ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ
Team Udayavani, Sep 8, 2017, 2:39 PM IST
ಬೀದರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಬಸವ ಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ ಮತ್ತು ಲಿಂಗಾಯತ ಬ್ರಿಗೇಡ್ ವತಿಯಿಂದ ನಗರದಲ್ಲಿ ಗುರುವಾರ ಮೌನ ಮೆರವಣಿಗೆ ನಡೆಸಲಾಯಿತು.
ಅಕ್ಕ ಅನ್ನಪೂರ್ಣತಾಯಿ ಮತ್ತು ಡಾ| ಗಂಗಾಂಬಿಕೆ ಅಕ್ಕ ನೇತೃತ್ವದಲ್ಲಿ ಬಸವಾನುಯಾಯಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ನಗರದ ಶರಣ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಗೌರಿ ಲಂಕೇಶರನ್ನು ಮನೆಯಲ್ಲೇ ಗುಂಡಿಟ್ಟು ಕೊಲೆ ಮಾಡಿರುವುದು ರಾಜ್ಯವನ್ನೇ ತಲ್ಲಣಗೊಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೌರಿ ಲಂಕೇಶ ಅವರು ನಿರ್ಭಯ ಮತ್ತು ನಿರ್ಭಿಡೆ ಪತ್ರಕರ್ತರಾಗಿದ್ದರಲ್ಲದೇ ಕೋಮು ಶಕ್ತಿಗಳ ವಿರುದ್ಧದ ಸಮರದಲ್ಲಿ ಮತ್ತು ಮೌಡ್ಯ ಕಂದಾಚಾರಗಳ ವಿರುದ್ಧದ ಆಂದೋಲನದ ಮುಂಚೂಣಿಯಲ್ಲಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೆ ಮತ್ತೇನು. 2 ವರ್ಷಗಳ ಹಿಂದೆ ವಿಚಾರವಾದಿ ಡಾ| ಎಂ.ಎಂ. ಕಲಬುರ್ಗಿ ಅವರ
ಮನೆಗೆ ನುಗ್ಗಿ ಇದೇ ರೀತಿ ಕೊಲೆ ಮಾಡಲಾಗಿತ್ತು. ಆದರೆ, ದುಷ್ಕರ್ಮಿಗಳನ್ನು ಸರ್ಕಾರ ಇನ್ನೂ ಪತ್ತೆ ಹಚ್ಚಿಲ್ಲ.
ದಾಬೋಲ್ಕರ, ಪನ್ಸಾರೆ ಮತ್ತು ಕಲಬುರ್ಗಿ ಅವರ ಕೊಲೆ ಹಿಂದೆಯೇ ಈಗ ಮತ್ತೋರ್ವ ವಿಚಾರವಾದಿ, ಸಾಹಿತಿಯ ಬರ್ಬರ ಹತ್ಯೆ ಆಗಿದೆ. ನಮ್ಮ ನಾಡು ಎತ್ತ ಸಾಗುತ್ತಿದೆ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
ಬುದ್ಧ, ಬಸವ, ಅಂಬೇಡ್ಕರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನುದ್ದಕ್ಕೂ ಪ್ರತಿಪಾದಿಸುತ್ತಾ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಗಟ್ಟಿಯಾಗಿ ಪ್ರತಿಭಟಿಸುತ್ತ ಸಮಾನತೆ ನಾಡು ಕಟ್ಟಲು ಶ್ರಮಿಸುತ್ತಿದ್ದವರ ಬರ್ಬರ ಹತ್ಯೆ ಭಾರತೀಯರಲ್ಲೆರಿಗೂ ಅತೀವ ನೋವು ಉಂಟು ಮಾಡಿದೆ. ಈ ಹಿಂದಿನ ವಿಚಾರವಾದಿಗಳ
ಹತ್ಯೆಯ ದುಷ್ಕರ್ಮಿಗಳನ್ನು ಮೊದಲೇ ಬಂಧಿಸಿ ಶಿಕ್ಷಿಸಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ. ಇದು ನಮ್ಮ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ.
ಸತ್ಯದ ಧ್ವನಿಯನ್ನು ಕೊಲೆಯಿಂದ ದಮನಿಸಲು ಸಾಧ್ಯವೆಂದು ಊಹಿಸಿದರೆ ಅದು ಕೋಮುವಾದಿಗಳ ಮೂರ್ಖತನವಾಗುತ್ತದೆ. ಈ ಕೊಲೆಗಳ ಸರಣಿ ಈಗಲಾದರೂ ನಿಲ್ಲಲ್ಲೆಬೇಕು. ಸರ್ಕಾರ ಹೆಚ್ಚಿನ ಅನಾಹುತಗಳಿಗೆ ಏಡೆಮಾಡಿಕೊಡದೆ ಕೂಡಲೇ ದುಷ್ಕರ್ಮಿಗಳನ್ನು ಮತ್ತು ಕೊಲೆಯ ಹಿಂದಿನ ಸಂಚುಕೋರರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಈ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.