ಬಳಕೆಯಾಗದೇ ಧೂಳು ಹಿಡಿದ ಕಂಪ್ಯೂಟರ್
ಶಾಲೆಯಲ್ಲಿ ಪ್ರತ್ಯೇಕ ಶಿಕ್ಷಕರಿಲ್ಲದಕ್ಕೆ ಕಲಿಕೆ ಇಲ್ಲ ಕಂಪ್ಯೂಟರ್ ಜ್ಞಾನ ಸಿಗದಿದ್ದರೆ ಭವಿಷ್ಯ ಶೂನ್ಯ
Team Udayavani, Mar 15, 2020, 1:24 PM IST
ಹುಮನಾಬಾದ: ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಣ ಖರ್ಚು ಮಾಡಲು ತೋರುವ ಅಸಕ್ತಿಯನ್ನು ಅದೇ ಯೋಜನೆಯನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಲು ತೋರುತ್ತಿಲ್ಲ. ತಾಲೂಕಿನ 40ಕ್ಕೂ ಅಧಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಕಂಪ್ಯೂಟರ್‌ಗಳು ಉಪಯೋಗವಾಗದೇ ಇಂದಿಗೂ ಧೂಳು ತಿನ್ನುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.
ಕಂಪ್ಯೂಟರ್ ಇಂದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ನಿಟ್ಟಿನಲ್ಲಿ 15 ವರ್ಷಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಪೂರೈಕೆ ಮಾಡಲಾಗಿದ್ದು, ಇಂದಿಗೂ ಕೂಡ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿಲ್ಲ. ಹಣ ಖರ್ಚು ಮಾಡಿ ಖರೀದಿಸಿದ ಕಂಪ್ಯೂಟರ್‌ಗಳು ಬಂದು ಧೂಳು ತಿನ್ನುತ್ತಿದ್ದು, ಇವುಗಳ ಉಪಯೋಗ ಮಾಡಿಕೊಳ್ಳಲು ಶಾಲೆಗಳು ಮುಂದಾಗುತ್ತಿಲ್ಲ.
ಕೆಲ ಶಾಲೆಗಳಿಗೆ ಕಂಪ್ಯೂಟರ್‌ಗಳು ಪೂರೈಕೆ ಆಗಿದ್ದರೆ, ಇನ್ನು ಕೆಲ ಶಾಲೆಗಳಿಗೆ ಕಂಪ್ಯೂಟರ್ ಜೊತೆಗೆ ಯುಪಿಎಸ್ ಬ್ಯಾಟರಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಬಹುತೇಕ ಶಾಲೆಗಳಲ್ಲಿನ ಕಂಪ್ಯೂಟರ್ ಗಳು ಚಾಲನೆಯಲ್ಲಿವೆ. ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಲೆಗಳಿಗೆ ನೀಡಿರುವ ಕಂಪ್ಯೂಟರ್‌ಗಳನ್ನು ಸೂಕ್ತವಾಗಿ ಬಳಸಿಕೊಳ್ಳದ ಕಾರಣ ಕೊಠಡಿಯಲ್ಲಿ ಧೂಳು ತಿನ್ನುತ್ತಿವೆ.
ಪಾಲಕರ ಆಕ್ರೋಶ
ಸರ್ಕಾರಿ ಶಾಲೆಗಳಿಗೆ ಬರುವುದು ಬಹುತೇಕ ಕಡು ಬಡವರ ಮಕ್ಕಳು ಎಂಬುದು ಎಲ್ಲರಿಗೂ ಗೊತ್ತು. ಆ ಮಕ್ಕಳ ಕಲಿಕೆ ಹಂತದಲ್ಲಿ ಕಂಪ್ಯೂಟರ್ ಜ್ಞಾನ ಸಿಗದಿದ್ದರೆ ಮಕ್ಕಳ ಮುಂದಿನ ಭವಿಷ್ಯ ಶೂನ್ಯ ಆಗಬಹುದು. ಇಲ್ಲಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೂ ಗೊತ್ತಿದ್ದರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಶಿಕ್ಷಕರು ಇಲ್ಲದ ಕಾರಣ ಕಂಪ್ಯೂಟರ್‌ಗಳು ಬಳಕೆಯಾಗದೇ ದುಸ್ಥಿತಿಗೆ ತಲುಪುತ್ತಿವೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಪ್ಯೂಟರ್ ಕಂಡು ವಿದ್ಯಾರ್ಥಿಗಳು ಕೂಡ ಶಿಕ್ಷಣ ಇಲಾಖೆಗೆ ಹಿಡಿ ಶಾಪಾ ಹಾಕುತ್ತಿದ್ದಾರೆ.
