ವಿವಿಧ ರೂಪದಲ್ಲಿ ದುಷ್ಟ ಶಕ್ತಿ ಸಂಹಾರ
Team Udayavani, Nov 15, 2017, 2:53 PM IST
ಹುಮನಾಬಾದ: ವಿವಿಧ ಹಂತಗಳಲ್ಲಿ ವಿವಿಧ ರೂಪಗಳಲ್ಲಿ ಜನ್ಮತಾಳುವ ದೇವರನ್ನು ನಾವು ಬೇರೆಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದೇವೆ. ಪ್ರತಿಯೊಂದು ಯುಗದಲ್ಲಿ ದೇವರು ವಿವಿಧ ರೂಪದಲ್ಲಿ ಜನ್ಮ ತಾಳಿ ದುಷ್ಟ ಶಕ್ತಿಗಳನ್ನು ಸಂಹರಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಕಾಶಿಯ ಸಾಂಗವೇದ ವಿದ್ಯಾಲಯದ ಪ್ರಾಚಾರ್ಯರ ಗಣೇಶ್ವರ ಶಾಸ್ತ್ರೀ ದ್ರಾವೀಡ ಹೇಳಿದರು.
ಮಾಣಿಕ ನಗರದಲ್ಲಿ ಮಾಣಿಕ ಪ್ರಭುಗಳ 200ನೇ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ನಡೆದ ಅಖೀಲ ಭಾರತ ವೇದ ಸಮ್ಮೇಳನದಲ್ಲಿ “ದೇವನೊಬ್ಬ ನಾಮ ಹಲವು’ ವಿಷಯ ಕುರಿತು ಅವರು ಮಾತನಾಡಿದರು. ಪ್ರಪಂಚದ ವಿವಿಧ ಧರ್ಮಗಳಲ್ಲಿ ದೇವರನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ ಹಾಗೂ ಪ್ರಾರ್ಥಿಸಲಾಗುತ್ತದೆ. ಆದರೆ ದೇವರು ಒಬ್ಬನೇ ಇದ್ದಾನೆ.
ಭಾರತದ ಸಂಸ್ಕೃತಿಯಲ್ಲಿ ದೇವರು ಹಾಗೂ ಗುರುವಿಗೆ ಹೆಚ್ಚು ಮಹತ್ವ ಇದೆ. ಇಂದಿಗೂ ಕೂಡ ಗುರುವಿನ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇವೆ. ಈ ಭಾಗದ ಮಾಣಿಕ ಪ್ರಭುಗಳು ಕೂಡ ನಡೆದಾಡುವ ದೇವರಾಗಿ, ಈ ಭಾಗದಲ್ಲಿ ನೆಲೆಸಿದ್ದಾರೆ. ನೊಂದವರ ಕೈ ಹಿಡಿದು ಬೆಳಕಿನ ಆಶಾ ಕಿರಣವಾಗಿ ಭಕ್ತರ ಇಷ್ಠಾರ್ಥವನ್ನು ಇಂದಿಗೂ ಪೂರೈಸುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಗುರುವಿನ ಬಗ್ಗೆ ಭಕ್ತಿ ಹೊಂದುವುದು ಅವಶ್ಯ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ವೇದ ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ವೇದ ಅತಿ ಅಮೂಲ್ಯ ಎಂಬುದನ್ನು ಅರಿತು ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾಶಿ ಹಿಂದೂ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಪ್ರೊ| ಡಾ| ಹೃದಯರಂಜನ ಶರ್ಮಾ ಮಾತನಾಡಿ, ಸೂರ್ಯ, ಚಂದ್ರ, ಗಾಳಿ, ನೀರು ನಮ್ಮ ಜೀವನಕ್ಕೆ ಅತಿ ಅವಶ್ಯಕವಾಗಿವೆ. ಅಲ್ಲದೇ ಅವುಗಳನ್ನು ನಾವು ದೇವರ ರೂಪದಲ್ಲಿ ಕಾಣುತ್ತೇವೆ. ಮಳೆ ಬಂದು ಹರಿದುಹೊಗುವ ನೀರು ವಿವಿಧ ಮಾರ್ಗಗಳ ಮೂಲಕ ಹಳ್ಳ, ಕೆರೆ, ಸಮುದ್ರಕ್ಕೆ ಸೇರುವುದು ಖಚಿತ. ಹಾಗೆ ಪ್ರಪಂಚದ ಯಾವುದೇ ಮೂಲೆಗಳಿಂದ ಯಾವುದೇ ಭಾಷೆಗಳಲ್ಲಿ, ಯಾವುದೇ ಧರ್ಮದವರು ದೇವರನ್ನು
ಪ್ರಾರ್ಥಿಸಿದರೂ ಅದು ದೇವರಿಗೆ ಅರ್ಪಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಾರ್ಥನೆಯಿಂದ ನಮ್ಮ
ಆತ್ಮಬಲ ಹೆಚ್ಚಾಗುತ್ತದೆ ಎಂದು ಹೇಳದರು.
