ಭಯೋತ್ಪಾದನೆ ಮಹಾ ಪಿಡುಗು ತೊಲಗಿಸಿ
Team Udayavani, May 22, 2018, 11:48 AM IST
ಕಲಬುರಗಿ: ಭಾರತ ಸೇರಿದಂತೆ ವಿಶ್ವದಲ್ಲಿ ಪ್ರತಿದಿನ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ ಜಗತ್ತನ್ನೇ ತಲ್ಲಣಗೊಳಿಸಿ ಅಶಾಂತಿ ಸೃಷ್ಟಿಗೆ ಕಾರಣೀಕರ್ತವಾದ ಭಯೋತ್ಪಾದನೆ ಒಂದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದನ್ನು ಬೇರು ಸಹಿತ ಸರ್ವನಾಶ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ ಹೇಳಿದರು.
ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ನಗರದ ನ್ಯೂ ರಾಘವೇಂದ್ರ ಕಾಲೋನಿ ಮುತ್ತಾ ಟ್ಯೂಟೋರಿಯಲ್ಸ್‌ನಲ್ಲಿ ಹಮ್ಮಿಕೊಂಡಿದ್ದ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ
ಬೋಧಿಸಿ ಅವರು ಮಾತನಾಡಿದರು.
ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ ಮಾತನಾಡಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲ ದುಷ್ಟ ಶಕ್ತಿಗಳು ಸಮಾಜದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಸುವ ಕಾರ್ಯಮಾಡುತ್ತಿವೆ. ಅದನ್ನು ನಾವೆಲ್ಲರೂ
ಒಕ್ಕೋರಲಿನಿಂದ ಖಂಡಿಸುವ ಮೂಲಕ, ಇದರ ನಾಶಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಸಂಸ್ಥೆ ಮುಖ್ಯಸ್ಥ ಶಿವಕುಮಾರ ಮುತ್ತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪ ಕಲಾವಿದ ಚಂದ್ರಶೇಖರ ವೈ. ಶಿಲ್ಪಿ,
ಶಿಕ್ಷಕರಾದ ಸಿದ್ದಾರೂಢ ನರಬೋಳಿ, ಜಗದೀಶ ರೆಡ್ಡಿ, ಆನಂದ ಮಾಳಾ, ನಾಗರಾಜ ಪಂಚಾಳ, ನಟರಾಜ ರಾಜಾಹುಲಿ, ಸಂತೋಷ ಮುತ್ತಾ, ಲಕ್ಷ್ಮೀಮುತ್ತಾ, ಅಂಬಿಕಾ ಮಡ್ಡಿ ಹಾಗೂ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು, ಬಡಾವಣೆ ನಾಗರಿಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.