ಗಣೇಶೋತ್ಸವ ಸಮಿತಿ ಸುವರ್ಣ ಉತ್ಸವ
Team Udayavani, Sep 10, 2018, 12:54 PM IST
ಹುಮನಾಬಾದ: ಹಳೆ ಅಡತ್ ಬಜಾರ್ ಗಣೇಶ ಉತ್ಸವ ಸಮಿತಿಗೆ 49ವರ್ಷ ಪೂರ್ಣಗೊಂಡಿದ್ದು, ಈ ಬಾರಿ 50ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ಸಂಭ್ರದಿಂದ ಆಚರಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ನಾಗರಾಜ
ರಘೋಜಿ ಹೇಳಿದರು.
ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ
ರವಿವಾರ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಣೇಶ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ
ಸೆ.13ರಂದು ಸುವರ್ಣಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು. ಸ್ಥಳೀಯ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಸನ್ನಿಧಾನ, ಸಮಿತಿ ಅಧ್ಯಕ್ಷ ನಾಗರಾಜ ಜಿ.ರಘೋಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಗಣಿ,ಭೂವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಕಾಸ ಅಕಾಡೆಮಿ ಅಧ್ಯಕ್ಷ ಬಸರಾಜ ಪಾಟೀಲ ಸೇಡಂ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಗೌರವ ಕಾರ್ಯದರ್ಶಿ
ವೀರಣ್ಣ ಎಚ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಬಿ.ಪಾಟೀಲ ಭಾಗವಹಿಸುವರು ಎಂದು ತಿಳಿಸಿದರು.
ಸೆ.14ರಿಂದ 22ರ ವರೆಗೆ ಪ್ರತಿನಿತ್ಯ ಬೆಳಗ್ಗೆ 9 ರಿಂದ 11ಗಂಟೆ ವರೆಗೆ 20 ದಂಪತಿಗಳಿಂದ 5 ಹವನ ಕುಂಡದಲ್ಲಿ ಗಣಪತಿ ಹೋಮ ನಡೆಯುತ್ತವೆ. ಸೆ.18ಕ್ಕೆ ಲೋಕಲ್ಯಾಣಾರ್ಥ ಶತಚಂಡಿ ಮಹಾಯಾಗ ಮತ್ತು ಪೂರ್ಣಾಹುತಿ ನಡೆಯಲಿವೆ ಎಂದು ತಿಳಿಸಿದರು.
ಪ್ರವಚನ, ಸಂಗೀತ-ಸಾಂಸ್ಕೃತಿಕ ಚಟುವಟಿಕೆ: ಸೆ.14 ರಂದು ಸಂಜೆ 6ರಿಂದ 7ಗಂಟೆ ವರೆಗೆ ತಡೋಳಾ ಗುರುಕುಲಾಶ್ರಮ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ, ಸಂಜೆ 7ರಿಂದ 8ಗಂಟೆ ವರೆಗೆ ಸಂಗೀತ ವಿದೂಷಿ ಸಂಗೀತಾ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.15ರಂದು ಸಂಜೆ 6ರಿಂದ 7ರ ವರೆಗೆ ಬೀದರ್ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಂದ ಪ್ರವಚನ ನಡೆಯುವುದು. ಸಂಜೆ 7ರಿಂದ 8ಗಂಟೆ ವರೆಗೆ ಖ್ಯಾತ ಸಂಗೀತ ಕಲಾವಿದ ವಿದ್ವಾನ್ ಎಲ್.ಎಸ್.ಕಾರ್ತಿಕ ಅವರಿಂದ ವಾದ್ಯ ಸಂಗೀತ ಹಾಗೂ ಜುಗಲಬಂದಿ.
ಸೆ.16ರಂದು ಸಂಜೆ 6ರಿಂದ 7ರ ವರೆಗೆ ಮಗುಳನಾಗಾಂವ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ. 7ರಿಂದ 8ರ ವರೆಗೆ ವಿದ್ವಾನ್ ಶಶಿಧರ ಕೋಟೆ ಅವರಿಂದ ಸಂಗೀತ ಸಂಭ್ರಮ. ಸೆ.17ರಂದು ಸಂಜೆ 6ರಿಂದ 7ರ ವರೆಗೆ ಶಂಭುಲಿಂಗ ಬಳಿಗಾರ ಅವರಿಂದ ಜನಪದ ಹಾಸ್ಯ ಕುರಿತು ಪ್ರವಚನ. 7ರಿಂದ 8ರ ವರೆಗೆ ಗುರು ಅಶೋಕ ನೇತೃತ್ವದ ತಂಡದಿಂದ ನೃತ್ಯ ಹಾಗೂ ರಿಚರ್ಡ್ ಲೂಯೀಸ್ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಜರುಗುತ್ತವೆ ಎಂದು ತಿಳಿಸಿದರು.
ಸೆ.18ರಂದು 6ರಿಂದ 7ರ ವರೆಗೆ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಅವರಿಂದ ಪ್ರವಚನ. 7ರಿಂದ 8ರ ವರೆಗೆ ಉಸ್ತಾದ್ ಫಯಾಸ್ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಸೆ.19ರಂದು ಸಂಜೆ 6ರಿಂದ 7ರ ವರೆಗೆ ಅಜೇಂದ್ರಸ್ವಾಮಿ ಏಕದಂಡಗಿ ಮಠ ಅವರಿಂದ ಪ್ರವಚನ. 7ರಿಂದ 8ರ ವರೆಗೆ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭಂಗವಾಣಿ ಮತ್ತು ದಾಸವಾಣಿ. ಸೆ.20ರಂದು ಸಂಜೆ 6ರಿಂದ 7ರ ವರೆಗೆ ಮಾಣಿಕಪ್ರಭು ಸಂಸ್ಥಾನ ಪೀಠಾಪತಿ ಡಾ| ಜ್ಞಾನರಾಜ ಮಹಾರಾಜರಿಂದ ಪ್ರವಚನ. 7 ರಿಂದ 8ರ ವರೆಗೆ ಬಿಗ್ ಬಾಸ್ ಖ್ಯಾತಿಯ ರವಿ ಮರೂರ್ ಮತ್ತವರ ತಂಡದಿಂದ ಸುಗಮ ಸಂಗೀತ ನಡೆಯುವುದು.
ಸೆ.21ರಂದು ಹಾರಕೂಡ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ. 7 ರಿಂದ 8ರ ವರೆಗೆ ಬೆಂಗಳೂರಿನ ಸ್ವರಹಲರಿ ತಂಡದವರಿಂದ ಚಲನಚಿತ್ರ ರಸ ಸಂಜೆ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಎಂ.ಆರ್.ಗಾದಾ, ಮಾಜಿ ಶಾಸಕ ಸುಭಾಷ ಕಲ್ಲೂರ, ಆರ್ಯ ಸಮಾಜ ಅಧ್ಯಕ್ಷ ಸುಭಾಷ ಅಷ್ಠಿಕರ್, ಬಿಜೆಪಿ ಮುಖಂಡ ಬಸವರಾಜ ಆರ್ಯ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಚಂದ್ರಕಾಂತ ಶಂಕರಶಟ್ಟಿ, ಕಾರ್ಯದರ್ಶಿ ದತ್ತಕುಮಾರ ಚಿದ್ರಿ, ಸಹ ಕಾರ್ಯದರ್ಶಿ ನಾಗಭೂಷಣ ವಿಭೂತಿ, ಕೋಶಾಧ್ಯಕ್ಷ ಪ್ರೇಮಕುಮಾರ ಜಾಜಿ ಹಾಗೂ ಸಮಿತಿ ಸರ್ವ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.