ಶ್ರೇಷ್ಠ ಅಧ್ಯಾಪಕರಿಂದ ಶಿಕ್ಷಣ ಸಂಸ್ಥೆ ಬೆಳವಣಿಗೆ
Team Udayavani, Jan 14, 2019, 9:54 AM IST
ಬಸವಕಲ್ಯಾಣ: ಶ್ರೇಷ್ಠ ಅಧ್ಯಾಪಕರ ಚಿಂತನೆಗಳಿಂದ ಮಾತ್ರ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಸಾಧ್ಯವೇ ಹೊರತು ಕಟ್ಟಡ ಹಾಗೂ ಆಡಂಬರದಿಂದ ಅಲ್ಲ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ತೇರು ಮೈದಾನದ ಸಭಾ ಭವನದಲ್ಲಿ ನಡೆದ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಬಸವೇಶ್ವರ ಸಿಬಿಎಸ್‌ಸಿ ಸ್ಕೂಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ವಿದ್ಯಾರ್ಥಿಗಳು ಅವುಗಳನ್ನು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉಪಯೋಗಿಸಬೇಕು ವಿನಃ ಕೆಟ್ಟ ಚಟುವಟಿಕೆಗಾಗಿ ಬಳಕೆ ಮಾಡಬಾರದು ಎಂದು ಸಲಹೆ ನೀಡಿದರು.
ಒಳ್ಳೆಯ ಅಧ್ಯಾಪಕರು, ಚಿಕಿತ್ಸಕವಾದ ಸಂಶೋಧನಾತ್ಮಕ ಮತ್ತು ಗುಣಾತ್ಮಕ ಯೋಜನೆಗಳು ಮಾತ್ರ ಶಿಕ್ಷಣ ಸಂಸ್ಥೆಗಳ ಅಸ್ಮಿತೆಯನ್ನು ಕಟ್ಟಿವೆ. ಮತ್ತು ಜ್ಞಾನ ಸಿದ್ಧಾಂತಗಳಿಂದ ಸಂಸ್ಥೆಗಳು ಬೆಳೆಯುತ್ತವೆ. ಸ್ವಾಮಿ ವಿವೇಕಾನಂದರು, ಯೋಗ ಮತ್ತು ಸಿದ್ಧಾಂತಗಳನ್ನು ಕಟ್ಟಿಕೊಡುವ ಮೂಲಕ ವಿಶ್ವವೇ ಭಾರತ ಕಡೆ ನೋಡುವಂತೆ ಮಾಡಿದ್ದಾರೆ ಎಂದರು.
ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವರ ಮಾತನಾಡಿ, ಭಾರತದ ಬಹುದೊಡ್ಡ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು. ತಮ್ಮ ಶೈಕ್ಷಣಿಕ ಚಿಂತನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಸ್ಚಾತಂತ್ರ್ಯ ದೊರೆಯಬೇಕು. ಮಕ್ಕಳು ಕೌಶಲ್ಯ ತರಬೇತಿ ಪಡೆದು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಪ್ರಾಚಾರ್ಯೆ ಮಂಜುಷಾ ಖಂಡಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದರು. ಬಿಡಿವಿಸಿ ಅಧ್ಯಕ್ಷ ಮಲ್ಲಯ್ನಾ ಸ್ವಾಮಿ, ಕಾರ್ಯದರ್ಶಿ ಸುರೇಶ ಸ್ವಾಮಿ, ಸೋಮಶೇಖರಯ್ನಾ ವಸ್ತ್ರದ, ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅನೀಲಕುಮಾರ ಮೆಟಗೆ, ಕಾರ್ಯದರ್ಶಿ ರೇವಣಪ್ಪಾ ರಾಯವಾಡೆ, ಸಹಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ನಿರ್ದೇಶಕರಾದ ವೀರಣ್ಣಾ ಹಲಶೆಟ್ಟೆ, ಮಲ್ಲಿಕಾರ್ಜುನ ಕುರಕೋಟೆ, ಅಶೋಕ ನಾಗರಾಳೆ, ರಾಜಕುಮಾರ ಚಿರಡೆ, ಮಲ್ಲಿಕಾರ್ಜುನ ಚಿರಡೆ, ಬ್ರನಾಥ ಪಾಟೀಲ, ಜಗನ್ನಾಥ ಖೂಬಾ, ಶಿವರಾಜ ಶಾಶೆಟ್ಟೆ ಸೇರಿದಂತೆ ಮತ್ತಿತರರು ಇದ್ದರು. ಕವಿತಾ ಹೊನ್ನಾ ನಿರೂಪಿಸಿದರು. ಪ್ರಭು ಬಿರಾದಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.