅವರು ತಿಳಿಸಿದ್ದಾರೆ.
ಚುನಾವಣಾ ಸಿಬ್ಬಂದಿಗೆ ತರಬೇತಿ : ಜಿಲ್ಲೆಯಲ್ಲಿ ಎರಡನೇ ಹಂತದ ಮತದಾನ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಡೆಯಿತು. ನಗರದ ರಂಗಮಂದಿರ ಮತ್ತು ಗುರುನಾನಕ್ ಶಾಲೆಯಲ್ಲಿ ನಡೆದ ಮತಯಂತ್ರಗಳ ತರಬೇತಿಯಲ್ಲಿ 278 ಮತಗಟ್ಟೆ ಅಧಿಕಾರಿಗಳು ಹಾಗೂ 278 ಸಹಾಯಕ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿದ್ದರು. ಡಿಸಿ ರಾಮಚಂದ್ರನ್ ಆರ್. ಅವರು ತರಬೇತಿಸ್ಥಳಕ್ಕೆ ಭೇಟಿ ನೀಡಿ ತರಬೇತಿಯ ಬಗ್ಗೆ ಮಾಹಿತಿ ಪಡೆದರು. ಮತದಾನವು ಯಾವುದೇ ರೀತಿಯಲ್ಲಿ ಲೋಪವಾಗದಂತೆ ನಡೆಯಬೇಕು. ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಗೊಂದಲ ಏನೇ ಇದ್ದರೂ ಇಲ್ಲಿಯೇ ಕೇಳತಿಳಿದುಕೊಂಡು ಮತದಾನ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.