ರೈತ ಆತ್ಮಹತ್ಯೆ; ಪರಿಹಾರ ವಿಳಂಬ
Team Udayavani, Jan 21, 2020, 12:04 PM IST
ಸಾಂಧರ್ಬಿಕ ಚಿತ್ರ
ಬೀದರ: ಸಾಲಬಾಧೆ, ಬರ ಪರಿಸ್ಥಿತಿ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾಗಿ ಆರೇಳು ತಿಂಗಳು ಕಳೆದರೂ ಮೃತ ರೈತರ ಕುಟುಂಬಕ್ಕೆ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಎಫ್ ಎಸ್‌ಎಲ್ ವರದಿ ವಿಳಂಬ, ಅನುದಾನ ಕೊರತೆಯಿಂದ ಜಿಲ್ಲೆಯ 9 ರೈತ ಕುಟುಂಬಕ್ಕೆ ಪರಿಹಾರ ವಿತರಣೆ ಬಾಕಿ ಇದ್ದು, ಪರಿಹಾರಕ್ಕೆ ಅವಲಂಬಿತರು ಎದುರು ನೋಡುವಂತಾಗಿದೆ.
ರಾಜ್ಯ ಸರ್ಕಾರದ ಸಾಲ ಮನ್ನಾ ಬಳಿಕವೂ ಬರದ ಜಿಲ್ಲೆ ಬೀದರನಲ್ಲಿ ಅನ್ನದಾತರು ನೇಣಿಗೆ ಕೊರಳೊಡ್ಡುವುದು ಮುಂದುವರಿದಿದೆ. ಕಳೆದ ಎರಡು ವರ್ಷದಲ್ಲಿ 81 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಕೇವಲ 55 ರೈತರ ಕುಟುಂಬಕ್ಕೆ ಮಾತ್ರ ತಲಾ 5 ಲಕ್ಷ ರೂ.ಗಳಂತೆ 2.75ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇನ್ನುಳಿದ 9 ಪ್ರಕರಣಗಳಲ್ಲಿ 45 ಲಕ್ಷ ರೂ. ಪರಿಹಾರ ಪರಿಹಾರ ಚೆಕ್ ನೀಡಬೇಕಾಗಿದೆ.
ಎರಡು ವರ್ಷಗಳಲ್ಲಿ ವರದಿಯಾದ ರೈತರ ಆತ್ಮಹತ್ಯೆ ಪ್ರಕರಣಲ್ಲಿ 16 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ಕೃಷಿ ಮತ್ತು ಕಂದಾಯ ಇಲಾಖೆ ಅಧಿ ಕಾರಿಗಳನ್ನೊಳಗೊಂಡು ರಚಿಸಲಾಗಿದ್ದ ಸಮಿತಿಯು ಈ ಪ್ರಕರಣಗಳನ್ನು ಪರಿಹಾರ ವಿತರಣೆ ಪ್ರಕ್ರಿಯೆಯಿಂದ ಕೈ ಬಿಟ್ಟಿದೆ. ಇನ್ನೂ ಒಪ್ಪಲಾದ ಪ್ರಕರಣಗಳಲ್ಲಿ ಎರಡು ರೈತರ ಪ್ರಕರಣಗಳ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಾರದ ಹಿನ್ನೆಲೆಯಲ್ಲಿ ತೀರ್ಮಾನ ಬಾಕಿ ಉಳಿದಿದೆ.
2018-19ನೇ ಸಾಲಿನಲ್ಲಿ 57 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 42 ರೈತ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಗಿದೆ. 13 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಇನ್ನೂ 2 ಕುಟುಂಬಕ್ಕೆ ಪರಿಹಾರ ನೀಡಬೇಕಿದೆ. 2019-20ರ ಏಪ್ರಿಲ್‌ನಿಂದ ಡಿಸೆಂಬರ್ ತಿಂಗಳ ವರೆಗೆ 24 ಪ್ರಕರಣವರದಿಯಾಗಿದ್ದು, 13 ಕುಟುಂಬಕ್ಕೆ ಪರಿಹಾರ ವಿತರಿಸಿದ್ದರೆ, 3 ಪ್ರಕರಣ ತಿರಸ್ಕರಿಸಲಾಗಿದೆ. ಇದಲ್ಲದೇ ಒಂದು ಪ್ರಕರಣ ಬಾಕಿ ಉಳಿದಿದೆ.
