ಕಲೆ ಅರಳುತ್ತಿದ್ದರೆ ಜೀವನ ಅಜರಾಮರ
Team Udayavani, Feb 19, 2018, 12:59 PM IST
ಬೀದರ: ಮನುಷ್ಯ ಹೂವಿನ ಮೇಲೆ ಮಲಗಿದರೆ ಪ್ರಥಮ ರಾತ್ರಿ, ಹೂವು ಮನುಷ್ಯನ ಮೇಲೆ ಮಲಗಿದರೆ ಅದು ಆತನ
ಅಂತಿಮ ರಾತ್ರಿ. ಆದ್ದರಿಂದ ಜೀವನದಲ್ಲಿ ಮನುಷ್ಯನಾದವನಿಗೆ ಒಂದು ಕಲೆ ಇರಬೇಕು. ಅದು ಸದಾ ಅರಳುತ್ತಿದ್ದರೆ ಜೀವನ ಅಜರಾಮರವಾಗುತ್ತದೆ ಎಂದು ಹುಲಸೂರು ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು ಕರೆ ನೀಡಿದರು.
ನಗರದಲ್ಲಿ ರವಿವಾರ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಶಪಾಂಡೆ ಸಹ ನೂರಾರು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವುದು ಆದರ್ಶದಾಯಕ ಬೆಳವಣಿಗೆ ಎಂದು ಬಣ್ಣಿಸಿದರು.
ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕವಿಗಳು ಎಂದು ತಾರತಮ್ಯ ಮಾಡಿ ನಮ್ಮ ಭಾಗದ ಕವಿಗಳಿಗೆ ಸರ್ಕಾರ ಅನ್ಯಾಯ ಮಾಡಕೂಡದು. ರವಿ ಕಾಣದ್ದನ್ನು ಕವಿ ಕಾಣಬಲ್ಲ. ಆತನ ಬದುಕು ಬಹು ಕಷ್ಟಕರವಾದ್ದರಿಂದ ಸರ್ಕಾರ ಕವಿಗಳಿಗೆ ವಿಶೇಷ ಸೌಕರ್ಯಗಳನ್ನು ಒದಗಿಸಬೇಕು. ಹೆಚ್ಚು ಪ್ರಶಸ್ತಿ ಹಾಗೂ ಸನ್ಮಾನಗಳನ್ನು ದಕ್ಷಿಣ ಭಾಗದ ಕವಿಗಳಿಗೆ ನೀಡುವ ಮೂಲಕ ಸರ್ಕಾರ ಈ ಭಾಗಕ್ಕೆ ಅನ್ಯಾಯ ಮಾಡುತ್ತಲೇ ಬರುತ್ತಿದೆ. ಇಡೀ ಜಗತ್ತಿಗೆ ಅಧ್ಯಾತ್ಮವನ್ನು ಪ್ರಚುರಪಡಿಸಿದ ಶರಣರ ನಾಡಾದ ನಮ್ಮ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶ ಸ್ವಾತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ನಮ್ಮೊಳಗಿನ ಗುಲಾಮಗಿರಿ ಅಳಿಸಿ ಹೋಗಿಲ್ಲ. ಸದಾ ಋಣಾತ್ಮಕ ದೃಷ್ಟಿಕೋನ ಹೊಂದಿ ನಮ್ಮ ಪ್ರಬುದ್ಧತೆ ಮರೆಯುತ್ತಿದ್ದೇವೆ. ಆದರೆ ಇಂದು ಕಾಲ ಬದಲಾಗಿದೆ. ನಮ್ಮ ಕವಿಗಳು ಹಾಗೂ ಕಲಾವಿದರು ಬೇರೆಕಡೆಗೆ ತಮ್ಮ ಅದ್ಭುತ ಪ್ರದರ್ಶನ ತೋರುತ್ತ ಜನಮನ್ನಣೆ ಗಳಿಸುತ್ತಿರುವುದಲ್ಲದೆ, ನಾಡಿನ ಕಲಾವಿದರು, ಸಾಹಿತಿಗಳು ಹಾಗೂ ವಿದ್ವಾಂಸರನ್ನು ನಮ್ಮೆಡೆಗೆ ಆಕರ್ಷಿಸುತ್ತಿರವುದು ಸಮಾಧಾನದ ಸಂಕೇತ ಎಂದರು.
ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎನ್.ತಿಮ್ಮಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತಗೊಳಿಸುವಲ್ಲಿ ದೇಶಪಾಂಡೆ ಪ್ರತಿಷ್ಟಾನದ ಶ್ರಮ ಅಷ್ಟಿಷ್ಟಲ್ಲ. ಹಳೆ ಮೈಸೂರು ಭಾಗದ ಕಲಾವಿದರನ್ನು ಹಾಗೂ ನೆರೆಯ ಕಾಸರಗೂಡಿನ ಕವಿಗಳನ್ನು ತಮ್ಮ ಜಿಲ್ಲೆಗೆ ಆಹ್ವಾನಿಸಿ ಸಮನ್ವಯತೆ ಸಾರಿದ್ದಾರೆ. ಜಾಗತಿಕ ವಿದ್ಯಮಾನದಲ್ಲಿ ವಚನ ಸಾಹಿತ್ಯ ವಿಶಿಷ್ಟ ರೀತಿಯಲ್ಲಿ ಪ್ರಚುರ ಪಡಿಸಿರುವುದು ಅವರ ಮತ್ತೂಂದು ಪ್ರಶಂಸನಾರ್ಹ ಕ್ರಮ ಎಂದು ಪ್ರತಿಪಾದಿಸಿದರು.
