![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 15, 2022, 1:04 PM IST
ಬೀದರ: ಧಾರ್ಮಿಕ ಸಂಘಟನೆಯಾಗಿರುವ ಜಮಾಅತೆ ಇಸ್ಲಾಮೀ ಹಿಂದ್ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದ ಜತೆಗೆ ನಿರ್ಗತಿಕರಿಗೆ ಆರ್ಥಿಕ ನೆರವು ನೀಡುವಂಥ ಕೆಲಸ ಮಾಡುತ್ತಿದೆ ಎಂದು ಸಂಘಟನೆ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ ಆಸಿಫುದ್ದೀನ್ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸ್ನೇಹ ಕೂಟದಲ್ಲಿ ಮಾತನಾಡಿದ ಅವರು, ಸ್ಥಾನೀಯ ಮಟ್ಟದಲ್ಲಿ 105 ವಿಧವೆಯರಿಗೆ ತಲಾ 500 ರೂ.ಗಳಂತೆ ಮಾಸಾಶನ, ಬಡ ರೋಗಿಗಳ ಅನುಕೂಲಕ್ಕಾಗಿ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ, ಔಷಧ ವಿತರಣೆ ಮತ್ತು ಎಚ್‌ಆರ್‌ಎಸ್‌ನಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ಬಡವರಿಗೆ ಊಟ ವಿತರಣೆ ಹೀಗೆ ಹತ್ತು ಹಲವು ಸೇವೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರಿ ಕಂಡುಕೊಳ್ಳುವುದು, ದೇಶದಲ್ಲಿ ಶಾಂತಿ ಮತ್ತು ಪ್ರಗತಿ ಸಾಧಿಸಲು ಪ್ರಯತ್ನ ಸಂಘಟನೆ ಮುಖ್ಯ ಉದ್ದೇಶ. ಸರ್ವಧರ್ಮಗಳ ಗುರುಗಳನ್ನು ಒಳಗೊಂಡ ಒಂದು ಸದ್ಭಾವನಾ ಮಂಚವನ್ನು ರಚಿಸಲಾಗಿದೆ. ಇದರ ಸಂಚಾಲಕರಾಗಿ ಗುರುನಾಥ ಗಡ್ಡೆ ಕೆಲಸ ನಿರ್ವಹಿಸುತಿದ್ದಾರೆ. ನ್ಯಾಯ ವಂಚಿತರಿಗೆ ನ್ಯಾಯ ಒದಗಿಸಲು ಎಪಿಸಿಆರ್ ಹಾಗೂ ಶಿಕ್ಷಣ ರಂಗದಲ್ಲಿ ಕೆಲಸ ನಿರ್ವಹಿಸಲು ಐಟಾ ಸಂಘಟನೆ ಕೆಲಸ ನಿರ್ವಹಿಸುತ್ತಿದೆ ಎಂದರು.
ಮುಹಮ್ಮದ ನಿಜಾಮುದ್ದಿನ್ ಮತ್ತು ಅಧ್ಯಕ್ಷ ಸೈಯ್ಯದ್ ಅಬ್ದುಲ್ ಸತ್ತಾರ ಮಾತನಾಡಿದರು. ಕೂಟದಲ್ಲಿ ಮುಹಮ್ಮದ ಆರಿಫುದ್ದೀನ್, ಮುಜ್‌ತಬಾ ಖಾನ್, ಮುಹಮ್ಮದ ನಜೀಬುದ್ದೀನ್, ನಸೀಮುನ್ನಿಸಾ, ತೌಹಿದಾ ಶಿಂಧೆ, ಮುಹಮ್ಮದ ಮುಜೀಬುದ್ದಿನ್ ಇದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.