ಬೀದರ ಜಿಲ್ಲೆಯಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ, ಮಳೆಯಾಶ್ರಿತ ಪ್ರದೇಶ ಹೊಂದಿದೆ. ಮೂರ್‍ನಾಲ್ಕು ವರ್ಷಗಳಿಂದ ಒಮ್ಮೆ ಅತಿವೃಷ್ಟಿ, ಮತ್ತೂಮ್ಮೆ ಅನಾವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ರೈತರು ಕುಸಿದು ಹೋಗುವಂತಾಗಿದೆ. ಸಾಲ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದರಲ್ಲಿ ಬಹುಪಾಲು ಮಂದಿ ಸಣ್ಣ ರೈತರೇ ಸೇರಿದ್ದಾರೆ. ಪರಿಹಾರ ವಿತರಣೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಜೀವ ಮರಳಿ ತರುವುದಕ್ಕಂತೂ ಸಾಧ್ಯವಿಲ್ಲ. ಆದರೆ, ಆತ್ಮಹತ್ಯೆಗೆ ಶರಣಾದ ರೈತರ ಅವಲಂಬಿತರಿಗೆ ಸಾಂತ್ವನದ ಕಾರ್ಯದ ಜತೆಗೆ ಕುಟುಂಬ ಮತ್ತೆ ನೆಲೆ ನಿಲ್ಲಲು ಪರಿಹಾರ ಕಲ್ಪಿಸುವುದರಿಂದ ಅನುಕೂಲವಾಗಲಿದೆ.
ಕುಟುಂಬಕ್ಕೆ ಆಧಾರವಾಗಿದ್ದ ರೈತರು ಜೀವಕಳೆದುಕೊಂಡ ಬಳಿಕ ಅವಲಂಬಿತರು ಬೀದಿ ಪಾಲಾಗುತ್ತಿದ್ದಾರೆ. ಸಾಲ ಮರು ಪಾವತಿ ಜತೆಗೆ ಕುಟುಂಬ ನಿರ್ವಹಣೆ ಅವರಿಗೆ ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ತಕ್ಷಣದ ಕ್ರಮವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ನೊಂದ ಕುಟುಂಬಕ್ಕೆ ನೆರವಾಗಬೇಕಿದೆ.
ಬೀದರ ಜಿಲ್ಲೆಯಲ್ಲಿ 2017-18 ಮತ್ತು 2018-19ನೇ ಸಾಲಿನಲ್ಲಿ ಒಟ್ಟು 9 ರೈತ ಆತ್ಮಹತ್ಯೆ ಪ್ರಕರಣದ ಪರಿಹಾರ ವಿತರಣೆ ಬಾಕಿ ಇದೆ. ತ್ತೈಮಾಸಿಕ ಅನುದಾನ ಮುಂದಿನ ವಾರದೊಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನೂ ಕಳೆದ ವರ್ಷದ 2 ಪ್ರಕರಣದ ಎಫ್‌ಎಸ್‌ಎಲ್ ವರದಿ ಬಂದಿದ್ದು, ಸಮಿತಿಯಲ್ಲಿ ಇತ್ಯರ್ಥಗೊಂಡಿವೆ. ಶೀಘ್ರದಲ್ಲಿ ರೈತ ಕುಟುಂಬಕ್ಕೆ ಪರಿಹಾರ ದೊರಕಲಿದೆ. –ಸಿ. ವಿದ್ಯಾನಂದ, ಜಂಟಿ ಕೃಷಿ ನಿರ್ದೇಶಕರು, ಬೀದರ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.