ಹಣ್ಣು ತೋಟಗಳು ಸಮೃದ್ಧಿಯ ಪ್ರತೀಕ
ರೈತರು ಸಮಗ್ರ ಮಾಹಿತಿ ಪಡೆದು ಆರಂಭಿಸಿದಲ್ಲಿ ಸುಸ್ಥಿರತೆ ಸಾಧಿಸಬಹುದೆಂದು ಅಭಿಪ್ರಾಯಪಟ್ಟರು.
Team Udayavani, Jun 21, 2021, 7:49 PM IST
ಬೀದರ: ಜನವಾಡಾ ಕೃಷಿ ವಿಜ್ಞಾನ ಕೇಂದ್ರದಿಂದ ಕೆ.ವಿ.ಕೆ-ಕೃಷಿ ಪಾಠ ಶಾಲೆ ಸರಣಿ ಆನ್‌ಲೈನ್ ಕಾರ್ಯಕ್ರಮದಲ್ಲಿ “ಹಣ್ಣು ತೋಟಗಳ ನಿರ್ಮಾಣ ಮತ್ತು ನಿರ್ವಹಣೆ’ ವಿಷಯ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಕೆವಿಕೆ ವಿಜ್ಞಾನಿ ಡಾ| ನಿಂಗದಳ್ಳಿ ಮಲ್ಲಿಕಾರ್ಜುನ ತರಗತಿ ನಡೆಸಿಕೊಟ್ಟರು. ತೋಟಗಳ ವಿನ್ಯಾಸ, ಪ್ರಮುಖ ಹಣ್ಣು ಬೆಳಗಳ ಕಸಿ/ಸಸಿಗಳ ಆಯ್ಕೆ, ನಾಟಿಗೆ ವಿಧಾನ, ತೋಟಗಳ ನಿರ್ಮಾಣ ಮತ್ತು ನಿರ್ವಹಣೆಯ ತಾಂತ್ರಿಕತೆಗಳ ಕುರಿತು ಮಾಹಿತಿ
ನೀಡಿದರು.
ತರಬೇತಿಯಲ್ಲಿ ಪಾಲ್ಗೊಂಡ ರೈತರು, ತೋಟ ನಿರ್ಮಾಣಕ್ಕಾಗಿ ಅನುಸರಿಸಬೇಕಾದ ತಾಂತ್ರಿಕ ಕ್ರಮಗಳ ಕುರಿತು ಮಾಹಿತಿ ಪಡೆದರಲ್ಲದೆ, ಅವರಿಗಿರುವ ಅನೇಕ ಸಂದೇಹಗಳನ್ನು ಚರ್ಚೆಯಲ್ಲಿ ಬಗೆಹರಿಸಿಕೊಂಡರು. ಯುವ ರೈತ ಗುರುನಾಥ ಮಲಾದೆ ಅವರು ನಿಯಮಿತವಾಗಿ ನಡೆಯುತ್ತಿರುವ ಸರಣಿ ಆನ್‌ಲೈನ್ ಪಾಠ
ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ರೈತರನ್ನೊಳಗೊಂಡ ವಾಟ್ಸ್‌ಆ್ಯಪ್ ಗುಂಪು ರಚಿಸುವ ಕುರಿತು ಸಲಹೆ ನೀಡಿದರು.
ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್.ಎಂ ಮಾತನಾಡಿ, ಮುಂಗಾರು ಹಂಗಾಮು ಹಣ್ಣು ಮತ್ತು ತೋಟ ಪಟ್ಟಿ ಗಿಡಗಳನ್ನು ನೆಡಲು ಸಕಾಲವಾಗಿದ್ದು,
ಈ ಕುರಿತ ಮಾಹಿತಿ ರೈತ ಬಾಂಧವರಿಗೆ ತ್ವರಿತವಾಗಿ ನೀಡುವ ಸದುದ್ದೇಶದಿಂದ ರೈತರಿರುವಲ್ಲಿಯೇ ಆನ್‌ಲೈನ್‌ನಲ್ಲಿ ಹಣ್ಣು ತೋಟಗಳು ನಿರ್ಮಾಣದ
ಕುರಿತ ಮಾಹಿತಿ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಸಮಗ್ರ ಮಾಹಿತಿ ಪಡೆದು ಆರಂಭಿಸಿದಲ್ಲಿ ಸುಸ್ಥಿರತೆ ಸಾಧಿಸಬಹುದೆಂದು ಅಭಿಪ್ರಾಯಪಟ್ಟರು.
ಹೆಚ್ಚಿನ ಪ್ರಮಾಣದಲ್ಲಿ ರೈತರು ಕೃಷಿ ಪಾಠ ಶಾಲೆಯಲ್ಲಿ ಪಾಲ್ಗೊಳ್ಳಲು “ಕೆವಿಕೆ ಬೀದರ ಕೃಷಿ ಪಾಠ ಶಾಲೆ’ ವಾಟ್ಸ್‌ಆ್ಯಪ್ ಗುಂಪು ರಚಿಸಲಾಯಿತು. ಆಸಕ್ತರು ಈ https://chat.whatsapp.com/EXp7j4weppKK6YleaXKe2p ಲಿಂಕ್‌ನ್ನು ಉಪಯೊಗಿಸಿಕೊಂಡು ಈ ಗುಂಪಿಗೆ ಸೇರಿಕೊಳ್ಳಲು ಕೆವಿಕೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.