ದೀನ-ದಲಿತ ಮಕ್ಕಳ ಸೇವೆಯಲ್ಲಿ ಹಿರೇಮಠ ಸಂಸ್ಥಾನ
Team Udayavani, Nov 20, 2018, 12:37 PM IST
ಬೀದರ: ಸಿದ್ಧಗಂಗಾ ಮಠ, ಸುತ್ತೂರ ಮಠದಂತೆ ಶೈಕ್ಷಣಿಕವಾಗಿ ಆಧ್ಯಾತ್ಮಿಕವಾಗಿ ಬಡ, ದೀನ-ದಲಿತ ಮಕ್ಕಳ ಕಲ್ಯಾಣಕ್ಕಾಗಿ ಈ ಭಾಗದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ಸೇವೆ ಮಾಡುತ್ತಿದೆ ಎಂದು ಪ್ರೊ| ಎಸ್.ಬಿ. ಬಿರಾದಾರ ಹೇಳಿದರು.
ನಗರದ ಪಟ್ಟದೇವರ ಪ್ರಸಾದ ನಿಲಯದಲ್ಲಿ ಶ್ರೀ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ನಿವೇದಿತಾ ಹೂಗಾರ ಸಾಂಸ್ಕೃತಿಕ, ಶೈಕ್ಷಣಿಕ, ವಿಕಸನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 63ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ದಶಕಗಳಿಂದ ಈ ಭಾಗದಲ್ಲಿ ಡಾ|ಚನ್ನಬಸವ ಪಟ್ಟದ್ದೇವರು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದವರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಗಡಿಯಲ್ಲಿ ಕನ್ನಡ ಉಳಿಸುವಲ್ಲಿ ಶ್ರೀಮಠದ ಪಾಲು ಹೆಚ್ಚಿದೆ ಎಂದರು.
ಪ್ರೊ| ವಿಜಯಕುಮಾರ ಪಾಟೀಲ ಮಾತನಾಡಿ, ಕನ್ನಡದ ಮಠವೆಂದು ಖ್ಯಾತಿ ಪಡೆದಿರುವ ಹಿರೇಮಠ ಸಂಸ್ಥಾನದ ಡಾ| ಚನ್ನಬಸವ ಪಟ್ಟದ್ದೇವರು ನಿಜಾಮನ ಆಳ್ವಿಕೆಯಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಮಕ್ಕಳಿಗೆ ಕನ್ನಡ ಭಾಷೆಯ ಪಾಠ ಮಾಡಿದ್ದಾರೆ.
ಅವರು ಕನ್ನಡದ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇಂದು ಕನ್ನಡ ಭಾಷೆಯೂ ಶ್ರೀಮಂತವಾಗಲು, ವಚನ ಸಾಹಿತ್ಯದ ಬೆಳಕನ್ನು ಜಗತ್ತಿಗೆ ನೀಡಲು ಶ್ರೀಮಠ ಶ್ರಮಿಸುತ್ತಿದೆ ಎಂದರು. ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಹಳೆ ವಿದ್ಯಾರ್ಥಿಗಳು ಹಿಂದಿನ ಜೀವನದ ಇರುವಿಕೆಯನ್ನು ನೆನಪಿಸಿಕೊಂಡು ಮುಂದೆ ಸಾಗುವ ಅವಶ್ಯಕತೆ ಇದೆ. ಪ್ರತಿಯೊಬ್ಬರಲ್ಲಿ ದೇವರು ಅದ್ಭುತ ಶಕ್ತಿ ನೀಡಿದ್ದಾನೆ.
ಡಾ| ಚನ್ನಬಸವ ಪಟ್ಟದ್ದೇವರು ಅನೇಕ ಹಳೆ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕೆ ಇಂದು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಸಾಹಿತಿ ಶಾಂತರಸರು ಪ್ರಸಾದ ನಿಲಯದ ವಿದ್ಯಾರ್ಥಿಗಳಾಗಿ ಮುಂದೆ 72ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಶ್ರೀಗಳ ಕೃಪೆಯೆ. ಇಂದು ಬಸವಕಲ್ಯಾಣದ ಅನುಭವ ಮಂಟಪವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡುವ ಶ್ರಮ ಅವರದಾಗಿದೆ ಎಂದರು.
ನಿವೇದಿತ ಟ್ರಸ್ಟಿನ್ ಅಧ್ಯಕ್ಷೆ ಶ್ರೀದೇವಿ ಹೂಗಾರ ಪ್ರಾಸ್ತಾವಿಕ ಮಾತನಾಡಿ, ಇಂದು ಕೌಟುಂಬಿಕ ಸಂಬಂಧ ಕಳಚಿ ಬೀಳುತ್ತಲಿವೆ. ಆ ಕುಟುಂಬದ ಭದ್ರತೆ ಕಾಪಾಡುವಲ್ಲಿ ಶರಣ, ಸಂತರ, ಮಾನವೀಯ ಮೌಲ್ಯಗಳು ಬಹಳ ಅವಶ್ಯಕವಾಗಿವೆ ಎಂದರು.
ಪ್ರೊ| ಚಂದ್ರಕಾಂತ ಬಿರಾದಾರ ಮಾತನಾಡಿ, ಚನ್ನಬಸವೇಶ್ವರ ಗುರುಕುಲದ ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಕಾಶ ದೇಶಮುಖ, ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ನಾಗಯ್ನಾ ಸ್ವಾಮಿ, ಜಗನ್ನಾಥ ಚಿಟಮೆ, ಕಲ್ಪನಾ ಸಾವಲೆ, ಶಾಮ ಡೊಂಗರಗಿ, ಸಂಗಮೇಶ ಜ್ಯಾಂತೆ, ನವಲಿಂಗ ಪಾಟೀಲ, ಪ್ರಕಾಶ ಕೋರೆ, ಶ್ರೀಕಾಂತ ಸ್ವಾಮಿ, ಶ್ರೀಮಂತ ಸಪಾಟೆ, ಎಸ್.ಎಂ. ಜನವಾಡಕರ್, ದೇಶಾಂಶ ಹುಡಗಿ, ಚಂದ್ರಕಾಂತ ಬಿರಾದಾರ, ಎಂ.ಪಿ. ಮುದಾಳೆ, ಡಾ| ಧನಲಕ್ಷ್ಮೀ ಪಾಟೀಲ, ಪಾರ್ವತಿ ಸೋನಾರೆ, ಮಲ್ಲಿಕಾರ್ಜುನ ಮರಖಲೆ, ಡಾ| ಶಾಂತಕುಮಾರ ಸಂಗೋಳಗೆ, ಓಂಕಾರ ಪಾಟೀಲ, ವೇದಾವತಿ, ಮಹೇಶ ಗೋರನಾಳಕರ್, ಅಂಬರೀಶ ಮಲ್ಲೇಶಿ, ಸಂತೋಷ ಹಡಪದ, ಸಂತೋಷ ಪಾಟೀಲ ಸುಂದಾಳ, ಸಂಗಪ್ಪಾ ಸೋಲಪುರೆ, ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.