ತಡೆಹಿಡಿದ ಮನೆಗಳ ನಿರ್ಮಾಣಕ್ಕೆ ಅಸ್ತು
14ರೊಳಗೆ ತಳಪಾಯ ಹಂತದ ಜಿಪಿಎಸ್ ಕಡ್ದಾಯ ವಸತಿ ಯೋಜನೆಯಲ್ಲಿ ಅಕ್ರಮವಾಗದಂತೆ ಸದಸ್ಯರ ಪಟ್ಟು
Team Udayavani, Feb 27, 2020, 12:57 PM IST
ಹುಮನಾಬಾದ: ಬಸವ ವಸತಿ, ಪ್ರಧಾನಮಂತ್ರಿ ಆವಾಸ್, ಡಾ| ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ಯೋಜನೆಗಳಡಿ ತಾಲೂಕಿನ 34 ಗ್ರಾ.ಪಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯಬೇಕಾದ 754 ಮನೆಗಳ ನಿರ್ಮಾಣಕ್ಕೆ ತಡೆ ನೀಡಿದ ಸರ್ಕಾರ ಇದೀಗ ಮನೆಗಳ ನಿರ್ಮಾಣಕ್ಕೆ ಆದೇಶ ನೀಡಿದೆ. ಈ ಕುರಿತು ಕಳೆದ ಜನವರಿ 7ರಂದು “ಉದಯವಾಣಿ’ಯಲ್ಲಿ “ವಸತಿ ಯೋಜನೆ 754 ಮನೆ ನಿರ್ಮಾಣಕ್ಕೆ ಗ್ರಹಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಈ ಕುರಿತು ತಾ.ಪಂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಅಲ್ಲದೇ, ಮನೆಗಳ ನಿರ್ಮಾಣಕ್ಕೆ ಮರು ಆದೇಶ ನೀಡಬೇಕೆಂದು ಸದಸ್ಯರು ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಡ ಹೇರಿದ್ದರು. ಇದೀಗ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ವ್ಯವಸ್ಥಾಪಕರು ಮನೆ ನಿರ್ಮಾಣಕ್ಕೆ ಆನ್ ಲೈನ್ ವ್ಯವಸ್ಥೆ ಶುರು ಮಾಡಿದ್ದು, ಮಾ.14ರ ವರೆಗೆ ವಸತಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಕನಿಷ್ಟ ತಳಪಾಯ ಹಂತದ ಜಿಪಿಎಸ್ ಮಾಡಿಕೊಳ್ಳಬೇಕೆಂದು ಆದೇಶಿಸಿದ್ದಾರೆ.
ಯಾವ ಗ್ರಾಪಂಗೆ ಎಷ್ಟು?: ಬೇಮಳಖೇಡಾ ಗ್ರಾಪಂ-10 ಮನೆಗಳು, ಉಡಮನಳ್ಳಿ ಗ್ರಾಪಂ-15, ಚಾಂಗಲೇರಾ ಗ್ರಾಪಂ-13, ಮೀನಕೇರಾ ಗ್ರಾಪಂ-66, ಧುಮ್ಮನಸೂರ ಗ್ರಾಪಂ-28, ಮನ್ನಾಎಖೇಳ್ಳಿ ಗ್ರಾಪಂ-15, ನಿರ್ಣಾ ಗ್ರಾಪಂ-4, ಮುತ್ತಂಗಿ ಗ್ರಾಪಂ-5, ಮಂಗಲಗಿ ಗ್ರಾಪಂ-39, ತಾಳಮಡಗಿ ಗ್ರಾಪಂ-49, ಸಿತಾಳಗೇರಾ ಗ್ರಾಪಂ-12, ಡಾಕುಳಗಿ ಗ್ರಾಪಂ-8, ಬೇನಚಿಂಚೋಳಿ ಗ್ರಾಪಂ-18, ಮದರಗಾಂವ ಗ್ರಾಪಂ-33, ನಂದಗಾಂವ ಗ್ರಾಪಂ-29, ಹುಡಗಿ ಗ್ರಾಪಂ-25, ದುಬಲಗುಂಡಿ ಗ್ರಾಪಂ-79, ಸುಲ್ತಾನಬಾದ ಗ್ರಾಪಂ-5, ಘೋಡವಾಡಿ ಗ್ರಾಪಂ-25, ಘಾಟಬೋರಳ ಗ್ರಾಪಂ-10, ಚಂದನಹಳ್ಳಿ ಗ್ರಾಪಂ-1, ಸೆಡೋಳ ಗ್ರಾಪಂ-18, ಕನಕಟ್ಟಾ ಗ್ರಾಪಂ-21, ಮಾಣಿಕನಗರ ಗ್ರಾಪಂ-12, ಸಿಂದನಕೇರಾ ಗ್ರಾಪಂ-40, ಇಟಗಾ-12, ಕೋಡಂಬಲ್ ಗ್ರಾಪಂ-32, ಕಲ್ಲೂರ ಗ್ರಾಪಂ-15, ಹಳ್ಳಿಖೇಡ ಕೆ ಗ್ರಾಪಂ-33, ಮುಸ್ತರಿ ಗ್ರಾಪಂ-23, ಉಡಬಾಳ ಗ್ರಾಪಂ-11, ಜಲಸಂಗಿ ಗ್ರಾಪಂ-10 ಮನೆಗಳ ನಿರ್ಮಾಣಕ್ಕೆ ಈ ಹಿಂದೆ ತಡೆಯುಂಟಾಗಿತ್ತು. ಇದೀಗ ಈ ಎಲ್ಲ ಗ್ರಾಪಂಗಳಲ್ಲಿನ ಮನೆಗಳ ನಿರ್ಮಾಣಕ್ಕೆ ನಿಗದಿತ ಅವ ಧಿಯ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಪಾರದರ್ಶಕತೆ ಕಾಪಾಡಿ: ವಸತಿ ಯೋಜನೆಯಲ್ಲಿ ಅ ಧಿಕಾರಿಗಳು ಅಕ್ರಮ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಜಿಪಿಎಸ್ ಮಾಡಬೇಕಾದರು ಕೂಡ ಹಣ ನೀಡಬೇಕೆಂದು ಜನರು ದೂರುತ್ತಿದ್ದಾರೆ ಎಂದು ಈ ಹಿಂದಿನ ತಾಪಂ ಸಭೆಯಲ್ಲಿ ಸದಸ್ಯ ಪರಮೇಶ್ವರ ಕಾಳಮದರಗಿ ದೂರಿದ್ದರು. ಇದೀಗ ಎಲ್ಲ ಗ್ರಾಪಂಗಳಲ್ಲಿನ ಮನೆಗಳ ನಿರ್ಮಾಣಕ್ಕೆ ಸರ್ಕಾರ ಮರು ಆದೇಶ ನೀಡಿ ಅವಕಾಶ ನೀಡಿದ್ದು, ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಬಡವರಿಂದ ಯಾವುದೇ ಹಣಕ್ಕೆ ಬೇಡಿಕೆ ಇಡಬಾರದು. ಈ ನಿಟ್ಟಿನಲ್ಲಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಗಾ ವಹಿಸಬೇಕು ಎಂದು ತಾಪಂ ಸದಸ್ಯ ನಾಗೇಶ ಕಲ್ಲೂರ, ಪರಮೇಶ್ವರ ಕಾಳಮದರಿ ಹಾಗೂ ಇತರೆ ಸದಸ್ಯರು ಒತ್ತಾಯಿಸಿದ್ದಾರೆ.
ಮನೆ ನಿರ್ಮಾಣಕ್ಕೆ ಜನರ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿಂದೆ ಬಂದಿರುವ ಮನೆಗಳ ನಿರ್ಮಾಣಕ್ಕೆ ತಡೆಯಾಗಿದ್ದು, ಅನೇಕರಿಗೆ ಸಮಸ್ಯೆಯುಂಟಾಗಿತ್ತು. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಂತರ ಹೊಸ ಮನೆಗಳ ಹಂಚಿಕೆ ಮಾಡಿಲ್ಲ. ಅರ್ಹ ಫಲಾನುಭವಿಗಳಿಂದ ಮನೆ ಬೇಡಿಕೆ ಬರುತ್ತಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವಿಧಾನಸಭಾ ಕಲಾಪದಲ್ಲಿ ಸರ್ಕಾರಕ್ಕೆ ಪ್ರಶ್ನಿಸಲಾಗುವುದು.
ರಾಜಶೇಖರ ಪಾಟೀಲ, ಶಾಸಕರು
ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಫಲಾನುಭವಿಗಳು ಬಳಸಿಕೊಳ್ಳಬೇಕು. ಈ ವರೆಗೆ ಯಾರು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಕೂಡಲೇ ಕೆಲಸ ಆರಂಭಿಸಬೇಕು. ಎಲ್ಲ ಪಿಡಿಒಗಳು ಸ್ಥಳೀಯರಿಗೆ ಮಾರ್ಗದರ್ಶನ ನೀಡಿ ಮನೆ ನಿರ್ಮಾಣದ ಕಾರ್ಯಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು.
ಶ್ರೀಮಂತ ಪಾಟೀಲ,
ತಾಪಂ ಸದಸ್ಯ
ತಡೆಹಿಡಿದ ವಸತಿಗಳ ಕುರಿತು ರಾಜ್ಯ ಮಟ್ಟದ ವಿಡಿಯೋ ಸಂವಾದದಲ್ಲಿ ಚರ್ಚೆಯಾಗಿದ್ದು, ನಿಗದಿತ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದೇ ಇರುವುದರಿಂದ ಬ್ಲಾಕ್ ಮಾಡಲಾಗಿತ್ತು. ಇದೀಗ ಆನ್‌ಲೈನ್ ಶುರುವಾಗಿದ್ದು, ಜಿಪಿಎಸ್ ಮಾಡುವ ಕಾರ್ಯ ನಡೆದಿದೆ. ಮಾ.14ರೊಳಗಾಗಿ ತಳಪಾಯ ಹಂತದ ಜಿಪಿಎಸ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ವೈಜಿನಾಥ ಫುಲೆ,
ತಾಪಂ, ಇಒ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.