ಅಗ್ನಿ ತುಳಿಯಲು ಹರಿದು ಬಂದ ಜನಸಾಗರ

ರಾಜ್ಯ-ಹೊರರಾಜ್ಯದ ಭಕ್ತರಿಂದ ದೇವರ ದರ್ಶನ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ

Team Udayavani, Jan 27, 2020, 1:33 PM IST

27-Janauary-14

ಹುಮನಾಬಾದ: ಹೈದ್ರಾಬಾದ ಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ರವಿವಾರ ಅಗ್ನಿ ತುಳಿಯಲು ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು.

ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಅಗ್ನಿ ತುಳಿದರು. ಶನಿವಾರ ರಾತ್ರಿ 10 ಗಂಟೆಗೆ ದೇವರ ಪಲ್ಲಕ್ಕಿಯ ಮೆರವಣಿಗೆ ದೇವಸ್ಥಾನದಿಂದ ಅಗ್ನಿ ತುಳಿಯಲು ಹೊರಟು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರವಿವಾರ ಬೆಳಗ್ಗೆ 7 ಗಂಟೆಗೆ ಅಗ್ನಿ ಕುಂಡಕ್ಕೆ ಆಗಮಿಸಿತು.

ಮೊದಲಿಗೆ ದೇವರು ಅಗ್ನಿ ತುಳಿಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವರ ಮಂಚ ಅಗ್ನಿ ಕುಂಡಕ್ಕೆ ಪ್ರದಕ್ಷಣೆ ಹಾಕಿದ ಬಳಿಕ ಭಕ್ತರಿಗೆ ಆಗ್ನಿ ತುಳಿಯಲು ಅನುವು ಮಾಡಿಕೊಡಲಾಯಿತು. ದೇವರ ಪಲ್ಲಕ್ಕಿ ಮೆರವಣಿಗೆ ರವಿವಾರ ಬೆಳಗ್ಗೆ 12 ಗಂಟೆಗೆ ಮರಳಿ ದೇವಸ್ಥಾನಕ್ಕೆ ಸೇರಿತು.

ಒಂದು ಬಾರಿ ಅಗ್ನಿ ತುಳಿದರೆ ತಪ್ಪದೆ ಪ್ರತಿವರ್ಷ ಅಗ್ನಿ ತುಳಿಯಲೇ ಬೇಕಾದ ನಿಯಮ ಇರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೂಡ ಬೇರೆ ಊರುಗಳಲ್ಲಿ ವಾಸವಾಗಿದ್ದರೂ ಕೂಡ ಕುಟುಂಬ ಸಮೇತ ಜಾತ್ರೆಗೆ ಆಗಮಿಸಿ ದೇವರಿಗೆ ಶಾಲು ಹೊದಿಸುವುದು, ಸಕ್ಕರೆ ಪೇಡಾ ಸೇರಿದಂತೆ ಇತರೆ ನೈವೇದ್ಯಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸುವ ವಾಡಿಕೆ ಇದೆ. ಅದರಂತೆ ಭಕ್ತರು ಇಂದಿಗೂ ಆ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಭಕ್ತರು ಅಗ್ನಿ ಕುಂಡದ ಎದುರಿಗೆ ಗಂಟೆಗಳ ಕಾಲ ಸರದಿಯಲ್ಲಿ ನಿಂತು ವೀರಭದ್ರನಿಗೆ ಜಯಕಾರ ಹಾಕುತ್ತ ಮುಂದೆ ಸಾಗಿ ಅಗ್ನಿ ತುಳಿದು ಭಕ್ತಿಭಾವ ಮೆರೆದರು. ಪ್ರತಿವರ್ಷ ಅಗ್ನಿ ಕುಂಡದಿಂದ ಕಲ್ಲೂರ ರಸ್ತೆವರೆಗೆ ಭಕ್ತಾದಿಗಳು ಅಗ್ನಿ ತುಳಿಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ, ಇದೀಗ ಅಗ್ನಿ ಕುಂಡ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದೇ ಬಾರಿಗೆ ಅಗ್ನಿ ತುಳಿದರು. ಜಿಲ್ಲೆಯ ಕೆಲ ಗ್ರಾಮಗಳ ಭಕ್ತಾದಿಗಳು ಕಾಲು ನಡುಗೆಯಲ್ಲಿ ಆಗಮಿಸಿ ಅಗ್ನಿ ತುಳಿದು ದೇವರ ದರ್ಶನ ಪಡೆದರು.

ಭಕ್ತರಿಗೆ ಅನ್ನದಾಸೋಹ: ಪಟ್ಟಣದ ವಿವಿಧ ಸರ್ಕಾರಿ ಇಲಾಖೆಗಳು, ಪಟ್ಟಣದ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಯವರು, ಯುವ ಸಮೋಹದವರು, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನದಾಸೊಹದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು.

ಪಟ್ಟಣದ ಪ್ರವಾಸಿ ಮಂದಿರ ಪಂಚಾಯತ ರಾಜ್‌ ಇಲಾಖೆ, ಎಪಿಎಂಸಿ ಹತ್ತಿರ, ಪೊಲೀಸ್‌ ಠಾಣೆ ಎದುರಿಗೆ, ಉದ್ಯಮಿ ದತ್ತಕುಮಾರ ಚಿದ್ರಿ ಅಂಗಡಿ ಹತ್ತಿರ, ಸರ್ದಾರ ಪಟೇಲ ವೃತ್ತ, ಬಾಲಾಜಿ ವೃತ್ತ, ಜೇರಪೆಟ ಬಡಾವಣೆ, ಕಲ್ಲೂರ ರಸ್ತೆ, ಅರಣ್ಯ ಇಲಾಖೆ ಪ್ರಾಂಗಣ, ಜೂನಿಯರ್‌ ಕಾಲೇಜು ಮೈದಾನ, ಪಂಚಾಯತ ರಾಜ್‌ ಇಲಾಖೆ ಎದುರಿಗೆ ಸೇರಿದಂತೆ ಇತರೆ ವಾರ್ಡ್‌ಗಳಲ್ಲಿಯೂ ಅನ್ನದಾಸೊಹ ನಡೆಯಿತು. ಬಂದ ಭಕ್ತಾದಿಗಳಿಗೆ ಅನ್ನ, ಕಿಚಡಿ ಚಟ್ನಿ, ಭಜ್ಜಿ, ಜೋಳದ ರೊಟ್ಟಿ, ಸಜ್ಜ ರೊಟ್ಟಿ, ಉಪ್ಪಿಟ್ಟು, ಸೀರಾ ಸೇರಿದಂತೆ ಕುಡಿಯುವ ನೀರು, ಚಹಾ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜಾತ್ರೆಗೆ ಆಗಮಿಸಿದ ಲಕ್ಷಾಂತರ ಜನರು ಪ್ರಸಾದ ಸ್ವೀಕರಿಸಿ ದಾಸೋಹಿಗಳಿಗೆ ಹರಸಿದರು.

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.