ಹೈಮಾಸ್ಟ್ ದೀಪಕ್ಕೆ ಅನುದಾನ: ಶಾಸಕ ರಹೀಂ
ಶಾಲಾ ಮಕ್ಕಳಿಗೆ ಅನುಕೂಲವಾಗುವ ಹಾಗೆ ಕೂಡ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ
Team Udayavani, Feb 11, 2021, 5:16 PM IST
ಬೀದರ: ಶಹಾಪುರ ಗೇಟ್ ಹತ್ತಿರದಲ್ಲಿನ ಹಳ್ಳದಕೇರಿ 88 ಟೀ ಪಾರ್ಕ್‌ನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಶಾಸಕರ ನಿಧಿ ಯಿಂದ ಅನುದಾನ ನೀಡುವುದಾಗಿ
ಶಾಸಕ ರಹೀಂ ಖಾನ್ ತಿಳಿಸಿದರು. ಹಳ್ಳದಕೇರಿಯ ಪಾರ್ಕ್‌ಗೆ ಶಾಸಕ ರಹೀಮ್ ಖಾನ್ ಭೇಟಿ ನೀಡಿ ಅ ಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲಿದ್ದ ಔಷಧಿ ಸಸಿಗಳ ಉಪಯೋಗದ ಮತ್ತು ಕುಡಿಯುವ ನೀರಿನ ಸೌಕರ್ಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಟೀ ಪಾರ್ಕ್ 25 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿದ್ದು, ಬೆಳಗ್ಗೆ ಸಾರ್ವಜನಿಕರು ವಾಕ್ ಮಾಡಬಹುದು. ಚಿಕ್ಕಮಕ್ಕಳಿಗೆ ಆಟವಾಡಲು ಅನುಕೂಲವಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ದೇವದೇವ ಗಾರ್ಡನ್‌ಗೆ ಭೇಟಿ: ಇದಕ್ಕೂ ಮೊದಲು ಶಾಸಕರು ದೇವದೇವ ವನದಲ್ಲಿರುವ ಗಾರ್ಡನ್‌ಗೆ ಭೇಟಿ ನೀಡಿದರು. ಈ ಗಾರ್ಡನ್ ಮೊದಲಿಗಿಂತಲೂ ಈಗ ತುಂಬಾ ಪ್ರಗತಿಯಾಗಿದೆ. ನೋಡಲು ಸುಮಧುರವಾಗಿದೆ. ಅತ್ಯುತ್ತಮ ಪರಿಸರ ಇಲ್ಲಿದೆ. ಇಲ್ಲಿಗೆ ಕೂಡ ಸಾರ್ವಜನಿಕರು ಭೇಟಿ ಕೊಡಬೇಕು ಎಂದು ತಿಳಿಸಿದರು.
ಶಹಾಪುರ ಗೇಟ್ ಹತ್ತಿರದ ನರ್ಸರಿಗೆ ಕೂಡ ಶಾಸಕರು ಭೇಟಿ ನೀಡಿದರು. ರೈತರಿಗೆ ಶ್ರೀಗಂಧ, ಹೆಬ್ಬೆವು, ಕರಿಬೇವು ಮತ್ತು ಲಿಂಬೆ ಇತರೆ ಜಾತಿಯ ಗಿಡಗಳನ್ನು ರೈತರಿಗಾಗಿ ಬೆಳೆಸಲಾಗಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ಹಾಗೆ ಕೂಡ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ ಅವರು ಶಾಸಕರಿಗೆ ಮಾಹಿತಿ ನೀಡಿದರು.
ಇಲ್ಲಿನ ನರ್ಸರಿಯಿಂದ ಸಾರ್ವಜನಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಎಂದು ಶಾಸಕರು ಅ ಧಿಕಾರಿಗಳಿಗೆ ಸೂಚಿಸಿದರು. ಕೃಷಿ ಪ್ರೋತ್ಸಾಹ
ಯೋಜನೆಯಡಿ ರೈತರಿಗೆ ಇರುವ ಸೌಕರ್ಯಗಳ ಬಗ್ಗೆ ಕೂಡ ತಿಳಿಸಲು ಶಾಸಕರು ಸಲಹೆ ಮಾಡಿದರು.
ಹೊಸ ಬಡಾವಣೆಗಳಲ್ಲಿ ಸಸಿ ನೆಡಿ: ಬೀದರ ನಗರದ ಹೊಸ ಬಡಾವಣೆಗಳಲ್ಲಿ ಕಡ್ಡಾಯ ಸಸಿಗಳನ್ನು ನೆಡಬೇಕು. ಜನರಿಗೆ ನೆರಳು ಆಗುವಂತಹ ಹೂ ಹಣ್ಣಿನ ಗಿಡಗಳನ್ನು ನೆಡಲು ಒತ್ತು ಕೊಡಬೇಕು ಎಂದು ಶಾಸಕರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. ಸದಾನಂದ ಮತ್ತು ಅರಣ್ಯ ಇಲಾಖೆಯ ಇನ್ನೀತರ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.