ಉಜ್ಜಯಿನಿಯ ರಾಷ್ಟ್ರೀಯ ವೇದ ವಿದ್ಯಾಲಯದ ಪ್ರೊ| ವಿರೂಪಾಕ್ಷ ಜಡ್ಡಿಪಾಲ ಮಾತನಾಡಿ, ವೇದ ಅಧ್ಯಯನಕ್ಕೆ
ಮುಂಚೆ ಋಷಿ ಮುನಿಗಳು ಮಾತೃ ಅಭ್ಯಾಸ ಮಾಡುತ್ತಿದ್ದರು. ಇವೆಲ್ಲ ಮಂತ್ರಗಳಾಗಿದ್ದು, ಜ್ಞಾನಿ ಮಹರ್ಷಿಗಳು ಇವುಗಳನ್ನು ನಾಲ್ಕು ಭಾಗಗಳಾಗಿ ಮಾಡಿ ಸರಳಗೊಳಿಸಿದ್ದಾರೆ. ಋಗ್ವೆದ, ಯಜುರ್ವೇದ, ಸಾಮವೇಧ, ಆಥರ್ವಣವೇದ ಎಂದು ಗುರುತಿಸಿ ವೇದಗಳನ್ನು ಸಂಸ್ಕೃತ ಭಾಷೆಯಲ್ಲಿ ವರಿಸಿದ್ದಾರೆ.
ವೇದಗಳಿಗೆ 5000 ವರ್ಷಗಳ ಇತಿಹಾಸವಿದ್ದು, ಬ್ರಿಟಿಷರ ಆಳ್ವಿಕೆಯಲ್ಲಿ ಮ್ಯಾಕ್ಸವೆಲ್ಲ ಎಂಬಾತ ಪ್ರಥಮ ಬಾರಿಗೆ ವೇದಗಳನ್ನು ಪುಸ್ತಕದ ರೂಪದಲ್ಲಿ ಮುದ್ರಿಸಿದ. ಈಗ ಎಲ್ಲೆಡೆ ವೇದಗಳ ಪುಸ್ತಕಗಳು ಧಾರಳಾವಾಗಿ ದೊರೆಯುವಂತಾಗಿದೆ. ವೇದಗಳು, ಅವುಗಳ ಸಾರಂಶವನ್ನು ಪುಕ್ತಗಳಲ್ಲಿ ವಿವರಿಸಲಾಗಿದ್ದು, ಪ್ರತಿಯೊಬ್ಬರು ಓದಬೇಕು ಎಂದರು.
ಸಂಸ್ಥಾನದ ಡಾ| ಜ್ಞಾನರಾಜ ಮಾಣಿಕ ಪ್ರಭುಗಳು ಸಮ್ಮೇಳನ ಉದ್ಘಾಟಿಸಿದರು. ಕಲಬುರಗಿಯ ಶ್ರೀ ಕೃಷ್ಣಾಜಿ, ಬಸವಕಲ್ಯಾಣದ ಮಧುಕರ ಮಹಾಜನ ಉಪಸ್ಥಿತರಿದ್ದರು. ಆನಂದರಾಜ ಪ್ರಭುಗಳು ಸ್ವಾಗತಿಸಿದರು. ಚೇತನರಾಜ ಪ್ರಭುಗಳು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.