ಚಿಂತಾಕಿ ಗ್ರಾಮದಲ್ಲಿ ಮಾಜಿ ಸೈನಿಕರ ಮೆರವಣಿಗೆ
Team Udayavani, Aug 13, 2022, 5:28 PM IST
ಔರಾದ: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ಮಾಜಿ ಸೈನಿಕರಿಗೆ ಎತ್ತಿನ ಬಂಡಿಗಳಲ್ಲಿ ಕುಡಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಗೆ ಮೂಲಕ ಗೌರವ ಸಲ್ಲಿಸಲಾಯಿತು.
ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಚಿಂತಾಕಿ ಗ್ರಾಮ ಸೇರಿದಂತೆ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿರುವ ಸೈನಿಕರಿಗೆ ನಾವೆಲ್ಲರೂ ಗೌರವ ನೀಡಲು ಮುಂದಾಗಬೇಕು. ಚಿಂತಾಕಿ ಗ್ರಾಮದಲ್ಲಿನ ಬಿಜೆಪಿ ಮುಖಂಡರಂತೆ ತಾಲೂಕಿನ ಇನ್ನೂಳಿದ ಹೋಬಳಿ ಕೇಂದ್ರದಲ್ಲಿನ ಪಕ್ಷದ ಮುಖಂಡರು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಚಿಂತಾಕಿ ಗ್ರಾಮದಲ್ಲಿ ಕಬ್ಬು ಹಾಗೂ ಮಾವಿನ ತೋರಣಗಳಿಂದ ಸಿಂಗಾರ ಮಾಡಿದ ಎತ್ತಿನ ಗಾಡಿಯಲ್ಲಿ ಮಾಜಿ ಸೈನಿಕರಾದ ಶರಣಪ್ಪಾ ವಲ್ಲಾಪೂರೆ, ನಾಗರಾಜ ಗಾಯಕವಾಡ, ನಾಗಯ್ನಾ ಸ್ವಾಮಿ, ಅಮೃತರಾವ ಗುರುಬಸಪ್ಪಾ ಅವರನ್ನು ಸನ್ಮಾನಿಸಲಾಯಿತು.
ಮುಖಂಡ ರವೀಂದ್ರ ರೆಡ್ಡಿ ಉಜನಿ, ಹಣಮಂತ ಸೂರನಾರ, ಖಂಡೊಬಾ ಕಂಗಟೆ, ಮಾರುತಿರೆಡ್ಡಿ ಪಟೆ°, ರಾಮರೆಡ್ಡಿ ಪಾಟೀಲ, ರಮೇಶ ಗೌಡಾ ಗೋವಿಂದ ರೆಡ್ಡಿ, ನಾಗನಾಥ ಮೋರಗೆ, ಖಾಜಾ ಮಿಯ್ನಾ ನಾಗರೆಡ್ಡಿ, ಈರಾರೆಡ್ಡಿ, ವಿರಾರೆಡ್ಡಿ, ಗುರು ಪಟೇಲ, ಸಂಗಾರೆಡ್ಡಿ, ನಾಗನಾಥ ಕೋಳೆಕರ್, ಉಮಾಕಾಂತ ಬಂಡೆ, ಗೂಂಡಪ್ಪಾ, ಶರಣಬಸಪ್ಪ ಪಾಟೀಲ, ಪ್ರಕಾಶ ಬೆರಕುರೆ, ವಿಠಲರೆಡ್ಡಿ ಗುಡಪಳ್ಳಿ, ಶಿವಾರೆಡ್ಡಿ ಬೆಲ್ದಾಳ, ಸೋಪಾನ, ಸಂಜು ಮಾನಕಾರೆ, ರಮಾಕಾಂತ ಸೋನೆ, ಸಂಗಾರೆಡ್ಡು ಉಜನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.