ಸಿಎಂ ಇಬ್ರಾಹಿಂ ಅವರ ಮಗ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ?
Team Udayavani, Sep 26, 2022, 11:18 AM IST
ಹುಮನಾಬಾದ್: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಮಗ ಸಿಎಂ ಫೈಜ್ ಮೊಹಮ್ಮದ್ ಇಂದು ಸೋಮವಾರ, ಮಂಗಳವಾರ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ವಿವಿಧಡೆ ಸಂಚಾರ ನಡೆಸಲ್ಲಿದ್ದು, ರಾಜಕೀಯವಾಗಿ ವಿವಿಧ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಿಂದ ರಸ್ತೆ ಮೂಲಕ ನೇರವಾಗಿ ಸೋಮವಾರ ಬೆಳಿಗ್ಗೆ 11:30ಕ್ಕೆ ಹುಮನಾಬಾದ ಪಟ್ಟಣಕ್ಕೆ ಆಗಮಿಸುತ್ತಿದ್ದು, ಮೊದಲಿಗೆ ಹೊಚ್ಚಕನಳ್ಳಿ ಗ್ರಾಮದಲ್ಲಿನ ದಿವಂಗತ ಮಾಜಿ ಸಚಿವ ಮೆರಾಜೊದ್ದೀನ್ ಪಟೇಲ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹುಡಗಿ ಗ್ರಾಮದ ವಿರಕ್ತಮಠದ ಚನ್ನಮಲ್ಲ ಸ್ವಾಮಿಜಿ ಭೇಟಿ, ಪಟ್ಟಣದ ಕುಲ ದೇವ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ, ಮಾಣಿಕನಗರದ ಮಾಣಿಕ ಪ್ರಭುಗಳ ದರ್ಶನ, ಮಧ್ಯಾಹ್ನ ಜೆಡಿಎಸ್ ಪಕ್ಷದ ಮುಖಂಡ ಶೌಕತ್ ಅವರ ಮನೆಯಲ್ಲಿ ಊಟ ಮಾಡಿ ನಂತರಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಲ್ಲಿದ್ದಾರೆ.
ನಂತರ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲ್ಲಿದ್ದಾರೆ. ಸಂಜೆ 5:15ಕ್ಕೆ ರಾಜೇಶ್ವರದ ರುದ್ರಮುನಿ ಶಿವಾಚಾರ್ಯರ ಭೇಟಿ, ಹಿರೇನಾಗಂವ ಶಾಂತಲಿಗ ಸ್ವಾಮಿಗಳ ಭೇಟಿ ಮಾಡಲಿದ್ದಾರೆ. ಮಂಗಳವಾರ ಸೆ. 27ರಂದು ಬೆಳಿಗ್ಗೆ ಜೆಡಿಎಸ್ ಮುಖಂಡ ಸುರೇಶ ಸೀಗಿ ಅವರ ಮನೆಯಲ್ಲಿ ಉಪಹಾರ, ಬ್ಯಾಂಕ್ ರೆಡ್ಡಿ ಅವರ ಮನೆಗೆ ಭೇಟಿ, ಹಳ್ಳಿಖೇಡ (ಬಿ) ಚಿಕ್ಕಮಠಕ್ಕೆ ಭೇಟಿ, ಚಿಟಗುಪ್ಪದ ಬುಖಾರಿ ಸಾಹೇಬ್ ಅವರ ಮನೆಗೆ ಬೇಟಿ, ನಾನಾ ಹಜರತ್ ದರ್ಗಾಕ್ಕೆ ಭೇಟಿ ನೀಡಿ ರಾತ್ರೆ ಮರಳಿ ಬೆಂಗಳೂರು ಪ್ರಯಾಣ ನಡೆಸಲ್ಲಿದ್ದಾರೆ.
ಚುನಾವಣೆ ಸ್ಪರ್ಧೆಗೆ ಸಜ್ಜು:
ಸಿಎಂ ಇಬ್ರಾಹಿಂ ಅವರು ಈ ಹಿಂದೆ ಹುಮನಾಬಾದ ಪಟ್ಟಣಕ್ಕೆ ಬೇಟಿನೀಡಿದ ಸಂದರ್ಭದಲ್ಲಿ ಅನೇಕರು ಅವರನ್ನು ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆ ನಡೆಸುವಂತೆ ಒತ್ತಾಯಿಸಿದರು. ಕೆಲ ಮುಖಂಡರು ಬೆಂಗಳೂರಿಗೆ ತೆರಳಿ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಕುರಿತು ವಿವರಣೆ ನೀಡಿದ್ದಾರೆ. ವಿವಿಧ ಚುನಾವಣೆಗಳ ಲೆಕ್ಕಾಚಾರಗಳು ವಿವರಿಸಿದ್ದಾರೆ. ಕಾರಣ ಸಿಎಂ ಇಬ್ರಾಹಿಂ ಅವರು ತಮ್ಮ ಮಗನಿಗೆ ಹುಮನಾಬಾದ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವುದಾಗಿ ತಿಳಿಸಿದ್ದಾರೆ. ಕಾರಣ ಮತ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಎರಡು ದಿನಗಳಕಾಲ ಸಂಚಾರ ನಡೆಸಲ್ಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
– ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.