ಉದಗೀರದ ಸಾಹಿತಿ ಮಾಣಿಕರಾವ್ ಬಿರಾದಾರ ಮಾತನಾಡಿದರು. ಬೆಂಗಳೂರಿನ ಸಾಹಿತಿ ಪ್ರಕಾಶ ಅಂಬಲಕರ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚಾ ಶಬರಿ ಮಾತಾ ಆಶ್ರಮದ ಶ್ರೀ ನೀಲಾಂಬಿಕಾ ಮಾತಾಜಿ ನೇತೃತ್ವ ವಹಿಸಿದ್ದರು. ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಹಲವಾರು ಕವಿಗಳು ತಮ್ಮ ಕವಿತೆ ಪ್ರಸ್ತುತಪಡಿಸಿದರು. ಸ್ಥಳೀಯ ಹಾಗೂ ಇತರೆ ಕಲಾಕಾರರು ತಮ್ಮ ಕಲೆ ಪ್ರದರ್ಶಿಸಿದರು. ಕಾಸರಗೂಡಿನ ಸಾಹಿತಿ ವಿ.ಬಿ. ಕುಳಮರ್ವಗೆ ಸಾಹಿತ್ಯ ಮಂದಾರ ಪ್ರಶಸ್ತಿ, ಹುಬ್ಬಳ್ಳಿಯ ಸಂಶೋಧಕ ಕೆ.ಸಿ. ಮಲ್ಲಿಗೆವಾಡಗೆ ಸಂಶೋಧನಾ ಚೂಡಾಮಣಿ ಪ್ರಶಸ್ತಿ, ಸ್ಥಳೀಯ ಕಲಾವಿದ ನಾಗರಾಜ ಜೋಗಿಗೆ ಸಂಗೀತ ರತ್ನ ಪ್ರಶಸ್ತಿ, ಬಾಗಲಕೋಟೆಯ ರಮೇಶ ಕಮತಗಿ ಅವರಿಗೆ ಸಾಹಿತ್ಯ ಪ್ರತಿಭಾ ರತ್ನ ಪ್ರಶಸ್ತಿ, ಚಿಕ್ಕಮಂಗಳೂರಿನ ಅಜ್ಜಿಂಪುರ ಎಸ್.ಶ್ರುತಿ ಅವರಿಗೆ ಸಂಚಾಲನೆ ಪ್ರತಿಭಾ ರತ್ನ ಪ್ರಶಸ್ತಿ, ಉಡುಪಿಯ ರಾಘವೇಂದ್ರ ಉಳ್ಳುರಗೆ ಸಾಹಿತ್ಯ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ, ಇಂಡಿ ಜಾನಪದ ಸಂಶೋಧಕ ದಾನಪ್ಪ ಬಗಲಿ, ಅ.ಭಾ.ವ.ಸಾ.ಸ. ಪರಿಷತ್ ರಾಜ್ಯ ಸಂಚಾಲಕ ಜೆ.ಸಿ. ರಂಗನಾಥ, ಕೀರ್ತಿ ಎನ್ ಜಿಒ ಅಧ್ಯಕ್ಷ ವಿಜಯಕುಮಾರ ಅಷ್ಟುರೆ, ಸಾಹಿತಿ ಗೋಪಾಲಕೃಷ್ಣ ವಂಡ್ಸೆ, ಹಂಶಕವಿ, ಜಯದೇವಿ ದುಬುಲಗುಂಡಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಾಹಿತಿ ದೇಶಾಂಶ ಹುಡುಗಿ, ಬಸವರಾಜ ದಯಾಸಾಗರ, ಡಾ| ಗವಿಸಿದ್ದಪ್ಪ ಪಾಟೀಲ, ಸಂಜುಕುಮಾರ ಅತಿವಾಳೆ, ಸಂಜೀವಕುಮಾರ ಸ್ವಾಮಿ, ಪ್ರಕಾಶ ಕನ್ನಾಳೆ ಸೇರಿದಂತೆ ನೂರಾರು ಕವಿಗಳು, ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ಉಷಾ ಪ್ರಭಾಕರ ಹಾಗೂ ತಂಡದವರು ಪ್ರಾರ್ಥನೆ ನೃತ್ಯ ಪ್ರಸ್ತುತಪಡಿಸಿದರು. ತ್ರಿವೇಣಿ ರಮೇಶ ಕೊಳಾರ ಹಾಗೂ ತಂಡದವರು ನಾಡಗೀತೆ ಹಾಡಿದರು. ಜಗದೇವಿ ತಿಪಶಟ್ಟಿ ಸ್ವಾಗತಿಸಿದರು. ಚಿಕ್ಕಮಂಗಳೂರಿನ ಶೃತಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.