ಹುಮನಾಬಾದ: ಪರಿಸರ ಹಾನಿ ಮಾಡುತ್ತಿರುವ ಕೈಗಾರಿಕಾ ಕಾರ್ಖಾನೆಗಳು
Team Udayavani, Oct 18, 2021, 5:32 PM IST
ಹುಮನಾಬಾದ: ಪಟ್ಟಣ ಹೊರವಲಯದ ಅನೇಕ ಕೈಗಾರಿಕಾ ಕಾರ್ಖಾನೆಗಳು ಕಾನೂನು ಮೀರಿ ವಿಷಯುಕ್ತ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪರಿಸರ ಹಾನಿ ಉಂಟು ಮಾಡುತ್ತಿವೆ.
ಹುಮನಾಬಾದ ಸುತ್ತಲ್ಲಿನ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದರು ಕೂಡ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಬೀದರ ಜಿಲ್ಲಾಡಳಿತ, ತಾಲೂಕು ಆಡಳಿತ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಹೆಚ್ಚಾಗಿ ವಿವಿಧ ರಾಸಾಯನಿಕ, ಬಹು ಔಷಧಿಗಳ ಕಚ್ಚಾ ವಸ್ತು ಉತ್ಪಾದನೆ ಸೇರಿದಂತೆ ಇತರೆ ಅನೇಕ ಪದಾರ್ಥಗಳ ಉತ್ಪನಗಳು ಇಲ್ಲಿನ ಕಾರ್ಖಾನೆಗಳಲ್ಲಿ ತಯಾರಿಸುತ್ತವೆ.
ಇಲ್ಲಿ ಯಾವುದೇ ಪರಿಸರ ಮಾಲಿನ್ಯದ ನಿಯಮಗಳು ಯಾರು ಕೂಡ ಪಾಲಿಸುತ್ತಿಲ್ಲ ಎಂಬ ಆರೋಪಗಳು ಹೆಚ್ಚಿವೆ. ಮಳೆಗಾಲದಲ್ಲಿ ನೀರು ಹರಿಯಬೇಕಿದ್ದ ಹಳ್ಳಗಳಲ್ಲಿ ವಿಷಪೂರಿತ ರಾಸಾಯನಿಕ ಹರಿದಾಡುತ್ತಿದೆ. ಈ ಕುರಿತು ಈ ಹಿಂದೆ ಅನೇಕ ಹೋರಾಟಗಳು ನಡೆದರು ಕೂಡ ಯಾವ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಕೂಡ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ ಕಾರ್ಖಾನೆಗಳ ತ್ಯಾಜ್ಯದ ಸಮಸ್ಯೆ ಕುರಿತು ವಿಧಾನ ಸಭೆ ಕಲಾಪದಲ್ಲಿ ಧ್ವನಿ ಎತ್ತಿದರು ಕೂಡ ಇಲ್ಲಿ ಮಾತ್ರ ಯಾವುದೇ ಬದಲಾವಣೆಗಳು ಕಂಡು ಬರುತ್ತಿಲ್ಲ.
ಕೈಗಾರಿಕೆಗಳು ತಮ್ಮ ತ್ಯಾಜ್ಯವನ್ನು ಧುಮ್ಮನಸೂರ್ ಹೊರ ಪ್ರದೇಶದ ಚೀನಕೇರಾ ಕ್ರಾಸ್ ಹತ್ತಿರದ ಆಳದ ಪ್ರದೇಶದಲ್ಲಿ, ಆನೆಕೊಳ್ಳ ನೀರು ಹರಿಯುವ ಪ್ರದೇಶದಲ್ಲಿ ಹಾಗೂ ಲಾಲಧರಿ ಪ್ರದೇಶದ ಭೂಮಿಯೊಂದರಲ್ಲಿ ಅಧಿಕ ಪ್ರಮಾಣದ ತ್ಯಾಜ್ಯ ಸುರಿಯಲಾಗುತ್ತಿದೆ.
ಲಾಲಧರಿ ಕ್ರಾಸ್ ಸಮೀಪದಲ್ಲಿನ ಭೂಮಿಯಲ್ಲಿ ತ್ಯಾಜ್ಯದ ಮೇಲೆ ಮಣ್ಣು ಮುಚ್ಚಿರುವುದು ಕಂಡು ಬಂದಿದೆ. ಮಳೆ ಸುರಿದಂತೆ ಮಣ್ಣು ಜಾರಿ ಚಿಲಗಳಲ್ಲಿ ತುಂಬಿದ ತ್ಯಾಜ್ಯ ಎದ್ದು ಕಾಣುತ್ತಿದೆ. ಇದನು ಗಮನಿಸಿದ ಸಮೀಪದ ತಾಂಡ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲೆಂದರಲ್ಲಿ ಕಾರ್ಖಾನೆಗಳ ತ್ಯಾಜ್ಯ ಎಸೆಯಲಾಗುತ್ತಿದ್ದು, ಜನ-ಜಾನುವಾರುಗಳ ಜೀವದ ಕುರಿತು ಯಾವ ಕಾರ್ಖಾನೆಗಳು ಚಿಂತಿಸುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
–ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.