ಕಂಪ್ಯೂಟರ್ ಕಲಿಸಲು ಶಿಕ್ಷಕರಿಲ್ಲ
ಕಂಪ್ಯೂಟರ್‌ಗಳು ಇರುವ ಕಡೆಗಳಲ್ಲಿ ಕಂಪ್ಯೂಟರ್ ಕಲಿಸಲು ಪ್ರತ್ಯೇಕ ಶಿಕ್ಷಕರು ಇಲ್ಲದ ಕಾರಣ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿಲ್ಲ. ಕೆಲ ಶಿಕ್ಷಕರು ಈ ಹಿಂದೇ ತರಬೇತಿ ಪಡೆದುಕೊಂಡಿದ್ದು, ಇದೀಗ ಅವರು ವರ್ಗಾವಣೆಯಾಗಿ ಬೇರೆಕಡೆ ಹೋಗಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕವಾದರೆ ಮಾತ್ರ ಮಕ್ಕಳಿಗೂ ಸೂಕ್ತ ತರಬೇತಿ ನೀಡಲು ಸಾಧ್ಯ ಎನ್ನುತ್ತಾರೆ ವಿವಿಧ ಶಾಲೆಗಳ ಮುಖ್ಯಸ್ಥರು. ಕಂಪ್ಯೂಟರ್ ಇರುವ ಬಹಳಷ್ಟು ಶಾಲೆಗಳಲ್ಲಿ ಕಲಿಸುವ ಶಿಕ್ಷಕರಿಲ್ಲ. ಯಾವ ಶಿಕ್ಷಕರಿಗೆ ಕಂಪ್ಯೂಟರ್ ಕಲಿಸುವ ಅರ್ಹತೆ ಇದೆಯೋ ಆ ಶಾಲೆಗಳಲ್ಲಿ ಕಂಪ್ಯೂಟರ್ ಸರ್ಕಾರವು ವಿದ್ಯಾರ್ಥಿ ವೇತನದಿಂದ ಹಿಡಿದು ನೌಕರರಿಗೆ ಅರ್ಜಿ ಹಾಕುವವರೆಗೂ ಎಲ್ಲದಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಿದೆ. ಆದರೆ, ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಮಾತ್ರ ಹಿಂದುಳಿದಿದೆ.
ಎಲ್ಲೆಲ್ಲಿವೆ ಕಂಪ್ಯೂಟರ್
ನಿರ್ಣಾ ಬಾಲಕಿಯರ ಶಾಲೆಯಲ್ಲಿ, ಮನ್ನಾಏಖೇಳ್ಳಿ ಎಂಪಿಎಸ್, ದುಬಲಗುಂಡಿ ಬಾಲಕಿಯರ ಶಾಲೆ, ಹಳ್ಳಿಖೇಡ(ಬಿ) ಬಾಲಕಿಯರ ಶಾಲೆ, ಹಂದಿಕೇರಾ ಎಚ್‌ಪಿಎಸ್, ಹುಡ್ಗಿ ಉರ್ದು ಶಾಲೆ, ಬೇಮಳಖೇಡಾ ಎಂಪಿಎಸ್, ಚಿಟಗುಪ್ಪ ಎಚ್‌ಪಿಎಸ್, ಜಲಸಂಗಿ ಎಲ್‌ಪಿಎಸ್, ಗಡವಂತಿ ಎಚ್‌ಪಿಎಸ್, ವಾಂಜರಿ ಎಚ್‌ಪಿಎಸ್, ಹಳ್ಳಿಖೇಡ(ಬಿ) ಎಚ್‌ಪಿಎಸ್, ಸಿತಾಳಗೇರಾ ಎಚ್‌ಪಿಎಸ್, ಚಾಂಗಲೇರಾ ಎಂಪಿಎಸ್, ಚಿಟಗುಪ್ಪ ಬಾಲಕಿರ ಎಂಪಿಎಸ್, ಬೇಳಕೇರಾ ಎಸ್‌ಪಿಎಸ್, ಮೀನಕೇರಾ ಎಚ್‌ಪಿಎಸ್, ಕೊಡಂಬಲ್ ಎಂಪಿಎಸ್, ಮದರಗಾಂವ ಎಚ್‌ಪಿಎಸ್, ಉಡಮನಳ್ಳಿ ಎಮ್‌ಪಿಎಸ್, ಘಾಟಬೋರಳ ಎಚ್‌ಪಿಎಸ್, ಕನಕಟ್ಟಾ ಎಚ್‌ಪಿಎಸ್, ಮಂಗಲಗಿ ಎಚ್‌ಪಿಎಸ್, ತಾಳಮಡಗಿ ಎಚ್ ಪಿಎಸ್, ಇಟಗಾ ಎಚ್‌ಪಿಎಸ್ ಹಾಗೂ ವಿವಿಧ ಇತರೆ ಶಾಲೆಗಳಲ್ಲಿ ಕೂಡ ಕಂಪ್ಯೂಟರ್‌ಗಳು ಇವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ತಾಲೂಕಿನ 27 ಪ್ರೌಢಶಾಲೆ ಹಾಗೂ ಮೇಲ್ದರ್ಜೆಗೆ ಏರಿದ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ವ್ಯವಸ್ಥೆ ಇದ್ದು, ಪ್ರೌಢಶಾಲೆಗಳಲ್ಲಿನ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ವಿಷಯವಾರು ಪಾಠ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಆಯಾ ಶಾಲೆಗಳಲ್ಲಿನ ಒಬ್ಬ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆಯುತ್ತೇನೆ.
ಶಿವಗೊಂಡಪ್ಪ ಸಿದ್ಧನಗೋಳ,
ಕ್ಷೇತ್ರ ಶಿಕ್ಷಣಾಧಿಕಾರಿ
ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ನೀಡಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ಕೂಡ ಆಯ್ದ ಹತ್ತು ಶಾಲೆಗಳಿಗೆ ಕಂಪ್ಯೂಟರ್‌ಗಳು ಪೂರೈಕೆ ಮಾಡಲಾಗಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕೆಲಸ ಕೂಡ ಆಗಿದೆ. ಈ ಕುರಿತು ಮಾಹಿತಿ ಪಡೆಯಲಾಗುವುದು.
ಶಿವಕುಮಾರ ಪಾರಶೆಟ್ಟಿ,
ಬಿಆರ್‌ಸಿ ಅಧಿಕಾರಿ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.