ವಚನ ಸಾಹಿತ್ಯದಿಂದ ಕಾಯಕ ತತ್ವಕ್ಕೆ ಮಹತ್ವ
Team Udayavani, Aug 23, 2018, 1:32 PM IST
ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಎರಡು, ಕಾಯಕ ತತ್ವಕ್ಕೆ ಮಹತ್ವ ನೀಡಿದ ಸಾಹಿತ್ಯಗಳಾಗಿವೆ ಎಂದು ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಗವಿಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದೊಧನ ಸಂಸ್ಥೆ ತಾಲೂಕು ಘಟಕದಿಂದ ಮತ್ತು ವೀರಶೈಲ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಆದಿ ಜಗದ್ಗುರು ರೇಣುಕಾಚಾರ್ಯರರು ಸಿದ್ಧಾಂತ ಶಿಖಾಮಣಿಯಲ್ಲಿ ವೃತ್ತಿ ಚೈತನ್ಯ ರೂಪಿಣೆ ಎಂದು ಬೋ ಧಿಸುವುದರ ಮೂಲಕ ವೃತ್ತಿಯೇ ಪರಮಾತ್ಮ ಎಂದು ಹೇಳಿದರು ಹಾಗೂ ವಚನ ಸಾಹಿತ್ಯದ ಮೂಲ ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಹಾಗಾಗಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕಾಯಕ ತತ್ವಕ್ಕೆ ಮಹತ್ವ ನೀಡಿದ ಸಾಹಿತ್ಯಗಳಾಗಿವೆ ಎಂದು
ಹೇಳಿದರು.
12ನೇ ಶತಮಾನದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಜಗದ್ಗುರು ಘನಲಿಂಗ ರುದ್ರಮುನಿಯವರು ವಚನ ಸಾಹಿತ್ಯದ ಹಸ್ತಪ್ರತಿ ಕಟ್ಟುಗಳನ್ನೆಲ್ಲ ಸಂಗ್ರಹಿಸಿ ಚನ್ನಬಸವಣ್ಣನವರ ಇಚ್ಛೆಯಂತೆ ಉಳವಿಗೆ ತೆಗೆದುಕೊಂಡು ಹೋಗಿ ಚನ್ನಬಸವಣ್ಣನವರಿಗೆ ಒಪ್ಪಿಸಿ ಕಲ್ಯಾಣಕ್ಕೆ ಹಿಂತಿರುಗಿ ಬಂದಿರುವುದು ಬಗ್ಗೆ ಇತಿಹಾಸ ಇದೆ. ಹಾಗಾಗಿ ಈಗ ವಚನ ಸಾಹಿತ್ಯ ಉಳಿಯಲು ಜಗದ್ಗುರು ಘನಲಿಂಗರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಡಾ| ಚಿದಾನಂದ ಚಿಕ್ಕಮಠ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವೀರಶೆಟ್ಟಿ ಮಲ್ಲಶೆಟ್ಟಿ ಮಾತನಾಡಿದರು. ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ವೀರಣ್ಣ ಶೀಲವಂತ, ಪ್ರೊ| ಸೂರ್ಯಕಾಂತ ಶೀಲವಂತ, ಸವಿತಾ ರಮೇಶ, ಸಂತೋಷ ಹುಲಿಕಾಂತಿಮಠ, ಜಿಲ್ಲಾ ಸಂಚಾಲಕ ಸಾಗರ ದಂಡೋತಿ, ಅಮರ ಬಡದಾಳೆ, ಸುನೀಲ ಪತ್ರಿ, ಗಿರೀಶ ಬಿರಾದಾರ, ಸಂತೋಷ ಮಜಗೆ, ಶಾಂತಾ ಹುಲಿಕಾಂತಿಮಠ, ಪಾರ್ವತಿ ರೊಜಾ, ಶಾಂತಾ ಪಾಂಚಾಳ ಇದ್ದರು. ರಾಜ್ಯ ಸಂಚಾಲಕ ಶಿವಯೋಗಿ ಹುಲಿಕಾಂತಮಠ ಸ್ವಾಗತಿಸಿದರು. ಕಾಶಿನಾಥ ಸ್ವಾಮಿ
ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.