ತೊಗರಿ ಖರೀದಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹ

Team Udayavani, Feb 25, 2020, 12:20 PM IST

BIDAR-TDY-2

ಭಾಲ್ಕಿ: ಬೀದರ ಜಿಲ್ಲಾದ್ಯಂತ ತೊಗರಿ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್‌ಗೆ 100 ರೂ. ವಸೂಲಿ ಮಾಡುವುದರೊಂದಿಗೆ ಅವ್ಯವಹಾರ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದ ಕರವೇ ಪದಾಧಿಕಾರಿಗಳು, ತೊಗರಿ ಖರೀದಿ ಕೇಂದ್ರ ಆರಂಭ ಮಾಡಿರುವುದು ರೈತರಿಗೆ ಸಂತೋಷವಾದರೂ, ಸಹಕಾರ ಸಂಘದವರು ಬಡ ರೈತರಿಂದ ಪ್ರತಿ ಕ್ವಿಂಟಲ್‌ಗೆ 100 ರೂ. ಪಡೆಯುತ್ತಿರುವುದು ವಿಶಾದದ ಸಂಗತಿಯಾಗಿದೆ. ಈ ಕುರಿತು ಕರವೇ ಪ್ರತಿಭಟನೆ ನಡೆಸಿದರೆ, ಸಹಕಾರ ಸಂಘಗಳ ಕಾರ್ಯದರ್ಶಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಸುಲಿಯುತ್ತಲಿದ್ದಾರೆ. ವೇರ್‌ಹೌಸ್‌ ವ್ಯವಸ್ಥಾಪಕರಿಗೆ, ಹಮಾಲಿ ಕೂಲಿಯಾಳುಗಳಿಗೆ, ಖಾಲಿ ಗೋಣಿಚೀಲ ತರಲು, ವಾಹನ ಚಾಲಕರಿಗೆ ನೀಡಲು  ಹಣ ಬೇಕು. ಅದಕ್ಕಾಗಿ ರೈತರ ಹತ್ತಿರ ಹಣ ಪಡೆಯುತ್ತಿದ್ದೇವೆ ಎಂದು ನೇರವಾಗಿಯೇ ತಿಳಿಸುತ್ತಾ ಸುಲಿಗೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಕಿಡಿ ಕಾರಿದ್ದಾರೆ. ರೈತರ ಹತ್ತಿರ ಹಣ ಪಡೆಯಬಾರದು ಎಂದು ಸರ್ಕಾರದ ಆದೇಶವಿದ್ದರೂ, ಸಹಕಾರ ಸಂಘದ ಪದಾಧಿಕಾರಿಗಳು ರೈತರನ್ನು ರಾಜಾರೋಷವಾಗಿ ಸುಲಿಯತ್ತಲಿದ್ದಾರೆ. ಕಾರಣ ತಕ್ಷಣವೆ ಇತ್ತಕಡೆ ಗಮನ ಹರಿಸಿ ರೈತರ ಸುಲಿಗೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ರೈತರು ಸಾಗಿಸಿದ ಉದ್ದು, ಹೆಸರು ಬೆಳೆಯನ್ನು ಸರ್ಕಾರ ಖರೀದಿಸಿದ್ದು, ಮೂರು ವರ್ಷಗಳಿಂದ ಸರ್ಕಾರದಿಂದ ಕೆಲ ರೈತರಿಗೆ ಹಣ ಜಮಾ ಮಾಡಿಲ್ಲ. ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ರೈತರಿಗೆ ಎಲ್ಲ ಬಾಕಿ ಹಣ ಕೊಡಬೇಕು ಎಂದು ಆಗ್ರಹಿಸಿದರು. ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ, ರಮೇಶ ಚಿದ್ರಿ, ಸಂಗಮೇಶ ಗುಮ್ಮೆ, ಮಾಳಸಕಾಂತ , ಅನೀಲ ದಾಡಗೆ, ಸಂತೋಷ ಪಾಟೀಲ, ಜಗನಾಥ ಪಾತ್ರೆ, ಮಹಾದೇವ ಸೂರ್ಯವಂಶಿ, ಸುದೀಪ ತುಗಾವೆ, ಕಿರಣ ಪಾಟೀಲ, ಬಂಡೆಪ್ಪಾ ಕರಸಣ್ಣಾ, ಮಹೇಶ ಬಿರಾದಾರ, ಓಂ ಬಿಜಿಪಾಟೀಲ, ಅಜಯ ಕರಸಣ್ಣಾ, ಸಂದೀಪ, ನಾಗೇಶ, ಶಿವಕುಮಾರ, ವರುಣ ಸೇರಿದಂತೆ ಮುಂತಾದವರು ಇದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

ಗುತ್ತಿಗೆದಾರ ಸಚಿನ್‌ ಕೇಸ್:‌ ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ

ಗುತ್ತಿಗೆದಾರ ಸಚಿನ್‌ ಕೇಸ್:‌ ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ

4-bidar

Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.