ಜ್ಞಾನದಿಂದಲೇ ಎಲ್ಲವೂ ಸಾಧ್ಯ: ಡಾ| ಅನ್ನದಾನೇಶ್ವರ ಶ್ರೀ
ಅಣ್ಣ ಬಸವಣ್ಣನವರು ನೀಡಿದ ಸಂಸ್ಕಾರ ಮರೆತು ಎಲ್ಲವನ್ನೂ ಮಾಡುತ್ತಲಿದ್ದೇವೆ
Team Udayavani, Mar 11, 2021, 6:37 PM IST
ಭಾಲ್ಕಿ: ಮನುಷ್ಯನಿಗೆ ಜ್ಞಾನವಂದಿದ್ದರೆ ಎಲ್ಲವನ್ನೂ ಸಾಧಿ ಸಲು ಸಾಧ್ಯ ಎಂದು ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠ ಮುಂಡರಗಿಯ ಜಗದ್ಗುರು ಡಾ| ಅನ್ನದಾನೇಶ್ವರ ಶಿವಯೋಗಿಗಳು ಪ್ರತಿಪಾದಿಸಿದರು. ತಾಲೂಕಿನ ಭಾತಂಬ್ರಾ ಗ್ರಾಮದ ಜದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ನಡೆದ ಹಾನಗಲ್ಲ ಕುಮಾರೇಶ್ವರರ 91ನೇ ಪುಣ್ಯಸ್ಮರಣೆ ಮತ್ತು ಸದ್ಗುರುಗಳ ಹಬ್ಬ ನಮ್ಮೂರ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠಾಧೀಶರು ಶಿಕ್ಷಣವಂತರಾದರೆ ಸುಂದರ ಸಮಾಜ ನಿರ್ಮಿಸಲಿ ಸಾಧ್ಯ ಎನ್ನುವ ಹಿತ ದೃಷ್ಟಿಯಿಂದ ಹಾನಗಲ್ಲ ಕುಮಾರೇಶ್ವರರು ಮಠಾಧೀಶರಿಗೆ ಶಿಕ್ಷಣ ಕೊಡುವ ಕಾರ್ಯ ಮಾಡಿದ್ದಾರೆ. ಈ ಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸಿದ ವಾರದ ಮಲ್ಲಪ್ಪ, ಡಾ| ಚನ್ನಬಸವ ಪಟ್ಟದ್ದೇವರು ಮುಂತಾದವರು ಹಾನಗಲ್ ಗುರುಕುಮಾರೇಶ್ವರರು ಕಟ್ಟಿದ ಗರಡಿಯಲ್ಲಿ ಬೆಳೆದ ಮಹನೀಯರಾಗಿದ್ದರು.
ಆದರೆ, ಲಿಂಗಾಯತರು ಧರ್ಮದ ಮೂಲವನ್ನು ಮರೆಯುತ್ತಿದ್ದೇವೆ. ಅಣ್ಣ ಬಸವಣ್ಣನವರು ನೀಡಿದ ಸಂಸ್ಕಾರ ಮರೆತು ಎಲ್ಲವನ್ನೂ ಮಾಡುತ್ತಲಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಸುಕ್ಷೇತ್ರ ಹಾರಕುಡ ಹಿರೇಮಠ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಘುಶಂಖ ಭಾತಂಬ್ರಾ
ಮಾತನಾಡಿದರು. ಜಗದ್ಗುರು ಶಿವಯೋಗೀಶ್ವರ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.
ಡಾ| ಶಂಭುಲಿಂಗ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯರು, ಶಿವಲಿಂಗ ಶಿವಾಚಾರ್ಯರು, ಡಾ| ನಾಗಭೂಷಣ ಶಿವಾಚಾರ್ಯರು, ಚಿದಾನಂದ ಎಸ್. ಮಠದ, ಮೋಹರ ಅಬ್ಬಿಗೆರಿ, ಡಾ| ಸಿ.ಆನಂದರಾವ, ವೈಜಿನಾಥಪ್ಪ ದಾಬಶೆಟ್ಟಿ, ಡಾ| ಸಿ.ಎಸ್. ಮಾಲಿಪಾಟೀಲ, ಎಮ್.ಜಿ.ದೇಶಪಾಂಡೆ, ಬಾಬುರಾವ ಬಿರಾದಾರ, ಚಿನ್ನಮ್ಮಾ ಬಾವುಗೆ, ಕಾಶಿನಾಥ ಲದ್ದೆ ಇದ್ದರು. ಇದೇ ವೇಳೆ ಅಶೋಕ ರಾಜೋಳೆ, ಜಯರಾಜ ದಾಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶರಣ ನಾಗನಾಥ ಮಾಶೆಟ್ಟೆಯವರಿಗೆ ಬಸವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಾಜಿ ಸಗರ ವಚನ ಗಾಯನ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.