ಮದ್ಯ ಖರೀದಿಗೆ ಬರುವವರಿಂದ ಆತಂಕ
ಕಲಬುರಗಿಯಿಂದ ಬರುತ್ತಿದ್ದಾರೆ ಹುಮನಾಬಾದಗೆ | ಕೌಂಟರ್ ಸೇಲ್ ಅಂಗಡಿಗಳ ಬಂದ್‌ಗೆ ಆಗ್ರಹ
Team Udayavani, Mar 20, 2020, 11:53 AM IST
ಹುಮನಾಬಾದ: ನೆರೆಯ ಜಿಲ್ಲೆ ಕಲಬುರಗಿಯಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ಎಲ್ಲ ತರಹದ ಮದ್ಯದ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಇದರ ಪರಿಣಾಮ ಅಲ್ಲಿನ ಜನರು ಇದೀಗ ಹುಮನಾಬಾದ ಕಡೆ ಮುಖ ಮಾಡಿದ್ದು, ಇಲ್ಲಿನ ಜನರಿಗೆ ಆತಂಕ ಹುಟ್ಟುವಂತೆ ಮಾಡಿದೆ.
ಕೊರೊನಾ ಸೋಂಕಿನಿಂದ ಜನರನ್ನು ಉಳಿಸಲು ಕಲಬುರಗಿ ಜಿಲ್ಲಾಡಳಿತ ಕಠಿಣ ಕ್ರಮಗಳು ಕೈಗೊಳ್ಳುತ್ತಿರುವ ಮಧ್ಯದಲ್ಲೇ ಮದ್ಯ ಕುಡಿಯಲೇ ಬೇಕು ಎಂಬ ನಿಟ್ಟಿನಲ್ಲಿ ಜನರು ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ. ಗುರುವಾರದಿಂದ ಜಿಲ್ಲೆಯಲ್ಲಿ ಕೂಡ ವಿವಿಧ ಹಂತದ ಮದ್ಯ ಅಂಗಡಿಗಳನ್ನು ಬಂದ್ ಮಾಡಿ ಆದೇಶದ ಹೊರಡಿಸಿದ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರು, ಜಿಲ್ಲೆಯಲ್ಲಿನ ಕೌಂಟರ್ ಸೇಲ್ ಮಾಡುತ್ತಿರುವ ಮದ್ಯದ ಅಂಗಡಿಗಳನ್ನು ಕೂಡ ಬಂದ್ ಮಾಡಿ ಆದೇಶ ಹೊರಡಿಸಬೇಕು ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.
ಯಾವ ವ್ಯಕ್ತಿಗೆ ಸೋಂಕಿದೆ ಅಥವಾ ಯಾವ ವ್ಯಕ್ತಿ ಯಾರ ಸಂಪರ್ಕದಲ್ಲಿ ಬಂದಿದ್ದಾನೆ ಎಂಬುದು ಗೊತ್ತಾಗುವುದಿಲ್ಲ. ರೋಗದ ಲಕ್ಷಣಗಳು ಕಂಡುಬಂದಾಗ ಮಾತ್ರ ವ್ಯಕ್ತಿಗೆ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಗುರುತಿಸಲಾಗುತ್ತದೆ. ಕಾರಣ ಮದ್ಯ ಖರೀದಿಗಾಗಿ ಕಲಬುರಗಿಯಿಂದ ಹುಮನಾಬಾದ ಕಡೆಗೆ ಬರುತ್ತಿರುವ ಜನರ ಬಗ್ಗೆ ಕೂಡ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ. ತಾಲೂಕಿನಲ್ಲಿ ಒಟ್ಟಾರೆ ವಿವಿಧ ಹಂತದ 34 ಮದ್ಯ ಅಂಗಡಿಗಳು ಇದ್ದು, ಈ ಪೈಕಿ 14 ಅಂಗಡಿಗಳು ಮಾತ್ರ ಬಂದ್ ಆಗಿವೆ. ತಾಲೂಕಿನಲ್ಲಿ ಇನ್ನು 20 ಕೌಂಟರ್ ಸೇಲ್ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳು ಇವೆ. ಅಬಕಾರಿ ಅಧಿಕಾರಿಗಳ ಪ್ರಕಾರ ಈ ತಿಂಗಳಲ್ಲಿ ಹೆಚ್ಚು ಮದ್ಯ ಮಾರಾಟವಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.
ಹುಮನಾಬಾದ ಪಟ್ಟಣದಲ್ಲಿಯೇ ಸುಮಾರು ಆರು ಅಂಗಡಿಗಳು ಮದ್ಯ ಮಾರಾಟ ಮಾಡುತ್ತಿರುವ ಕಾರಣ ನೆರೆ ಜಿಲ್ಲೆಯ ಜನರು ಈ ಕಡೆ ಮುಖ ಮಾಡುತ್ತಿದ್ದಾರೆ. ಗುರುವಾದಿಂದ ಪಟ್ಟಣದ ಹೊರವಲಯದಲ್ಲಿನ ವಿವಿಧ ಡಾಬಾಗಳು ಬಂದ್ ಆದ ಕಾರಣ ಮದ್ಯ ಖರೀದಿಸಿ ಮರಳಿ ಕಲಬುರಗಿಗೆ ತೆಳುತ್ತಿದ್ದಾರೆ ಎಂದು ವೈನ್‌ಶಾಪ್ ಸಿಬ್ಬಂದಿಗಳು ತಿಳಿಸಿದ್ದಾರೆ.
ಸುಳ್ಳು ಸುದ್ದಿಗೆ ಮಹತ್ವ ಬೇಡ: ಇತ್ತಿಚೇಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ “ಒಂದು ಪೆಗ್‌ನಲ್ಲಿ ಪ್ಯಾಕ್ ಆಗಲಿದೆ ಕೊರೊನಾ’ ಎಂಬ ಸುದ್ದಿ ಸತ್ಯವೆಂದು ತಿಳಿದುಕೊಂಡು ಅಲ್ಲಿನ ಜನರು ಮದ್ಯಕ್ಕೆ ಮಹತ್ವ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮದ್ಯ ಕುಡಿಯುವ ವ್ಯಕ್ತಿಗೆ ಕೊರೊನಾ ವೈರಸ್ ಪ್ರಭಾವ ಬೀರುವುದಿಲ್ಲ. ಕೊರೊನಾಗೆ ಮದ್ಯವೇ ಮದ್ದು ಎಂದು ನಂಬಿಕೊಂಡಿದ್ದಾರೆ ಎಂದು ವಿವಿಧ ಅಂಗಡಿಗಳ ಮುಖ್ಯಸ್ಥರು ತಿಳಿಸಿದ್ದಾರೆ.
ಆತಂಕದಲ್ಲಿದ್ದಾರೆ ಜನರು: ಕೊರೊನಾ ಪ್ರಕರಣಗಳು ಕಲಬುರಗಿಯಲ್ಲಿ ಹೆಚ್ಚಾಗುತ್ತಿರುವ ಕಾರಣ ಅಲ್ಲಿನ ಜನರು ಈ ಕಡೆಗೆ ಬರುತ್ತಿರುವುದು ತಿಳಿದ ಪಟ್ಟಣದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಲ್ಲಿನ ಜನರಿಂದ ಇಲ್ಲಿಗೂ ಕೂಡ ಕೊರೊನಾ ಬರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಲಬುರಗಿಯಿಂದ ಬರುವ ಜನರ ಬಗ್ಗೆ ಜಿಲ್ಲಾಡಳಿತ ಆರೋಗ್ಯ ತಪಾಸಣೆಗೆ ಮುಂದಾಗಬೇಕು ಎಂಬುದು ಜನರ ಮಾತು.
ಕಲಬುರಗಿಯಿಂದ ಇಲ್ಲಿಗೆ ಜನರು ಬರುತ್ತಿರುವ ಬಗ್ಗೆ ಕೇಳಿಬರುತ್ತಿದೆ. ಈಗಾಗಲೇ ಜಿಲ್ಲಾಡಳಿತ ವಿವಿಧ ಹಂತದ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಹುಮನಾಬಾದ ಪಟ್ಟಣದಲ್ಲಿ 6 ಹಾಗೂ 14 ಇತರೆ ಕಡೆಗಳಲ್ಲಿ ಕೌಂಟರ್ ಸೇಲ್ ಮಾತ್ರ ನಡೆಯುತ್ತಿದೆ. ಕಾನೂನು ಪ್ರಕಾರ ಹಾಗೂ ನಿಯಮಗಳು ಕಡ್ಡಾಯವಾಗಿ ಪಾಲಿಸುವ ಮೂಲಕ ವ್ಯಾಪಾರ ಮಾಡಲು ಸೂಚಿಸಲಾಗಿದೆ.
. ರವಿಂದ್ರ, ಅಬಕಾರಿ ಅಧಿಕಾರಿ
ಮದ್ಯ ಕುಡಿಯುವ ಜನರು ಹೆಚ್ಚು ಮುಂಜಾಗ್ರತೆ ವಹಿಸಬೇಕಾಗಿದೆ. ಮದ್ಯ ಕುಡಿಯವ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗೂ ವೈರಸ್ ಜೊತೆಗೆ ಹೋರಾಡುವಲ್ಲಿ ದುರ್ಬಲರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬೇಡಿ. ಮದ್ಯ ಸೇವಿಸಿ ಕೊರೊನಾ ವೈರಸ್‌ನಿಂದ ಪಾರಾಗಿ ಎಂಬುದು ಸುಳ್ಳು.
. ಅಶೋಕ ಮೈಲಾರೆ,
ಆರೋಗ್ಯಾಧಿಕಾರಿ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.